ಜಿಮ್‌ ತೆರೆಯಲು ಅವಕಾಶ, ಸಿನೆಮಾ ಮಂದಿರಗಳ ನಿರ್ಬಂಧ ತೆರವು: ಮಾರ್ಗಸೂಚಿಯಲ್ಲಿ ತಿದ್ದುಪಡಿ ತಂದ ಸರ್ಕಾರ

ಜಿಮ್‌ ತೆರೆಯಲು ಅವಕಾಶ, ಸಿನೆಮಾ ಮಂದಿರಗಳ ನಿರ್ಬಂಧ ತೆರವು: ಮಾರ್ಗಸೂಚಿಯಲ್ಲಿ ತಿದ್ದುಪಡಿ ತಂದ ಸರ್ಕಾರ

ಎರಡು ದಿನಗಳ ಹಿಂದೆ ಪ್ರಕಟಿಸಲಾಗಿದ್ದ ಮಾರ್ಗಸೂಚಿಯಲ್ಲಿ ಜಿಮ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು. ಆದರೆ, ಇದರಿಂದ ಕಂಗಾಲಾದ ಜಿಮ್‌ ಮಾಲೀಕರು ಹಾಗೂ ತರಬೇತುದಾರರು, ಜಿಮ್‌ಗಳಿಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿಗಳನ್ನು ಸಲ್ಲಿಸಿದ್ದರು.

ಕರೊನಾ ಸೋಂಕಿನ ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊರಡಿಸಲಾಗಿದ್ದ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಯನ್ನು ಕರ್ನಾಟಕ ಸರ್ಕಾರ ಭಾನುವಾರ ಪ್ರಕಟಿಸಿದೆ. ಜಿಮ್‌ಗಳಲ್ಲಿ ಶೇಕಡ 50 ರಷ್ಟು ಜನರಿಗೆ ವ್ಯಾಯಾಮ ಮಾಡಲು ಅವಕಾಶ ಕಲ್ಪಿಸಿ ಅನುಮತಿ ನೀಡಲಾಗಿದೆ. ಹಾಗೂ ಚಿತ್ರಮಂದಿರಗಳಿಗೆ ವಿಧಿಸಿದ್ದ 50% ನಿರ್ಬಂಧವನ್ನು ಸರ್ಕಾರ ಎಪ್ರಿಲ್‌ 7 ರವರೆಗೆ ಸಡಿಲಿಸಿದೆ.

ಜಿಮ್‌ ತೆರೆಯಲು ಅವಕಾಶ, ಸಿನೆಮಾ ಮಂದಿರಗಳ ನಿರ್ಬಂಧ ತೆರವು: ಮಾರ್ಗಸೂಚಿಯಲ್ಲಿ ತಿದ್ದುಪಡಿ ತಂದ ಸರ್ಕಾರ
ಪ್ರೇಕ್ಷಕರಿಗೆ ಮಿತಿ ಹೇರಿದ ಸರ್ಕಾರ: ಸ್ಯಾಂಡಲ್‌ವುಡ್‌ ಅಸಮಾಧಾನ

ಎರಡು ದಿನಗಳ ಹಿಂದೆ ಪ್ರಕಟಿಸಲಾಗಿದ್ದ ಮಾರ್ಗಸೂಚಿಯಲ್ಲಿ ಜಿಮ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು. ಆದರೆ, ಇದರಿಂದ ಕಂಗಾಲಾದ ಜಿಮ್‌ ಮಾಲೀಕರು ಹಾಗೂ ತರಬೇತುದಾರರು, ಜಿಮ್‌ಗಳಿಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿಗಳನ್ನು ಸಲ್ಲಿಸಿದ್ದರು. ಅದರ ಬೆನ್ನಲ್ಲೇ, ಈ ಆದೇಶ ಪ್ರಕಟಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜಿಮ್‌ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದು, ಒಟ್ಟು ಜಿಮ್‌ ಸಾಮರ್ಥ್ಯದಲ್ಲಿ ಶೇ 50ಕ್ಕಿಂತ ಹೆಚ್ಚು ಜನರು ಒಂದೇ ಸಮಯದಲ್ಲಿ ಸೇರುವಂತಿಲ್ಲ. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಪೂರೈಕೆ ಹಾಗೂ ಪ್ರತಿ ಬಳಕೆಯ ನಂತರ ಜಿಮ್‌ ಸಲಕರಣೆಗಳನ್ನು ಶುಚಿಗೊಳಿಸುವಂತೆ ಸೂಚಿಸಲಾಗಿದೆ.

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್‌, ಮತ್ತು ಧಾರವಾಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ. ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆಯ ಶೇ.50 ರಷ್ಟು ಮೀರುವಂತಿಲ್ಲ ಎಂದು ಏಪ್ರಿಲ್‌ 2ರಂದು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಆದೇಶಿಸಲಾಗಿತ್ತು. ,

ಜಿಮ್‌ ತೆರೆಯಲು ಅವಕಾಶ, ಸಿನೆಮಾ ಮಂದಿರಗಳ ನಿರ್ಬಂಧ ತೆರವು: ಮಾರ್ಗಸೂಚಿಯಲ್ಲಿ ತಿದ್ದುಪಡಿ ತಂದ ಸರ್ಕಾರ
ಕೋವಿಡ್ 2ನೇ ಅಲೆ: ಸಾಮೂಹಿಕ ಪ್ರಾರ್ಥನೆ, ಜಿಮ್‌, ಸಾರ್ವಜನಿಕ ಸಭೆಗಳಿಗೆ ನಿರ್ಬಂಧ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com