ವನ್ಯ ಜೀವಿ vs ಮಾನವ ಸಂಘರ್ಷ ತಡೆಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದೇ?

ರೈತನ ಮಿತ್ರ ಎಂದು ಕರೆಯುವ ಗುಳ್ಳೆನರಿಗಳ ಸಂತತಿ ಜಿಲ್ಲೆಯಲ್ಲಿ ಹೆಚ್ಚೂಕಮ್ಮಿ ನಶಿಸಿಹೋಗಿದೆ. ಗುಳ್ಳೆನರಿಗಳು ಅಧಿಕವಿದ್ದಾಗ ಕಾಡುಹಂದಿಗಳ ಉಪಟಳ ಕಡಿಮೆಯಿತ್ತು.
ವನ್ಯ ಜೀವಿ vs ಮಾನವ ಸಂಘರ್ಷ ತಡೆಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದೇ?

ನಮ್ಮ ರಾಜ್ಯದ ಬಹುತೇಕ ಕಡೆಗಳಲ್ಲಿ ನಿತ್ಯವೂ ಕಾಡಾನೆ ಹಾವಳಿ , ಚಿರತೆ ಕಾಟ ಇತ್ಯಾದಿ ಸುದ್ದಿಗಳನ್ನು ನಾವು ನೋಡುತ್ತಲೇ ಇದ್ದೇವೆ. ಈ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಲು ಮುಖ್ಯ ಕಾರಣ ಕಾಡಿನ ನಾಶ ದಿಂದ ಉಂಟಾಗಿರುವ ಮೇಲಿನ ಕೊರತೆ ಜತೆಗೇ ಕಾಡು ಪ್ರಾಣಿಗಳ ಸಂಖ್ಯೆಯಲ್ಲಿನ ಹೆಚ್ಚಳ. ಪುಟ್ಟ ಜಿಲ್ಲೆ ಕೊಡಗಿನಲ್ಲೂ ಪ್ರಾಣಿ ಮಾನವ ಸಂಘರ್ಷ ತಾರಕಕ್ಕೇರಿದ್ದು ಇತ್ತೀಚೆಗೆ ಹುಲಿಯೊಂದು ಮೂರು ಅಮಾಯಕ ಜೀವಗಳನ್ನು ಬಲಿ ಪಡೆದುಕೊಂಡ ನಂತರ ಜನರು ಸರ್ಕಾರದ ವಿರುದ್ದ ಉಗ್ರ ಪ್ರತಿಭಟನೆಯನ್ನೇ ಮಾಡಿದ್ದರು. ಆದರೆ ಜನರ ಪ್ರತಿಭಟನೆ ತಣ್ಣಗಾಗುತಿದ್ದಂತೆ ಸರ್ಕಾರವೂ ಸುಮ್ಮನಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ಕೊಡಗು ಜಿಲ್ಲೆಯಲ್ಲಿ ಎಷ್ಟು ಕಾಡುಗಳು ಉಳಿದಿವೆ? ಎಷ್ಟು ಕಾಡುಗಳು ಒತ್ತುವರಿಯಾಗಿವೆ? ಎಷ್ಟು ಕಾಡುಗಳಲ್ಲಿ ಪ್ರಾಣ ಗಳಿಗೆ ಕುಡಿಯಲು ನೀರು, ಮೇಯಲು ಹುಲ್ಲುಗಾವಲು, ತಿನ್ನಲು ಗೆಡ್ಡೆ ಗೆಣಸು, ಬೇಟೆ ಪ್ರಾಣಿಗಳಿಗೆ ತಿನ್ನಲು ಸಾಕಷ್ಟು ಜಿಂಕೆ, ಕಡವೆ ಇತ್ಯಾದಿ ಪ್ರಾಣ ಗಳಿವೆ?ಈ ಬಗ್ಗೆ ಸಮರ್ಪಕ ಸಮೀಕ್ಷೆಯಾಗುವ ಅಗತ್ಯವಿದೆ. ಇಲ್ಲದೆಬಹೋದರೆ ಮುಂದಿನ ದಿನಗಳಲ್ಲಿಕೊಡಗಿನ ನಗರ ಪ್ರದೇಶಗಳಲ್ಲಿ ನಿರಂತರ ಕಾಡುಪ್ರಾಣ ಗಳ ಮುಖಾಮುಖಿ ಗಂಭೀರತೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ನಾಗರಹೊಳೆ, ಬಂಡಿಪುರ ಅರಣ್ಯದಲ್ಲಿ ಪ್ರಮುಖವಾಗಿ ಹುಲಿ,ಚಿರತೆ, ಆನೆಯ ಸಂಖ್ಯೆಗಳು ಅಂದಾಜು ಎಷ್ಟಿವೆ? ವಾರ್ಷಿಕವಾಗಿ ಸರಾಸರಿ ಇವುಗಳ ಸಂತತಿ ಎಷ್ಟು ಹೆಚ್ಚಾಗುತ್ತಿವೆ? ಕಾಡಿನಲ್ಲಿ ಇವುಗಳಿಗೆ ನಿಜಕ್ಕೂ ಆಹಾರ ಲಭ್ಯತೆ ಇವೆಯೇ? ಅರಣ್ಯದಂಚಿನ ಗ್ರಾಮಗಳಿಗೆ ಆನೆ, ಹುಲಿ, ಚಿರತೆ, ಕಾಟಿ, ಜಿಂಕೆ, ಕಡವೆ, ಕರಡಿ, ಕಾಡುಹಂದಿ ಮೃಗಗಳು ಇತ್ಯಾದಿ ವನ್ಯಮ್ರಗಗಳು ನಿರಂತರ ವಲಸೆ ಬರಲು ಕಾರಣವೇನು? ಇವುಗಳ ಸಮರ್ಪಕ ಅಧ್ಯಯನ, ಸಂಪೂರ್ಣ ನಿಯಂತ್ರಣ ಇತ್ಯಾದಿ ಸಿದ್ಧತೆಗಳಿಗೆ ಅರಣ್ಯ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ವನ್ಯ ಜೀವಿ vs ಮಾನವ ಸಂಘರ್ಷ ತಡೆಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದೇ?
ಹುಲಿ ಗಣತಿ: ರಾಜ್ಯದಲ್ಲಿ 4 ವರ್ಷದಲ್ಲಿ 118 ಹುಲಿಗಳು ಹೆಚ್ಚಿವೆ

ಭವಿಷ್ಯದಲ್ಲಿ ವನ್ಯಪ್ರಾಣ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ಚರ್ಚಿಸಿ ನಿರ್ದಾರ ಕೈಗೊಂಡಲ್ಲಿ ಕೊಡಗಿನಲ್ಲಿರುವ ವನ್ಯಪ್ರಾಣಿ -ಮಾನವ ಸಂಘರ್ಷವನ್ನು ನಿಯಂತ್ರಿಸಲು ಸಾಧ್ಯವಿದೆ. ಉತ್ತಮ ಕಾರ್ಯಯೋಜನೆ ರೂಪಿಸಿದ್ದೇ ಆದಲ್ಲಿ, ಮುಂದಿನ 50 ವರ್ಷ ನಾವು ನೆಮ್ಮದಿಯಿಂದ ಬಾಳಬಹುದು. ಕಾವೇರಿ ಜಲಾನಯನ ಪ್ರದೇಶ ಸಂಪದ್ಭರಿತವಾಗಿರಲು ಕಾಡು ಹಾಗೂ ವನ್ಯಜೀವಿಗಳು, ನೀಲಗಿರಿ ಜೀವ ವೈವಿಧ್ಯ ತಾಣಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣಗಳು ಸುಮಾರು 6200 ಚ.ಕಿ.ಮೀ.ಅರಣ್ಯ ಪ್ರದೇಶವನ್ನು ಹೊಂದಿದೆ.ಕೇರಳ ಸುಮಾರು 2500 ಚ.ಕೀ.ಮಿ. ಹಾಗೂ ತಮಿಳುನಾಡು ಸುಮಾರು 4000 ಚ.ಕಿ.ಮೀ. ಅರಣ್ಯ ಪ್ರದೇಶಗಳನ್ನು ಹೊಂದಿದ್ದು ಆನೆ ಕಾರಿಡಾರ್ ಎಂದು ಗುರುತಿಸಲ್ಪಟ್ಟ ಈ ಭಾಗ ಅಂದಾಜು 12700 ಚ.ಕಿ.ಮೀ.ಹೊಂದಿದೆ. ಹೆಚ್ಚಾಗಿ ಕಾಡಾನೆಗಳು, ಇತ್ಯಾದಿ ವನ್ಯ ಪ್ರಾಣಿಗಳು ಈ ಮೂರು ರಾಜ್ಯದ ಅರಣ್ಯದ ನಡುವೆ ಅಧಿಕವಾಗಿ ಆಹಾರವನ್ನು ಅರಸಿ ಓಡಾಟ ನಡೆಸುತ್ತಿದ್ದವು.

ಇದೀಗ ಅಂತಹಾ ಅರಣ್ಯ ಪ್ರದೇಶದಲ್ಲಿ ಆನೆ ಕಾರಿಡಾರ್ ಮಾನವನ ಹಸ್ತಕ್ಷೇಪದಿಂದಾಗಿ, ಕೃಷಿ ಕ್ಷೇತ್ರ ವಿಸ್ತರಣೆಯಿಂದಾಗಿ ಸಂಕೀರ್ಣವಾಗುತ್ತಿದೆ. ಆನೆಯನ್ನು ಕಾಡಿನಲ್ಲಿಯೇ ಬಂಧಿಯಾಗಿಡಲು ಸೋಲಾರ್ ತಂತಿಬೇಲಿ,ಆನೆ ಕಂದಕ, ಹ್ಯಾಂಗಿಂಗ್ ಫೆನ್ಸ್, ರೈಲು ಕಂಬಿಗಳ ತಡೆಗೋಡೆ ಬಗ್ಗೆ ನಾವು ಮಾತನಾಡುತ್ತಿದ್ದೇವೆಯೇ ವಿನಃ ಆನೆಯ ಕಾರಿಡಾರ್ ಮುಕ್ತಗೊಳಿಸಿ, ಗ್ರಾಮಕ್ಕೆ ನುಸುಳದಂತೆ ಪರಿಹಾರ ಕಂಡುಕೊಳ್ಳುವ, ಅರಣ್ಯ ಪ್ರದೇಶದಲ್ಲಿ ಮಾನವನ ಒತ್ತಡ ಕಡಿಮೆ ಮಾಡುವ, ಕಾಡುಪ್ರಾಣ ಗಳ ಆಹಾರ ಸಂರಕ್ಷಿಸಿಸುವ ನಿಟ್ಟಿನಲ್ಲಿ ಹಾಗೂ ಕಾಡಿನ ಬೆಂಕಿಯಾಗದಂತೆ ನೋಡಿಕೊಳ್ಳುವದು ಇತ್ಯಾದಿ ಉಪಕ್ರಮಗಳ ಬಗ್ಗೆ ಸರ್ಕಾರ ಚಿಂತಿಸುವದು ಕಂಡು ಬರುತ್ತಿಲ್ಲ. ಇಷ್ಟುಕ್ಕೂ ಅರಣ್ಯ ಅಭಿವೃದ್ಧಿಯೊಂದಿಗೆ ಶಾಶ್ವತ ಪರಿಹಾರಕ್ಕಾಗಿ ಸಾವಿರಾರು ಕೋಟಿ ಅನುದಾನ ಅಗತ್ಯವಿದ್ದು, ಸರ್ಕಾರ ಇದೀಗ ಕಣ್ಣೊರೆಸುವ ತಂತ್ರವಾಗಿ ಬಿಡುಗಡೆ ಮಾಡುತ್ತಿರುವ ರೂ.೫ ಕೋಟಿ, ರೂ.೧೦ ಕೋಟಿ ಅನುದಾನ ಏನೇನೂ ಸಾಲದು.

ವನ್ಯ ಜೀವಿ vs ಮಾನವ ಸಂಘರ್ಷ ತಡೆಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದೇ?
ವಿಶ್ವ ಹುಲಿಗಳ ದಿನಾಚರಣೆ: ದೇಶದಲ್ಲಿ ಹುಲಿ ಕಾರಿಡಾರ್‌ನ ಅಗತ್ಯ ಸಾರುವ ವರದಿ

ನಾಗರಹೊಳೆ, ಬಂಡಿಪುರ ಇತರೆ, ಕೇರಳ, ತಮಿಳುನಾಡು ಆನೆ ಕಾರಿಡಾರ್‌ಗಳು ಮುಕ್ತವಾಗಿದ್ದಾಗ ಈಗಿನಷ್ಟು ಕಾಡಾನೆ ಉಪಟಳ ಕೊಡಗಿನಲ್ಲಿ ಇರಲಿಲ್ಲ. ಇಲ್ಲಿನ ಆನೆಗಳು ಬೆಂಗಳೂರಿನ ಬನ್ನೇರುಘಟ್ಟ ದವರೆಗೂ ಸಂಚರಿಸುತ್ತಿದ್ದವು. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕೃಷಿ, ಭತ್ತದ ಕೃಷಿ ಇತ್ಯಾದಿ ಉಪಕ್ರಷಿ ಅಧಿಕಗೊಂಡಾಗ ಅಲ್ಲಿನ ಅರಣ್ಯ ಪ್ರದೇಶದೊಂದಿಗೆ ಕಾಡಾನೆಗಳ ಕಾರಿಡಾರ್ ಬಂದ್ ಆಯಿತು. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ರಾಮನಗರದ ಕಾಡುಗಳು ಏನಾಗಿವೆ? ಕೆಲವು ಬೆಟ್ಟಗುಡ್ಡಗಳು ಪರಿವರ್ತಿತ ಸೈಟ್‌ಗಳಾಗಿವೆ. ಅನಧಿಕೃತ ಫಾರ್ಮ್ ಆಗಿ ಪರಿವರ್ತನೆಯಾಗಿದೆ.ಇನ್ನು ಕೆಲವು ಕಲ್ಲು ಬೆಟ್ಟಗಳು ಕಲ್ಲುಗಣ ಗಾರಿಕೆಯ ತಾಣವಾಗಿ ಅಕ್ರಮಗಳೇ ಅಧಿಕವಾಗಿದ್ದು, ವನ್ಯಪ್ರಾಣ ಗಳ ಆವಾಸ ಸ್ಥಾನಗಳು ಮಾಯವಾಗಿವೆ. ಇತ್ತ ಪುಷ್ಪಗಿರಿ, ಬೃಹ್ಮಗಿರಿ, ತಲಕಾವೇರಿ, ನಾಗರಹೊಳೆ, ಬಂಡಿಪುರದಲ್ಲಿ ಆನೆ ಮತ್ತು ಹುಲಿಯ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಅರಣ್ಯಪ್ರದೇಶ ಒತ್ತುವರಿದಾರರಿಂದ, ಮಾನವನ ಹಸ್ತಕ್ಷೇಪಕ್ಕೆ ಸಿಲುಕಿರುವ ಹಿನ್ನೆಲೆ ಕಿರಿದಾಗುತ್ತಿದೆ.

ರೈತನ ಮಿತ್ರ ಎಂದು ಕರೆಯುವ ಗುಳ್ಳೆನರಿಗಳ ಸಂತತಿ ಜಿಲ್ಲೆಯಲ್ಲಿ ಹೆಚ್ಚೂಕಮ್ಮಿ ನಶಿಸಿಹೋಗಿದೆ. ಗುಳ್ಳೆನರಿಗಳು ಅಧಿಕವಿದ್ದಾಗ ಕಾಡುಹಂದಿಗಳ ಉಪಟಳ ಕಡಿಮೆಯಿತ್ತು. ಕಾಡುಹಂದಿಗಳು ಮರಿ ಮಾಡಿದ ಸಂದರ್ಭ ಗುಳ್ಳೆನರಿಗಳು ಕಾಡು ಹಂದಿ ಮರಿಗಳನ್ನು ಆಹಾರವಾಗಿ ಬೇಟೆಯಾಡಿ ಅವುಗಳ ನಿಯಂತ್ರಣಕ್ಕೆ ಕಾರಣವಾಗಿದ್ದವು. ಭತ್ತದ ಮಡಿಗಳಲ್ಲಿ ಯಥೇಚ್ಚವಾಗಿದ್ದ ಏಡಿಗಳು ಹಾಗೂ ಇಲಿ ಹೆಗ್ಗಣಗಳೂ ಗುಳ್ಳೆನರಿಗಳ ಆಹಾರವಾಗಿದ್ದು ರೈತನ ಮಿತ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಇವತ್ತು ಗುಳ್ಳೆನರಿಗಳ ಸಂತತಿಗೆ ಮರುಹುಟ್ಟು ನೀಡುವ ಕೆಲಸವಾಗಬೇಕಾಗಿದೆ.

ವನ್ಯ ಜೀವಿ vs ಮಾನವ ಸಂಘರ್ಷ ತಡೆಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದೇ?
ಹುಲಿ ದಾಳಿಗೆ ಬಾಲಕ ಬಲಿ; ಭುಗಿಲೆದ್ದ ಗ್ರಾಮಸ್ಥರ ಆಕ್ರೋಶ; ಕೊಡಗು–ಕೇರಳ ಹೆದ್ದಾರಿ ಬಂದ್

ಭಾರತೀಯ ವನ್ಯಜೀವಿ ಪ್ರತಿಷ್ಠಾನದ ಮುಖ್ಯಸ್ಥ ಡಾ.ವಿವೇಕ್ ಮೆನನ್ ಅವರೂ, ಮೊದಲಿಗೆ ಅರಣ್ಯ ಒತ್ತುವರಿ ಪ್ರದೇಶವನ್ನು ಸರ್ವೆ ಮಾಡಿ ವನ್ಯಪ್ರಾಣ ಗಳ ಕಾರಿಡಾರ್ ಮುಕ್ತಗೊಳಿಸಿದ್ದಲ್ಲಿ ಆನೆ,ಹುಲಿ,ಜಿಂಕೆ,ಕಡವೆ ಇತ್ಯಾದಿ ಓಡಾಡಕ್ಕೆ ಅನುಕೂಲವಾಗುತ್ತದೆ. ಇದರೊಂದಿಗೆ ಕೃಷಿಕರ ತೋಟಕ್ಕೆ ಪ್ರಾಣ ಗಳು ನುಸುಳದಂತೆ ಮಾಡಬಹುದು ಎಂದು ಹೇಳುತ್ತಾರೆ.

ಕೊಡಗಿನ ಮತ್ತಿಗೋಡು, ದುಬಾರೆ ಸಾಕಾನೆ ಶಿಬಿರ ಸ್ಥಳಾಂತರ ಅಗತ್ಯವಿದೆ. ಅರಣ್ಯ ಭಾಗದಲ್ಲಿಯೇ( ಅಭಯಾರಣ್ಯ) ಶಿಬಿರವಿದ್ದಲ್ಲಿ ಆನೆಗೆ ಹೆಚ್ಚಿನ ಮೇವನ್ನು ಅರಣ್ಯದಿಂದಲೇ ನೀಡಬೇಕಾಗುತ್ತದೆ. ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಗೆ ಸಾಕಷ್ಟು ನೀರಿನ ಕೊರತೆ ಇದೆ. ಪ್ರವಾಸಿಗರಿಂದ ಶಿಬಿರವನ್ನು ಆದಷ್ಟೂ ದೂರವಿಡಬೇಕು. ಸರಗೂರು ಸಮೀಪ ನುಗು ಎಂಬಲ್ಲಿ ಸುಮಾರು ೨೦೦೦ ಎಕರೆ ಅರಣ್ಯ ಪ್ರದೇಶವಿದೆ. ಹುಲಿಧಾಮ ಹಾಗೂ ಸಾಕಾನೆ ಶಿಬಿರಕ್ಕೆ ಸೂಕ್ತವಾಗಿದೆ. ಬಂಡಿಪುರದಲ್ಲಿ ಅತ್ಯುತ್ತಮ ಆನೆ ಶಿಬಿರವಿದ್ದು, ಅಚ್ಚುಕಟ್ಟು ವ್ಯವಸ್ಥೆ ಇದೆ. ಶ್ರೀಲಂಕ ಮಾದರಿ ಆನೆಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಾಗಿದೆ ಎಂದು ರಾಜ್ಯ ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷರಾದ ಕೆ.ಎಂ.ಚಿಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ವನ್ಯ ಜೀವಿ vs ಮಾನವ ಸಂಘರ್ಷ ತಡೆಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದೇ?
ಇನ್ನೂ ಪತ್ತೆಯಾಗದ ಹುಲಿ; ಜನಜೀವನ ಅಸ್ತವ್ಯಸ್ತ

ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಬ್ಸಿಡಿ ನೀಡುವದನ್ನು ಬಿಟ್ಟು ಡೈರಿ ಕೇಂದ್ರ, ಜೇನು ಸಾಕಾಣೆ,ಹಂದಿ,ಕೋಳಿ ಸಾಕಾಣೆಗೆ ಸಬ್ಸಿಡಿ ನೀಡಬೇಕಿದೆ. . ಕರ್ನಾಟಕ, ತಮಿಳುನಾಡು, ಕೇರಳ ಆನೆ ಕಾರಿಡಾರ್ ನಿರ್ವಹಣೆಗೆ ಹೊಸಾ ಹುದ್ದೆ ಸೃಷ್ಠಿ ಮಾಡಬೇಕು. . ನಿವೃತ್ತ ಯೋಧರನ್ನು, ಅಧಿಕಾರಿಗಳನ್ನು ನಿಯೋಜಿಸಲಿ. ಪ್ರತಿಗ್ರಾಮದಲ್ಲಿಯೂ ಜಲಪ್ರಳಯ, ಪ್ರವಾಹ, ಭೂಕುಸಿತ ಸಂದರ್ಭ ಮಾನವ ಹಾನಿ ತಪ್ಪಿಸಲು ಸುಮಾರು ೧೫ ಯುವಕರ ತಂಡಗಳಿಗೆ ಲೈಫ್ ಜಾಕೆಟ್, ಬೋಟ್, ಹಗ್ಗದ ವ್ಯವಸ್ಥೆ ಕಲ್ಪಿಸುವ ಮೂಲಕ ಕಾರ್ಯಾಚರಣೆಗೆ ಪೂರ್ವ ಸಿದ್ಧತೆ ಮಾಡಿರಬೇಕು.ಎನ್.ಡಿ.ಆರ್.ಎಫ್ ತಂಡ ಬರುವ ಮುನ್ನವೇ ಮಾನವ ರಕ್ಷಣೆಗೆ ಯುವಕರ ಪಡೆ ಸನ್ನದ್ಧವಾಗಬೇಕು ಎಂದು ಪರಿಸರವಾದಿ ಕರ್ನಲ್ ಸಿ.ಪಿ.ಮುತ್ತಣ್ಣ ಅಭಿಪ್ರಾಯಿಸಿದ್ದಾರೆ. ರೆಸಾರ್ಟ್ ಸಂಸ್ಕೃತಿ ಕೈಬಿಟ್ಟು, ಇಲ್ಲಿನ ಸಂಸ್ಕೃತಿಗೆ ಪೂರಕವಾದ ಅಭಿವೃದ್ಧಿಗೆ ಒತ್ತು ನೀಡಬೇಕು ಎನ್ನುತ್ತಾರೆ. ರಾಜ್ಯ ಸರ್ಕಾರ ಈ ದಿಸೆಯಲ್ಲಿ ಗಂಭೀರ ಪ್ರಯತ್ನ ಮಾಡಲೇಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com