ನೋಟೀಸ್‌ ನೀಡಿ‌ 60 ದಿನವಾದರೂ, ಪಕ್ಷದಿಂದ ನನ್ನ ವಿರುದ್ಧ ಏನೂ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ -ಯತ್ನಾಳ್‌

ಸೂರ್ಯಚಂದ್ರ ಇರುವವರೆಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತೇನೆಂದರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಯತ್ನಾಳ್ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಂತೆಯೇ ಯಡಿಯೂರಪ್ಪಗೆ 2 ವರ್ಷ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಎರಡು ವರ್ಷ ಮುಖ್ಯಮಂತ್ರಿ ಸ್ಥಾನ ನೀಡಿದ್ದೇ ಹೆಚ್ಚಾಯಿತು ಎಂದು ಕಿಡಿಕಾರಿದ್ದಾರೆ.
ನೋಟೀಸ್‌ ನೀಡಿ‌ 60 ದಿನವಾದರೂ, ಪಕ್ಷದಿಂದ ನನ್ನ ವಿರುದ್ಧ ಏನೂ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ -ಯತ್ನಾಳ್‌

ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ಪದೇ- ಪದೇ ತಮ್ಮ ಪಕ್ಷದ ನಾಯಕರ ವಿರುದ್ಧವೇ ಗುಡುಗುತ್ತಿದ್ದು, ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್‌ ಕೆಲವೇ ದಿನಗಳಲ್ಲಿ ಯಡಿಯೂರಪ್ಪ, ವಿಜಯೇಂದ್ರನ ಬಣ್ಣ ಬಯಲಾಗಲಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪಕ್ಷದಿಂದ 60 ದಿನಗಳ ಹಿಂದೆಯೇ ರಾಜೀನಾಮೆ ಕೊಟ್ಟಿದ್ದರು ಯಡಿಯೂರಪ್ಪ ವಿರುದ್ಧ ಮಾತನಾಡಿದಕ್ಕಾಗಿ ನನಗೆ ಪಕ್ಷದಿಂದ 60 ದಿನಗಳ ಹಿಂದೆಯೇ ನೊಟೀಸ್ ಕೊಟ್ಟಿದ್ದರಾದರೂ ನನ್ನ ಮೇಲೆ ಇದುವರೆಗೂ ಕ್ರಮ ಜರುಗಿಸಲಾಗಲಿಲ್ಲ. ನನ್ನ ಹಿಂದೆ ದೊಡ್ಡ ಶಕ್ತಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿಯ ನಿಷ್ಠಾವಂತ ಶಾಸಕರು ನನ್ನ ಪರ ಇದ್ದಾರೆ. ಸೂರ್ಯಚಂದ್ರ ಇರುವವರೆಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತೇನೆಂದರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಯತ್ನಾಳ್ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಂತೆಯೇ ಯಡಿಯೂರಪ್ಪಗೆ 2 ವರ್ಷ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಎರಡು ವರ್ಷ ಮುಖ್ಯಮಂತ್ರಿ ಸ್ಥಾನ ನೀಡಿದ್ದೇ ಹೆಚ್ಚಾಯಿತು ಎಂದು ಕಿಡಿಕಾರಿದ್ದಾರೆ.

ಏ.17 ರ ನಂತರ ಪಕ್ಷದಲ್ಲಿ ಹೆಚ್ಚು ಮಂದಿ ಯಡಿಯೂರಪ್ಪ ವಿರುದ್ಧ ರೊಚ್ಚಿಗೇಳಲಿದ್ದಾರೆ. ಮೇ 2 ರ ನಂತರ ಯಡಿಯೂರಪ್ಪ ಬದಲಾವಣೆ ಆಗುವುದು ಗ್ಯಾರಂಟಿ ಎಂದ ಯತ್ನಾಳ್‌ ಪಕ್ಷ ಉಳಿಯ ಬೇಕೆಂದರೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆಯ ಬೇಕೆಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಷ್ಟು ಲೂಟಿ ಮಾಡಿದ್ದಾನೆಂಬುವುದು ಸ್ಪಲ್ಪ ದಿನದಲ್ಲಿಯೇ ಗೊತ್ತಾಗುತ್ತದೆ. ಫೆಡರಲ್ ಬ್ಯಾಂಕ್ ವ್ಯವಹಾರದಲ್ಲಿ ವಿಜಯೇಂದ್ರ ಅವರನ್ನು ಜಾರಿ ನಿರ್ದೇಶನಾಲಯದವರು ಕರೆದುಕೊಂಡು ಹೋಗಿಲ್ಲ ಎಂದು ಹೇಳಲಿ. ಡಿಕೆಶಿಯನ್ನು ಇಡಿ ಅಧಿಕಾರಿಗಳು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದರಲ್ಲ. ಅಲ್ಲಿಗೆ ವಿಜಯೇಂದ್ರರನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಅಪ್ಪ, ಮಗನ ನಿಜಬಣ್ಣ ಸ್ವಲ್ಪದಿನದಲ್ಲಿಯೇ ಬಯಲಾಗಲಿದೆ ಎಂಬ ಕುತೂಹಲಕಾರಿ ಹೇಳಿಕೆ ಕೊಟ್ಟಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com