ಒಂದೇ ದಿನದಲ್ಲಿ ನಿರೀಕ್ಷಿತ ದ್ವಿತೀಯ ಹಾಗೂ ಸಿಇಟಿ ಫಲಿತಾಂಶ ಹೊರಬಿದ್ದಿದೆ. ಕೊರೋನಾ ನಡುವೆ ಸರ್ಕಾರ ಚಾಲೆಂಜಿಗ್ ಆಗಿ ಪರೀಕ್ಷೆಯನ್ನು ನಡೆಸಿತ್ತು. ಇದೇ ವೇಳೆ ಕಾಮನ್ ಎಂಟ್ರೆಸ್ ಟೆಸ್ಟ್ ಅನ್ನೂ ನಡೆಸಲಾಗಿತ್ತು. ಇದೀಗ ಎರಡರ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷಿತ ದ್ವಿತೀಯ ಪಿಯುಸಿ ಹಾಗೂ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಒಟ್ಟಾರೆ 29.91% ದಷ್ಟು ಫಲಿತಾಂಶ ಬಂದಿದೆ. ಖಾಸಗಿ ವಿದ್ಯಾರ್ಥಿಗಳು, ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿ ಅಭ್ಯರ್ಥಿಗಳ ಫಲಿತಾಂಶ ಹೊರ ಬಿದ್ದಿದೆ. ಒಟ್ಟು 18,414 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 17,470 ಖಾಸಗಿ ವಿದ್ಯಾರ್ಥಿಗಳು, 351 ರಿಪೀಟರ್ಸ್, 592 ಫ್ರೆಶರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ವಿಜ್ಞಾನ ವಿಭಾಗದಲ್ಲಿ 600ಕ್ಕೆ 573 ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 600 ಅಂಕಕ್ಕೆ 592 ಅತಿ ಹೆಚ್ಚು ಅಂಕ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅತಿ ಹೆಚ್ಚು ಅಂಕ ಗಳಿಸಿದ್ದಾರೆ. 18,414 ವಿದ್ಯಾರ್ಥಿಗಳ ಪೈಕಿ 5,507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 556 ಪ್ರೆಶರ್ಸ್, 183 ರಿಪೀಟರ್ಸ್ ಪಾಸ್ ಆಗಿದ್ದಾರೆ. 17,470 ಖಾಸಗಿ ವಿದ್ಯಾರ್ಥಿಗಳ ಪೈಕಿ 4,768 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು 36.72%, ಬಾಲಕರು 26.02% ಪಾಸ್ ಆಗಿದ್ದಾರೆ. ಮತ್ತು ಗ್ರಾಮಾಂತರ ಭಾಗದಲ್ಲಿ 32.59% ಹಾಗೂ ನಗರ ಭಾಗದಲ್ಲಿ 26.62% ಫಲಿತಾಂಶ ಈ ಬಾರಿ ಬಂದಿದೆ.
ದ್ವಿತೀಯ ಪಿಯುಸಿ ಫಲಿತಾಂಶ ದಿನವೇ ಇಂದು ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಮಲ್ಲೇಶ್ವರದ ಕೆಇಎ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ ಸಿಇಟಿ ಪರೀಕ್ಷೆಗೆ 2,01,834 ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ 1,93,867 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕೃಷಿ ಕೋರ್ಸ್ 152518, ಇಂಜಿನಿಯರಿಂಗ್ ಕೋರ್ಸ್ 183231, ಪಶುಸಂಗೋಪನೆ ಕೋರ್ಸ್ 155760, ನ್ಯಾಚುರೋಪತಿ 186638, ಯೋಗ 15590 ವರೆಗೆ ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. ಐದು ವಿಭಾಗದಲ್ಲಿ ಮೊದಲ ರ್ಯಾಂಕ್ ಮೈಸೂರಿನ ಮೇಘನ್ ಹೆಚ್ ಕೆ ಪಡೆದು ಸಾಧನೆಗೈದಿದ್ದಾರೆ. ಇನ್ನು ಮೂರು ವಿಭಾಗದಲ್ಲಿ ಮೂರು ರ್ಯಾಂಕ್ ನೊಳಗೆ ಮಂಗಳೂರಿನ ವಿದ್ಯಾರ್ಥಿ ರೀತಮ್ ಸಾಧನೆ ಮಾಡಿದ್ದಾರೆ.
ಇಂಜಿನಿಯರಿಂಗ್ ಮೊದಲ ಮೂರು ರ್ಯಾಂಕ್ :
ಮೇಘನ್ ಹೆಚ್.ಕೆ , ಮೈಸೂರು – ಮೊದಲ ರ್ಯಾಂಕ್
ಪ್ರೇಮಂಕುರ್, ಬೆಂಗಳೂರು – ಎರಡನೇ ರ್ಯಾಂಕ್
ಬಿಎಸ್ ಅನಿರುಧ್, ಬೆಂಗಳೂರು – ತೃತೀಯ ರ್ಯಾಂಕ್
ಎಗ್ರಿಕಲ್ಚರ್ ವಿಭಾಗ :
ಮೇಘನ್, ಹೆಚ್ .ಕೆ- ಮೊದಲ ರ್ಯಾಂಕ್
ರೀತಮ, ಬಿ- ಎರಡನೇ ರ್ಯಾಂಕ್
ಅದಿತ್ಯ ಪ್ರಭಾಶ್- ಮೂರನೇ ರ್ಯಾಂಕ್
ವೆಟರ್ನರಿ ಸೈನ್ಸ್ ವಿಭಾಗ :
ಮೇಘನ್ ಹೆಚ್.ಕೆ- ಮೊದಲ ರ್ಯಾಂಕ್
ವರುಣ್ ಆದಿತ್ಯ- ಎರಡನೇ ರ್ಯಾಂಕ್
ರೀತಮ್ ಬಿ- ಮೂರನೇ ರ್ಯಾಂಕ್
ಬಿ.ಫಾರ್ಮ್ ವಿಭಾಗ :
ಮೇಘನ್ ಹೆಚ್.ಕೆ- ಮೊದಲ ರ್ಯಾಂಕ್
ಪ್ರೇಮಾಂಕರ್ – ಎರಡನೇ ರ್ಯಾಂಕ್
ಬಿಎಸ್.ಅನಿರುದ್ದ್- ಮೂರನೇ ರ್ಯಾಂಕ್
ನ್ಯಾಚರೋಪತಿ ವಿಭಾಗ :
ಮೇಘನ್ ಹೆಚ್.ಕೆ – ಮೊದಲ ರ್ಯಾಂಕ್
ವರುಣ್ ಆದಿತ್ಯ- ಎರಡನೇ ರ್ಯಾಂಕ್
ರೀತಮ್ ಬಿ- ಮೂರನೇ ರ್ಯಾಂಕ್
55 ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು 5235 ಇದ್ರೆ, 60 ಅಂಕ ಪಡೆದ ವಿದ್ಯಾರ್ಥಿಗಳು 59 ವಿದ್ಯಾರ್ಥಿಗಳು. ಈ ಬಾರಿ 6 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಭೌತಶಾಸ್ತ್ರದಲ್ಲಿ ಮೂರು, ಗಣಿತದಲ್ಲಿ 3 ಮೂರು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. 54 ಸಾವಿರ ಸೀಟ್ ಗಳನ್ನ ಸಿಇಟಿಗಳ ಮೂಲಕ ಭರ್ತಿ ಮಾಡಲು ತೀರ್ಮಾನ ಮಾಡಿದ್ದು, 1.70 ಲಕ್ಷ ಸೀಟ್ ಗಳು ಲಭ್ಯವಿರಲಿದೆ. ಇದರಲ್ಲಿ 7 ಸಾವಿರ ವಿದ್ಯಾರ್ಥಿಗಳ ರ್ಯಾಂಕ್ ತಡೆಹಿಡಿಯಲಾಗಿದೆ. ಆರೂವರೆ ಸಾವಿರ ವಿದ್ಯಾರ್ಥಿಗಳು ಸರಿಯಾದ ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ತಿಳಿಸಿದರು. ಅಂದಹಾಗೆ, ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ ಪ್ರಥಮ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಆಧರಿಸಿಫಲಿತಾಂಶ ನೀಡಲಾಗಿತ್ತು. ಆದರೆ ಕೆಲ ವಿದ್ಯಾರ್ಥಿಗಳು ಆ ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದಿದ್ದರು. ಇನ್ನು ಸಿಇಟಿ ಪರೀಕ್ಷೆ, ಆಗಸ್ಟ್ 28, 29, 30ರಂದು ನಡೆದಿತ್ತು. ಸಿಇಟಿಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದಾರೆ. 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದರು.