1500 ಬಸ್‌ಗಳ ಗುತ್ತಿಗೆಗೆ ಖಾಸಗಿಯವರಿಂದ ಟೆಂಡರ್‌ ಆಹ್ವಾನ: BMTC ಖಾಸಗಿಕರಣಕ್ಕೆ ಮುಂದಾದ  ಸರ್ಕಾರ..?

1500 ಬಸ್‌ಗಳ ಗುತ್ತಿಗೆಗೆ ಖಾಸಗಿಯವರಿಂದ ಟೆಂಡರ್‌ ಆಹ್ವಾನ: BMTC ಖಾಸಗಿಕರಣಕ್ಕೆ ಮುಂದಾದ ಸರ್ಕಾರ..?

ಹೊಸ ಬಸ್‌ಗಳಿಗೆ ಖಾಸಗಿ ಚಾಲಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ, ಸುಮಾರು ಐದು ಸಾವಿರ ಬಿಎಂಟಿಸಿ ಚಾಲಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ನೌಕರರ ಬಳಿ ಚೆರ್ಚಿಸದೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾರಿಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿದ್ದಾರೆ.

BMTC ಹಾಗೂ KSRTC ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಪ್ರಮುಖ ಬೇಡಿಕಡಯೊಂದಿಗೆ ಇತ್ತೀಚಿಗೆ ನೌಕರರ ಸಂಘ ಬೃಹತ್‌ ಧರಣಿ ನಡೆಸಿತ್ತು. ಇದರ ಬೆನ್ನಲ್ಲೇ ಸರ್ಕಾರವು ಬಿಎಂಟಿಸಿಯ ಖಾಸಗೀಕರಣಕ್ಕೆ ಹೊರಟಿದೆ ಎಂಬ ಆರೋಪ ಎದುರಾಗಿದೆ.

ಖಾಸಗಿಯವರಿಂದ 1500 ಡೀಸೆಲ್‌ ಬಸ್‌ಗಳನ್ನು ಪಡೆಯಲು ಬಿಎಂಟಿಸಿ ಮುಂದಾಗಿದೆ. ಇದಕ್ಕೆ ನೌಕರರ ಆಕ್ರೋಶವೂ ವ್ಯಕ್ತವಾಗಿದೆ. ಧರಣಿ ನಡೆಸಿದಾಗ ಸಂಧಾನಕ್ಕೆ ಮುಂದಾದ ಸರ್ಕಾರವು ಆರು ತಿಂಗಳೊಳಗೆ ಕೆಲವು ಬೇಡಿಕೆ ಈಡೇರಿಸುವುದಾಗಿ ಭರವಸೆಕೊಟ್ಟಿತ್ತು.ಆದರೆ, ಈಗ ಬಿಎಂಟಿಸಿ ನೌಕರರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಎಂಟಿಸಿ ಖಾಸಗಿಕರಣಕ್ಕೆ ಸರ್ಕಾರ ಪ್ಲಾನ್

ಖಾಸಗಿಯವರಿಂದ ಬಿಎಂಟಿಸಿ 1500 ಡೀಸೆಲ್‌ ಬಸ್‌ಗಳನ್ನು ಪಡೆಯುವ ಈಗಾಗಲೇ ಸಂಬಂಧ ಟೆಂಡರ್‌ ಕರೆಯಲಾಗಿದೆ. ಕೇಂದ್ರದ ಫೇಮ್ ಯೋಜನೆಯ ಎರಡನೇ ಹಂತದಲ್ಲಿ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಲ್ಲಿ 300 ವಿದ್ಯುತ್ ಬಸ್ ಪಡೆಯುವ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇದರ ಬೆನ್ನಲೆ ಡೀಸೆಲ್‌ ಬಸ್‌ಗಳಿಗೂ ಹೊಸ ಟೆಂಡರ್‌ ಪ್ರಕ್ರಿಯೆ ಆರಂಭಿಸಿರುವುದು ಬಿಎಂಟಿಸಿ ನೌಕರರಿಗೆ ಆತಂಕ ಶುರುಮಾಡಿದೆ.

ನಿಗದಿ ಕಿ.ಲೋ ಮುಗಿದಿರುವ 1500 ಬಸ್‌ಗಳನ್ನು ಗುಜರಿಗೆ ಹಾಕಲು ಮುಂದಾದ ಬಿಎಂಟಿಸಿ, ಮತ್ತೆ ಅಷ್ಟೇ ಪ್ರಮಾಣದ ಹೊಸ ಬಸ್‌ಗಳನ್ನು ಕೊಳ್ಳಲು ಸಿದ್ದತೆ ನಡೆಸಿದೆ. ಆರ್ಥಿಕ ನಷ್ಟ ಹಾಗು ಸರ್ಕಾರ ಬಸ್‌ ಖರೀದಿಗೆ ಯಾವುದೇ ಅನುದಾನ ನೀಡದ ಕಾರಣ, ಹೊಸ ಬಸ್‌ಗಳನ್ನು ಖಾಸಗಿ ಯವರಿಂದ ಪಡೆದು ಗುತ್ತಿಗೆ ಆಧಾರದ ಮೇಲೆ ಓಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬಿಎಂಟಿಸಿ ಖಾಸಗೀಕರಣದಲ್ಲಿರುವ ಪ್ರಮುಖಾಂಶಗಳು

ಬಸ್‌ ನಿರ್ವಾಹಕನನ್ನು ಬಿಎಂಟಿಸಿ ನೀಡಿದರೆ, ಚಾಲಕರನ್ನು ಖಾಸಗಿ ಕಂಪನಿಗಳು ನೇಮಕ ಮಾಡುತ್ತವೆ. ಬಿಎಂಟಿಸಿ ರೂಟ್‌ ನಲ್ಲಿ ಗುತ್ತಿಗೆ ಆಧಾರದಲ್ಲಿ ಖರೀದಿಸಲಾದ ಬಸ್‌ಗಳೂ ಸಂಚಾರ ಮಾಡಲಿದ್ದು, ಖಾಸಗಿ ಕಂಪನಿಗಳು ಇದರ ನಿರ್ವಹಣೆ ಮಾಡುತ್ತವೆ. ಈ ಯೋಜನೆಯಲ್ಲಿ ಬಿಎಂಟಿಸಿ ಹಣ ಹೂಡಿಕೆ ಮಾಡುವುದಿಲ್ಲ. ಬದಲಿಗೆ ಖಾಸಗಿ ಕಂಪನಿ ಹಣ ಹೂಡಿಕೆ ಮಾಡಲಿದೆ. ಬಿಎಂಟಿಸಿ ಕಿ.ಲೋ ಮೀಟರ್‌ಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ಖಾಸಗಿ ಸಂಸ್ಥೆಗಳಿಂದ ಹಣ ಪಡೆಯುತ್ತದೆ. ಜೊತೆಗೆ (ಬಿಎಂಟಿಸಿ) ಖಾಸಗಿಯವರು ನಿರ್ವಹಿಸುತ್ತಿರುವ ಬಸ್‌ಗಳ ನಿಲ್ದಾಣಕ್ಕೆ ತನ್ನದೇ ಸ್ಥಳಾವಕಾಶವನ್ನು ನೀಡಲು ಮುಂದಾಗಿದೆ. ಗಳಿಕೆ ಲಾಭದ ಪ್ರಶ್ನೆ ಬಂದರೆ ಇಲ್ಲಿ ಬಿಎಂಟಿಸಿ ಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ, ಲಾಭ-ನಷ್ಟದ ಪ್ರಶ್ನೆ ಖಾಸಗಿ ಕಂಪನಿಗೆ ಬಿಟ್ಟ ವಿಚಾರವಾಗಿದೆ.

ಬಿಎಂಟಿಸಿ ಯನ್ನೆ ನಂಬಿದ ನೌಕರರಿಗೆ ಸಂಕಷ್ಟ

ಹೊಸ ಬಸ್‌ಗಳಿಗೆ ಖಾಸಗಿ ಚಾಲಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ, ಸುಮಾರು ಐದು ಸಾವಿರ ಬಿಎಂಟಿಸಿ ಚಾಲಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ನೌಕರರ ಬಳಿ ಚರ್ಚಿಸದೆ ಏಕಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾರಿಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿದ್ದಾರೆ. ಸಾರಿಗೆ ಕಾರ್ಮಿಕ ಸಂಘಗಳು ಈಗಾಗಲೇ ಸರ್ಕಾರಕ್ಕೆ ಪೂರ್ವಾನ್ವಯ ಮುಷ್ಕರ ನೋಟಿಸ್ ನೀಡಿದ್ದರೂ ಸಾಕಷ್ಟು ಸಮಯಾವಕಾಶವಿದ್ದರೂ ಕಾರ್ಮಿಕರ ಜೊತೆ ಮಾತನಾಡದೆ, ಸರ್ಕಾರ ಬೆಂಗಳೂರು ಬಿಎಂಟಿಸಿಯ ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಟೆಂಡರ್‌ ಕರೆದಿರುವುದು ನೋಡಿದರೆ, ಇದು ಖಾಸಗೀಕರಣ ಮಾಡುವ ಉದ್ದೇಶವೆಂದು ಆರೋಪಿಸಿವೆ.

ಏಪ್ರಿಲ್‌ 7 ರಂದು ಸಾರಿಗೆ ನೌಕರರಿಂದ ಮತ್ತೆ ಮುಷ್ಕರ

9 ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಮತ್ತೆ ಮುಷ್ಕರ ನಡೆಸಲು ನಿರ್ಧರಿಸಿದ್ದು, ಇದರ ಮಧ್ಯೆಯೇ ಪ್ರಯಾಣಿಕರ ಸಮಸ್ಯೆ ನೀಗಿಸುವ ನೆಪ ಒಡ್ಡಿ, ಬಿಎಂಟಿಸಿಯನ್ನು ಖಾಸಗೀಕರಣ ಮಾಡಲು ಹೊರಟ ಸರ್ಕಾರವು ನೌಕರರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಈ ನಡೆಯನ್ನು ಎಬಿವಿಪಿ ಮತ್ತು ರೈತ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಸರ್ಕಾರದ ಈ ನಿರ್ಧಾರದಿಂದ ನೂರಾರು ಕೋಟಿ ರೂಪಾಯಿಗಳ ವ್ಯವಸ್ಥಿತ ಬೃಹತ್ ಭ್ರಷ್ಟಾಚಾರ ನಡೆಯುತ್ತದೆ ಎಂದು ಆಮ್‌ ಆದ್ಮಿ ಆರೋಪಿಸಿದೆ.

ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಅವರನ್ನ ನಂಬಿದ ಕುಟುಂಬ ಬೀದಿಗೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸುವುದರ ಜೊತೆಗೆ ಇದರ ವಿರುದ್ಧ ಆಮ್‌ ಆದ್ಮಿ ಪಕ್ಷ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com