ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ: ಸಚಿವ ಕೆ ಎಸ್ ಈಶ್ವರಪ್ಪ

ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ. ಬಹಳಷ್ಟು ಪಕ್ಷದ ನಾಯಕರು ದೂರವಾಣಿ ಕರೆ ಮಾಡಿ ನನಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷ ಮತ್ತು ಸರ್ಕಾರದ ಹಿತದಿಂದ ನಿಮ್ಮ ಪ್ರಯತ್ನ ಸರಿ ಇದೆ ಎಂದಿದ್ದಾರೆ
ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ: ಸಚಿವ ಕೆ ಎಸ್ ಈಶ್ವರಪ್ಪ

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ರಾಜ್ಯಪಾಲರು ಮತ್ತು ಪಕ್ಷದ ಪ್ರಮುಖರಿಗೆ ತಾವು ಬರೆದ ಪತ್ರದ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, ಯಡಿಯೂರಪ್ಪ ರಾಜೀನಾಮೆ ನೀಡುವುದೂ ಇಲ್ಲ; ಸಿದ್ದರಾಮಯ್ಯ ಸಿಎಂ ಆಗುವುದೂ ಇಲ್ಲ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ: ಸಚಿವ ಕೆ ಎಸ್ ಈಶ್ವರಪ್ಪ
ಈಶ್ವರಪ್ಪ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಶಿವಮೊಗ್ಗದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದಲ್ಲಿ ಕೆಲವು ಆಡಳಿತಾತ್ಮಕ ಸಮಸ್ಯೆಗಳ ಹಿನ್ನೆಲೆಯಲ್ಲಿ ತಾವು ಪತ್ರ ಬರೆದಿದ್ದು, ಅದರರ್ಥ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದಲ್ಲ. ನಮ್ಮ ನಡುವಿನ ಆ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಹಾಗಾಗಿ ವಿರೋಧ ಪಕ್ಷ ಕಾಂಗ್ರೆಸ್ಸಿನವರಿಗೆ ಬಿಜೆಪಿಯ ಹುಳುಕೂ ಸಿಗುವುದಿಲ್ಲ, ಬೆಳಕೂ ಸಿಗುವುದಿಲ್ಲ. ನಾವು ಸಂಘಟನೆಯ ದೃಷ್ಟಿಯಿಂದ ಒಗ್ಗಟ್ಟಾಗೇ ಇದ್ದೀವಿ. ಹಾಗಾಗಿ ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೂ ಇಲ್ಲ, ಸಿದ್ದರಾಮಯ್ಯ ಸಿಎಂ ಆಗುವ ಸಾಧ್ಯತೆಯೂ ಇಲ್ಲ. ಆದರೆ, ಸಿದ್ದರಾಮಯ್ಯಗೆ ಅರ್ಜೆಂಟಾಗಿ ಸಿಎಂ ಆಗಬೇಕಾಗಿದೆ. ಹಾಗಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದರೆ ನಾನೇ ಮುಂದಿನ ಸಿಎಂ ಎಂದು ಹೀಗೆ ಆಡುತ್ತಿದ್ದಾರೆ. ಆದರೆ, ಅಂತಹ ಭ್ರಮೆ ಬೇಡ ಎಂದು ಪ್ರತಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಕೂಡ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಹಾಗಾಗಿ ಯಾವ ಸರ್ಕಾರದ ಬಗ್ಗೆಯೂ ವಿರೋಧ ಪಕ್ಷದವರಿಗೆ ಟೀಕೆ ಮಾಡಲಾಗುವುದಿಲ್ಲ. ಆದರೆ, ಈಗ ನನ್ನ ಪತ್ರ ಸಿಕ್ಕಿದೆ. ಅದನ್ನೇ ಇಟ್ಟುಕೊಂಡು ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹಾಗಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಕೇಳುತ್ತಿದ್ದಾರೆ ಅಷ್ಟೇ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ: ಸಚಿವ ಕೆ ಎಸ್ ಈಶ್ವರಪ್ಪ
ಸಚಿವರ ಗಮನಕ್ಕೆ ತರದೆ ಹಣ ಹಂಚಿಕೆ ಮಾಡುವುದು ತಪ್ಪು –ತನ್ನ ನಡೆಯನ್ನು ಸಮರ್ಥಿಸಿದ ಸಚಿವ ಈಶ್ವರಪ್ಪ

ಇಲಾಖೆಯ ಹಣಕಾಸು ವರ್ಗಾವಣೆ ವಿಷಯ ನನ್ನ ಗಮನಕ್ಕೆ ಬಂದ ಕೂಡಲೇ ನಾನು ಅದನ್ನು ಸಿಎಂ ಯಡಿಯೂರಪ್ಪ ಗಮನಕ್ಕೆ ತಂದಿದ್ದೇನೆ. ಹಾಗೇ ನಮ್ಮದು ರಾಷ್ಟ್ರೀಯ ಪಕ್ಷವಾದ ಕಾರಣ, ವಿಷಯವನ್ನು ಕೇಂದ್ರ ನಾಯಕರು ಮತ್ತು ರಾಜ್ಯದ ಅಧ್ಯಕ್ಷರ ಗಮನಕ್ಕೂ ತಂದಿದ್ದೇನೆ. ಆ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಹೇಳಿದ್ದಾರೆ. ತಮ್ಮ ಖಾತೆಗೆ ಸಂಬಂಧಿಸಿದಂತೆ ಕೆಲವು ಆಡಳಿತಾತ್ಮಕ ವಿಷಯಗಳಲ್ಲಿ ಗೊಂದಲವಿದ್ದ ಕಾರಣ ರಾಜ್ಯಪಾಲರ ಬಳಿ ಸಲಹೆ ಪಡೆಯಲು ಹೋಗಿದ್ದೆ ಅಷ್ಟೇ. ಹಾಗಾಗಿ ಕಾಂಗ್ರೆಸ್ ನವರಿಗೆ ಯಾವುದೇ ರೀತಿಯ ಭ್ರಮೆ ಬೇಡ ಎಂದು ಅವರು ಹೇಳಿದ್ದಾರೆ.

ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ: ಸಚಿವ ಕೆ ಎಸ್ ಈಶ್ವರಪ್ಪ
BJP vs BJP: ಸಿಎಂ ಬಿಎಸ್‌ವೈ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ

ಹಾಗೇ ಪಕ್ಷದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರ ಸೂಚನೆಯಂತೆ ಅನುದಾನ ತಡೆ ಹಿಡಿಯಲಾಗಿದೆ. ನಾನು ಸರ್ಕಾರದ ಆಡಳಿತಾತ್ಮಕ ವಿಷಯದಲ್ಲಿ ನೋವು ತೋಡಿಕೊಂಡಿದ್ದೇನೆ ಅಷ್ಟೇ. ಅದನ್ನು ಕೆಲವರು ತಪ್ಪಾಗಿ ಅರ್ಥೈಸಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ. ಬಹಳಷ್ಟು ಪಕ್ಷದ ನಾಯಕರು ದೂರವಾಣಿ ಕರೆ ಮಾಡಿ ನನಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷ ಮತ್ತು ಸರ್ಕಾರದ ಹಿತದಿಂದ ನಿಮ್ಮ ಪ್ರಯತ್ನ ಸರಿ ಇದೆ ಎಂದಿದ್ದಾರೆ. ಸರ್ಕಾರದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರಬೇಕು ಎಂಬ ವಿಚಾರದಲ್ಲಿ ಪಕ್ಷದ ಎಲ್ಲರ ಸಹಕಾರ ತಮಗೆ ಇದೆ ಎಂದೂ ಈಶ್ವರಪ್ಪ ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ: ಸಚಿವ ಕೆ ಎಸ್ ಈಶ್ವರಪ್ಪ
ಸ್ವತಃ ಅವರಿಗೇ ತಿರುಗುಬಾಣವಾಗುವುದೇ ಸಚಿವ ಈಶ್ವರಪ್ಪ ಪತ್ರಾಸ್ತ್ರ

ಇದೇ ಸಂದರ್ಭದಲ್ಲಿ ಬಿಜೆಪಿಯ ಮತ್ತೊಬ್ಬ ಬಂಡಾಯ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುರಿತು ಕೇಳಲಾದ ಪ್ರಶ್ನೆಗೆ, ಯತ್ನಾಳ್ ಒಬ್ಬ ಪ್ರಖರ ಹಿಂದುತ್ವವಾದಿ. ಆದರೆ ಯಡಿಯೂರಪ್ಪ ವಿಷಯದಲ್ಲ ಯಾಕೆ ಹಾಗೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಸಿಎಂ ವಿಷಯದಲ್ಲಿ ಅವರು ಹೇಳುತ್ತಿರುವುದು ಸತ್ಯವೋ, ಸುಳ್ಳೋ ನನಗೆ ತಿಳಿದಿಲ್ಲ. ಆದರೆ ಅವರ ಮಾತುಗಳನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಮೇತನಕ ಅವರಿಗೆ ಗಡುವು ನೀಡಿದ್ದಾರೆ. ಆ ಬಳಿಕ ಅವರೇ ಆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಹಾಗೇ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಮತ್ತು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಕಾರ್ಯಕರ್ತರ ಬಲ ದೊಡ್ಡದಿದೆ. ಎಲ್ಲಾ ಕಡೆ ಯುವ ಕಾರ್ಯಕರ್ತರು ಮನೆಮನೆಗೆ ಹೋಗಿ ಸರ್ಕಾರ ಮತ್ತು ಮೋದಿಯವರ ಸಾಧನೆಯನ್ನು ಸಾರಿ ಸಾರಿ ಹೇಳುತ್ತಿದ್ದಾರೆ. ನಮ್ಮ ಗೆಲುವಿಗೆ ಯಾವ ಆತಂಕವಿಲ್ಲ ಎಂದರು.

ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ: ಸಚಿವ ಕೆ ಎಸ್ ಈಶ್ವರಪ್ಪ
ಈಶ್ವರಪ್ಪ ಅವರ ಮಾತು ಕ್ಯಾಬಿನೆಟ್‌ನಲ್ಲಿ ನಡೆಯದಿದ್ದರೆ ಬಿಟ್ಟು ಹೊರಗೆ ಬರಲಿ -ಸಿದ್ದರಾಮಯ್ಯ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com