ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಶನಿವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ಕನಿಷ್ಠ 36 ಕಾರ್ಮಿಕರು ಸುರಂಗದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬ್ರಹ್ಮಖಾಲ್- ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್ಗಾಂವ್ಗೆ ಸಂಪರ್ಕಿಸುವ ಸುರಂಗ ಕುಸಿತಿದ ಸುದ್ದಿ ಬಂದ ತಕ್ಷಣ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಅಧಿಕಾರಿಗಳ ಅಂದಾಜಿನ ಪ್ರಕಾರ, 40 ಕಾರ್ಮಿಕರು ಇದರಲ್ಲಿ ಸಿಲುಕಿದ್ದು, ಸ್ಥಳಾಂತರಿಸಲು 2-3 ದಿನಗಳು ಬೇಕಾಗಬಹುದು. ಸುರಂಗ ತೆರವುಗೊಳಿಸಲು ಯಂತ್ರಗಳನ್ನು ಬಳಸಲಾಗಿದ್ದು, ಆಮ್ಲಜನಕ ಪೈಪ್ಗಳನ್ನು ಒಳಗೆ ಕಳುಹಿಸಲಾಗಿದೆ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.