ಕ್ಷುಲಕ ಕಾರಣಕ್ಕೆ ದಲಿತ ದಂಪತಿ ಹಾಗೂ ಅವರ ಪುತ್ರನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಡಮೊಹ್ ಜಿಲ್ಲೆಯಲ್ಲಿ ನಡೆದಿದೆ.
6 ಜನರ ಗುಂಪು ಗುಂಡಿನ ದಾಳಿ ನಡೆಸಿದ್ದು, ದಂಪತಿ ಹಾಗೂ ಅವರ ಪುತ್ರ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ದೇವರನ್ ಗ್ರಾಮದ ಡೆಹಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗುಂಡಿಕ್ಕಿ ಕೊಲೆ ಮಾಡಿದ 6 ಮಂದಿ ತಲೆಮರೆಸಿಕೊಂಡಿದ್ದು, 60 ವರ್ಷದ ಪತಿ, 58 ವರ್ಷದ ಪತ್ನಿ ಹಾಗೂ 32 ವರ್ಷದ ಮಗ ಮೃತಪಟ್ಟಿದ್ದಾರೆ.