ಗದಗ್ ಜಿಲ್ಲೆಯ ಮಹಿಳೆ ಸೇನೆಗೆ: ಕವಿತಾ -BSF ಸೇರಿದ ಜಿಲ್ಲೆಯ ಮೊದಲ ಮಹಿಳೆ

“ಮೊದಲು ಮಗನನ್ನು ಸೇನೆಗೆ ಸೇರಿಸಿದ ಖುಷಿ, ಹೆಮ್ಮೆ ಇತ್ತು. ಈಗ ಮಗಳು ಜಿಲ್ಲೆಯಲ್ಲಿಯೇ ಮೊದಲು ಮಹಿಳೆ ಸೇನೆ ಸೇರಿದವಳು. ಬಹಳಷ್ಟು ಜನರು ಅಭಿನಂದಿಸುತ್ತಿದ್ದಾರೆ. ಮಗಳನ್ನು ಹೆತ್ತ ಅತ್ಯಂತ ಹೆಮ್ಮೆಯ ತಂದೆ ಎಂದು ಸಂತಸದಿಂದ ಹೇಳಲು ಬಯಸುತ್ತೇನೆ” ಎಂದು ತಂದೆ ಮಾಗೊಂಡಪ್ಪ ಮಾತು.
ಗದಗ್ ಜಿಲ್ಲೆಯ ಮಹಿಳೆ ಸೇನೆಗೆ: ಕವಿತಾ -BSF ಸೇರಿದ ಜಿಲ್ಲೆಯ ಮೊದಲ ಮಹಿಳೆ

ಗದಗ್ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಎಂಬ ಗ್ರಾಮದ ಮಹಿಳೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಗೆ ಆಯ್ಕೆಯಾಗಿದ್ದಾಳೆ. ಕವಿತಾ ಹವಾಜಿ ಎಂಬ 23 ವರ್ಷದ ಮಹಿಳೆ ಗದಗ್ ಜಿಲ್ಲೆಯಲ್ಲಿಯೇ ಬಿಎಸ್ ಎಫ್ ಸೇರುವ ಮೊದಲ ಮಹಿಳೆ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದೊಂದು ಚಿಕ್ಕ ಗ್ರಾಮ, ಮಹಿಳೆಯರು ಹೆಚ್ಚಾಗಿ ಒಕ್ಕಲುತನ ಮಾಡುವಂತಹ ಕೃಷಿ ಕೇಂದ್ರಿತ ಪ್ರದೇಶ ಎನ್ನಬಹುದು. ಕವಿತಾ ಮೊದಲಿನಿಂದಲೂ ಅವರ ಅಣ್ಣ ಸಿದ್ದಪ್ಪನನ್ನು ನೋಡಿ ಉತ್ಸುಕಳಾಗಿದ್ದಳು. ಸಿದ್ದಪ್ಪ ಕಳೆದ ಏಳು ವರ್ಷದಿಂದ (CRPF) ನಲ್ಲಿದ್ದಾರೆ. ಇವರು ಓದಿದ್ದು ಬಿ ಎ ಬಿಎಡ್. ಆದರೂ ಬಿಎಸ್ ಎಫ್ ಸೇರಬೇಕು ಎಂಬ ಮನದ ಇಂಗಿತವನ್ನು ತಂದೆ, ತಾಯಿ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡರು. ಎಲ್ಲರೂ ಖುಷಿಯಿಂದ ಹುರಿದುಂಬಿಸಿದರು.

ಇವರ ತಂದೆ ಮಾಗೊಂಡಪ್ಪ ಲಾರಿ ಚಾಲಕರು. ಮೊದಲ ಮಗ ಸಿ ಆರ್ ಪಿ ಎಫ್ ನೆಂದು ಹೆಮ್ಮೆಪಡುತ್ತಿದ್ದರು. ಈಗ ಮಗಳು ಜಿಲ್ಲೆಯಲ್ಲಿಯೇ ಮೊದಲ ಮಹಿಳೆ ಎಂಬ ಸಂತಸ ದುಪ್ಪಟ್ಟಾಗಿದೆ. ಈ ಖುಷಿಯನ್ನು ಈಡೀ ಗ್ರಾಮವೇ ಆಚರಿಸುತ್ತಿದೆ.

ಕವಿತಾ ಕಾಲೇಜಿನ ದಿನಗಳಿಂದಲೂ ರೂಪಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಪೊಲೀಸ್ ಹಾಗೂ ಸೈನಿಕ ಪಾತ್ರಗಳನ್ನು ಮಾಡಿದ್ದರು. ಎನ್‌ಸಿಸಿ ಯನ್ನು ಸೇರಿದ್ದರು. ಹೀಗೆ ವಿದ್ಯಾರ್ಥಿ ಇದ್ದಾಗಲೇ ದೇಶ ಸೇವೆ ಯ ತುಡಿತ ಮನದ ಮೂಲೆಯಲ್ಲಿತ್ತು. ಇಂದು ಅದು ಸಾಕಾರವಾಗಿದೆ ಎನ್ನುತ್ತಾರೆ ಇವರ ತಾಯಿ ಲಕ್ಷ್ಮವ್ವ ಅವರು.

ಕವಿತಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ, “ಶಿಕ್ಷಕಿಯಾಗಬೇಕೆಂದು ಬಿಎಡ್ ಮಾಡಿದೆ. ಆದರೆ ಚಿಕ್ಕಂದಿನಿಂದಲೂ ಸೇನೆಯ ಬಗ್ಗೆ ಅಪಾರ ಗೌರವವಿತ್ತು. ನಾನು ಸೇನೆ ಸೇರಲು ಅಮ್ಮ, ಅಪ್ಪ, ಅಣ್ಣ ಹಾಗೂ ಗೆಳತಿಯರೂ ಎಲ್ಲರೂ ಪ್ರೇರಣೆ. ಮೊದ ಮೊದಲು ಹುಡುಗರಂತೆ ಟ್ರ್ಯಾಕ್ ಸೂಟ್ ಧರಿಸಿದಾಗ ಎನೋ ಮುಜುಗರ. ನಂತರ ಅದನ್ನೇ ಸವಾಲಾಗಿ ಸ್ವೀಕರಿಸಿದೆ. ದೈಹಿಕ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಕಡಿಮೆ ಅವಧಿಯಲ್ಲಿಯೇ ಹೆಚ್ಚು ಓಡಿ ಸೇನೆಗೆ ಆಯ್ಕೆಯಾದೆ. ದೇಶ ಸೇವೆ ಮಾಡಲು ಸಿಕ್ಕ ಸುಯೋಗವನ್ನು ಎಂದೂ ಮರೆಯುದಿಲ್ಲ. ನನ್ನ ಜೀವನದಲ್ಲಿಯೇ ಮರೆಯಲಾರದ ಕ್ಷಣವದು”.

ತಂದೆ ಮಾಗೊಂಡಪ್ಪ ಹೇಳಿದರು, “ಮೊದಲು ಮಗನನ್ನು ಸೇನೆಗೆ ಸೇರಿಸಿದ ಖುಷಿ, ಹೆಮ್ಮೆ ಇತ್ತು. ಈಗ ಮಗಳು ಜಿಲ್ಲೆಯಲ್ಲಿಯೇ ಮೊದಲು ಮಹಿಳೆ ಸೇನೆ ಸೇರಿದವಳು. ಬಹಳಷ್ಟು ಜನರು ಅಭಿನಂದಿಸುತ್ತಿದ್ದಾರೆ. ಮಗಳನ್ನು ಹೆತ್ತ ಅತ್ಯಂತ ಹೆಮ್ಮೆಯ ತಂದೆ ಎಂದು ಸಂತಸದಿಂದ ಹೇಳಲು ಬಯಸುತ್ತೇನೆ”.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com