ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿ, ರಿಲಯನ್ಸ್ ವಿಶ್ವಾದ್ಯಂತ ಎಲ್ಲಾ ಸಾರ್ವಜನಿಕ ಕಂಪನಿಗಳಲ್ಲಿ 53ನೇ ಸ್ಥಾನಕ್ಕೇರಿದೆ. ಭಾರತೀಯ ಕಂಪನಿಗಳಲ್ಲಿ ಮೊದಲ ಸ್ಥಾನದಲ್ಲಿದೆ.
ಈ ವರ್ಷದ ಆರಂಭದಲ್ಲಿ, ಫೋರ್ಬ್ಸ್ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು $ 90.7 ಬಿಲಿಯನ್ ಎಂದು ಅಂದಾಜಿಸಿತು, ಈ ವರ್ಷದ ಬಿಲಿಯನೇರ್ ಪಟ್ಟಿಯಲ್ಲಿ ಅವರನ್ನು ನಂ.10 ಸ್ಥಾನದಲ್ಲಿದ್ದರು.
ಫೋರ್ಬ್ಸ್ ಗ್ಲೋಬಲ್ 2000ರ ಪಟ್ಟಿಯಲ್ಲಿ ಭಾರತೀಯ ಕಂಪನಿಗಳಲ್ಲಿ ಅಗ್ರ ಸ್ಥಾನಕ್ಕೇರಿದ ರಿಲಯನ್ಸ್ ಇಂಡಸ್ಟ್ರೀಸ್ ಪಡೆದುಕೊಂಡರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಂ. 2 ಸ್ಥಾನದಲ್ಲಿದೆ. ಖಾಸಗಿ ವಲಯದ ಬ್ಯಾಂಕ್ಗಳಾದ ICICI ಮತ್ತು HDFC ಭಾರತೀಯ ಕಂಪನಿಗಳ ಜಾಗತಿಕ 2000 ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿವೆ.
ಪಟ್ಟಿಗೆ ಕೆಲವು ಗಮನಾರ್ಹ ಹೊಸಬರು ಸೇರ್ಪಡೆಯಾಗಿದೆ. ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ಒಡೆತನದ ಕಂಪನಿಗಳಾದ, ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್, ಅದಾನಿ ಟ್ರಾನ್ಸ್ಮಿಷನ್ ಲಿಮಿಟೆಡ್ ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಕೂಡ ಫೋರ್ಬ್ಸ್ ಗ್ಲೋಬಲ್ 2000ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ.
ಈ ವರ್ಷದ ಆರಂಭದಲ್ಲಿ, ಗೌತಮ್ ಅದಾನಿ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದರು.