ಯತ್ನಾಳ್,ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನಳೀನ್‌ ಕುಮಾರ್‌ ಕಟೀಲ್ ಅಸಮರ್ಥ ನಾಯಕ –ಸಿದ್ದರಾಮಯ್ಯ

ಸಿಎಂ ಯಡಿಯೂರಪ್ಪ ಪದಚ್ಯುತಿಯ ಪ್ರಯತ್ನದಲ್ಲಿ ಯತ್ನಾಳ್‌ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಜೊತೆಯಲ್ಲಿ ಬಿ.ಎಲ್‌ ಸಂತೋಷ್‌ ಕೂಡಾ ಷಾಮೀಲಾಗಿದ್ದಾರೆ. ಈ ಕಾರಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ಮೂಕಪ್ರೇಕ್ಷಕನಾಗಿ ಕೂತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಯತ್ನಾಳ್,ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನಳೀನ್‌ ಕುಮಾರ್‌ ಕಟೀಲ್ ಅಸಮರ್ಥ ನಾಯಕ –ಸಿದ್ದರಾಮಯ್ಯ

ಸಿಎಂ ಯಡಿಯೂರಪ್ಪ, ಬಿ.ವೈ ವಿಜೇಂದ್ರ ಹಾಗು ಬಿಜೆಪಿ ಪಕ್ಷದ ಕೆಲವು ನಾಯಕರ ವಿರುದ್ಧ ಸ್ವತಃ ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಇತ್ತೀಚೆಗೆ ಕೆಲವು ಕುತೂಹಲಕಾರಿ ಹೇಳಿಕೆ ನೀಡಿದ್ದು, ಇದು ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಏಪ್ರಿಲ್‌ 7 ರಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಯತ್ನಾಳ್‌ ಯಡಿಯೂರಪ್ಪ ಪದಚ್ಯುತಿ ವಿಚಾರ ಪ್ರಸ್ತಾಪಿಸಿದ್ದರು, ಈ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಪಕ್ಷದ ನಾಯಕರನ್ನು ಟ್ವಿಟರ್‌ ಮೂಲಕ ಕಾಲೆಳೆದಿದ್ದಾರೆ.

ಯತ್ನಾಳ್,ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನಳೀನ್‌ ಕುಮಾರ್‌ ಕಟೀಲ್ ಅಸಮರ್ಥ ನಾಯಕ –ಸಿದ್ದರಾಮಯ್ಯ
ನೋಟೀಸ್‌ ನೀಡಿ‌ 60 ದಿನವಾದರೂ, ಪಕ್ಷದಿಂದ ನನ್ನ ವಿರುದ್ಧ ಏನೂ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ -ಯತ್ನಾಳ್‌

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ದಿನನಿತ್ಯ ಹೇಳಿಕೆ ನೀಡಿ ಬಹಿರಂಗ ಸಮರ ಸಾರಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಮತ್ತು ಸಚಿವ ಈಶ್ವರಪ್ಪ ವಿರುದ್ದ ಕ್ರಮಕೈಗೊಳ್ಳಲಾಗದ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಒಬ್ಬ ಅಸಮರ್ಥ ನಾಯಕ ಎಂದು ವ್ಯಂಗ್ಯಮಾಡಿದ್ದಾರೆ. ಇಂತಹವರಿಗೆ ವಿರೋಧ ಪಕ್ಷದ ನಾಯಕರ ಬಗ್ಗೆ‌ ಮಾತನಾಡುವ ಯಾವ ಯೋಗ್ಯತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿಯ ಪ್ರಯತ್ನದಲ್ಲಿ ಯತ್ನಾಳ್‌ ಮತ್ತು ಸಚಿವ ಕೆ.ಎಸ್.ಈಶ್ವರಪ್ಪನವರ ಜೊತೆಯಲ್ಲಿ ಬಿ.ಎಲ್‌ ಸಂತೋಷ್‌ ಕೂಡಾ ಷಾಮೀಲಾಗಿದ್ದಾರೆ. ಈ ಕಾರಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ಮೂಕಪ್ರೇಕ್ಷಕನಾಗಿ ಕೂತಿದೆ ಎಂದಿದ್ದಾರೆ.

ಯತ್ನಾಳ್,ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನಳೀನ್‌ ಕುಮಾರ್‌ ಕಟೀಲ್ ಅಸಮರ್ಥ ನಾಯಕ –ಸಿದ್ದರಾಮಯ್ಯ
ಯತ್ನಾಳ್‌ ವಿರುದ್ದ ಸಿಡಿದೆದ್ದ ಬಿಜೆಪಿ ನಾಯಕರು; ಏಕವಚನದಲ್ಲಿ ವಾಗ್ದಾಳಿ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com