ಗೋಮೂತ್ರ ಸಿಂಪಡಿಸಿದರೂ BSYಗೆ ಅಂಟಿದ ಕಳಂಕ ಶುದ್ಧವಾಗುವುದಿಲ್ಲ: ಕಾಂಗ್ರೆಸ್

ದೇವನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ದೇವರಬೀಸನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ಆಪರೇಷನ್ ಕಮಲದಲ್ಲಿ ಹಣ ಆಮಿಷ ಮೊದಲಾದ ಆರೋಪಗಳ ಸರಮಾಲೆ ಸಿಎಂ ಅವರ ಕೊರಳಲ್ಲಿದೆ: ಕಾಂಗ್ರೆಸ್
ಗೋಮೂತ್ರ ಸಿಂಪಡಿಸಿದರೂ BSYಗೆ ಅಂಟಿದ ಕಳಂಕ ಶುದ್ಧವಾಗುವುದಿಲ್ಲ: ಕಾಂಗ್ರೆಸ್

ಗೋಮೂತ್ರ ಸಿಂಪಡಿಸದರೂ ಬಿ ಎಸ್‌ ಯಡಿಯೂರಪ್ಪರಿಗೆ ಅಂಟಿರುವ ಕಳಂಕ ಶುದ್ಧವಾಗುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್‌ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತೀವ್ರ ದಾಳಿ ನಡೆಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯಡಿಯೂರಪ್ಪ ಅವರ ಮೇಲಿರುವ ಭ್ರಷ್ಟಾಚಾರಗಳ ಆರೋಪವನ್ನು ಉಲ್ಲೇಖಿಸಿರುವ ಕಾಂಗ್ರೆಸ್‌, ಕಳಂಕಿತರಾಗಿ ಅಧಿಕಾರ ನಡೆಸಲು ಸ್ವಲ್ಪವೂ ನಾಚಿಕೆ ಎನಿಸುತ್ತಿಲ್ಲವೇ? ಎಂದು ಯಡಿಯೂರಪ್ಪರನ್ನು ಪ್ರಶ್ನಿಸಿದೆ.

ದೇವನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ದೇವರಬೀಸನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ಆಪರೇಷನ್ ಕಮಲದಲ್ಲಿ ಹಣ ಆಮಿಷ ಮೊದಲಾದ ಆರೋಪಗಳ ಸರಮಾಲೆ ಸಿಎಂ ಅವರ ಕೊರಳಲ್ಲಿದೆ. ಗೋಮೂತ್ರ ಸಿಂಪಡಿಸಿದರೂ ಯಡಿಯೂರಪ್ಪರಿಗೆ ಅಂಟಿದ ಕಳಂಕ ಶುದ್ಧವಾಗುವುದಿಲ್ಲ ಎಂದು ಹೇಳಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com