ವಿಡಿಯೋ
ಪೊಲೀಸರಾಗಿದ್ದು ಶಿಕ್ಷಕರಾಗಿ ಸೈ ಅನ್ನಿಸಿಕೊಂಡ ಪಿಎಸ್ಐ ಶಾಂತಪ್ಪ
ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರ ಮಕ್ಕಳಿಗೆ, ಕರೋನಾ ದೆಸೆಯಿಂದಾಗಿ ಶಿಕ್ಷಣ ಮರೀಚಿಕೆಯಾಗಿತ್ತು. ಮುರುಕಲು ಜೋಪಡಿಗಳ ಒಳಗೆ ಆಕಾಶ ಮುಟ್ಟುವಂತಹ ಕನಸುಗಳನ್ನು ಹೊತ್ತುಕೊಂಡ ಮಕ್ಕಳಿಗೆ ಈ ಕಷ್ಟಕಾಲದಲ್ಲಿ ನೆರವಾದವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿರುವಂತಹ ಶಾಂತಪ್ಪ ಜಡೆಮ್ಮನವರ್ ಅವರು. ವೃತ್ತಿಯಲ್ಲಿ ಪೊಲೀಸರಾದರೂ, ಪ್ರವೃತ್ತಿಯಲ್ಲಿ ಶಿಕ್ಷಕರು ಇವರು.