ಹಳ್ಳಿಗಳಿಂದ ಶಾಲೆಗೆ ತೆರಳಲು ಅನನುಕೂಲ ಇರುವ ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳೂ ಶಾಲಾ ಬಸ್ ಖರೀದಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಹೌದು, ರಾಜ್ಯ ಸರ್ಕಾರದಿಂದ ಶಾಲಾ ವಾಹನ ಖರೀದಿಗೆ ಅನುಮತಿ ನೀಡಲಾಗಿದೆ. ಸರ್ಕಾರಿ ಶಾಲೆಗಳ ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರುವುದಕ್ಕೆ ಈ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಶಾಲೆಗಳಿಗೆ ಮಾತ್ರ ಶಾಲಾ-ವಾಹನವನ್ನು ಮಕ್ಕಳನ್ನು ಕರೆತರುವ ಅನುಮತಿ ನೀಡಲಾಗಿದೆ.ಶಾಲಾ- ವಾಹನ ಖರೀದಿಸಲು ತಗಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ಇರುವುದುದಾಗಿ ತಿಳಿಸಿದೆ.ಶಾಲಾ ವಾಹನಕ್ಕೆ, ವಾಹನ ಚಾಲಕರ ವೇತನ ಹಾಗೂ ಪೆಟ್ರೋಲ್, ಡೀಸೆಲ್, ದುರಸ್ಥಿ ವೆಚ್ಚಗಳನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ( SDMC) ಇತರೆ ಅನುದಾನದಡಿ ವೆಚ್ಚ ಭರಿಸುವಂತೆ ಷರತ್ತು ವಿಧಿಸಲಾಗಿದೆ.