ಸಿ.ಡಿ ಪ್ರಕರಣದ ಯುವತಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ: ಮಾಜಿ ಸಚಿವ ಡಿ ಸುಧಾಕರ್ ಸ್ಪಷ್ಟಣೆ

ಎಸ್‌ಐಟಿ ತನಿಖೆ ವೇಳೆ ಮಾಜಿ ಸಚಿವ ಡಿ ಸುಧಾಕರ್‌ ಜೊತೆಗೆ ಸಿ.ಡಿ ಪ್ರಕರಣದ ಯುವತಿಗೆ ಸಂಬಂಧವಿದೆಯೆಂಬ ಮಾಹಿತಿ ಹೊರಬಂದಿತ್ತು.
ಸಿ.ಡಿ ಪ್ರಕರಣದ ಯುವತಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ: ಮಾಜಿ ಸಚಿವ ಡಿ ಸುಧಾಕರ್ ಸ್ಪಷ್ಟಣೆ

ರಮೇಶ್‌ ಜಾರಕಿಹೊಳಿಯವರಿಗೆ ಸೇರಿದೆಯೆನ್ನಲಾದ ಅಶ್ಲೀಲ ಸಿ.ಡಿ ಪ್ರಕರಣಗಳ ರಾದ್ಧಾಂತ ಇನ್ನೂ ತಣ್ಣಗಾಗುವ ಹೊತ್ತಿಗೆ ಕಾಂಗ್ರೆಸ್‌ ನ ಇನ್ನೊರ್ವ ಮುಖಂಡನ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಎಸ್‌ಐಟಿ ತನಿಖೆ ವೇಳೆ ಮಾಜಿ ಸಚಿವ ಡಿ ಸುಧಾಕರ್‌ ಜೊತೆಗೆ ಸಿ.ಡಿ ಪ್ರಕರಣದ ಯುವತಿಗೆ ಸಂಬಂಧವಿದೆಯೆಂಬ ಮಾಹಿತಿ ಹೊರಬಿದ್ದಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದರ ಬೆನ್ನಲ್ಲೇ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಯಿಸಿರುವ ಡಿ ಸುಧಾಕರ್‌, ಸಿ.ಡಿ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿಕೊಂಡಿದ್ದು ಕಂಡು ಆಶ್ಚರ್ಯವಾಗಿದೆ. ನನಗೂ ಮತ್ತು ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ತಿಳಿಸಿದ್ದಾರೆ.

'ಸಿ.ಡಿ ಪ್ರಕಾರಣದಲ್ಲಿರುವ ಯುವತಿಗೆ ಹಣ ವರ್ಗಾವಣೆ ಮಾಡಿದ್ದೇನೆ ಎಂಬುದು ಸುಳ್ಳು. ನಾನು ಯಾರಿಗೂ ಹಣ ನೀಡಿಲ್ಲ. ಎಸ್ಐಟಿ ತನಿಖೆಗೆ ಕರೆದರೆ ಸಹಕರಿಸುವೆ' ಎಂದು ಹೇಳಿದ್ದಾರೆ.

ಸಿ.ಡಿ ಪ್ರಕರಣದ ಯುವತಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ: ಮಾಜಿ ಸಚಿವ ಡಿ ಸುಧಾಕರ್ ಸ್ಪಷ್ಟಣೆ
ಸಿ.ಡಿ ಪ್ರಕರಣ: ಎಸ್‌ಐಟಿ ಮುಂದೆ ಹಾಜರಾದ ರಮೇಶ್‌ ಜಾರಕಿಹೊಳಿ

'ನನಗೆ ನಿತ್ಯ ಅನೇಕ ಜನರು ಕರೆ ಮಾಡುತ್ತಿರುತ್ತಾರೆ. ಯಾರು ಕರೆ ಮಾಡಿದ್ದಾರೆ ಎಂಬುದು ಅನೇಕ ಬಾರಿ ಗೊತ್ತಾಗುವುದಿಲ್ಲ. ನನಗೆ ಭಯ ಇದ್ದಿದ್ದರೆ ಮೊದಲೇ ನ್ಯಾಯಾಲಯದ ಮೊರೆ ಹೊಗುತ್ತಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣಕ್ಕೆ ಇಂತಹ ಪ್ರಕರಣದಲ್ಲಿ ಸಿಲುಕಿಸುವುದು ತಪ್ಪು' ಎಂದು ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ.

ಸಿ.ಡಿ ಪ್ರಕರಣದ ಯುವತಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ: ಮಾಜಿ ಸಚಿವ ಡಿ ಸುಧಾಕರ್ ಸ್ಪಷ್ಟಣೆ
ಸಿ.ಡಿ ಪ್ರಕರಣ: ಯುವತಿಯನ್ನ ನಾನು ಭೇಟಿ ಮಾಡಿಲ್ಲ –ಡಿ.ಕೆ ಶಿವಕುಮಾರ್

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com