ಕೇಂದ್ರದ ಸರ್ವಾಧಿಕಾರಿ ನಡೆಯ ವಿರುದ್ಧ ಬಿಜೆಪಿ ಸಚಿವ ಮಾಧುಸ್ವಾಮಿ ಅಸಮಾಧಾನ

ಕೇಂದ್ರಸರ್ಕಾರದಲ್ಲಿ ಸರ್ವಾಧಿಕಾರದ ಧೋರಣೆ ಆರಂಭವಾಗಿದೆ. ಇದರಿಂದ ಒಕ್ಕೂಟಗಳಿಗೆ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರದ ಕೆಲವು ನೀತಿಗಳಿಂದ ಪ್ರಾದೇಶಿಕತೆಗೆ ದಕ್ಕೆಬರುತ್ತಿದೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ಸರ್ವಾಧಿಕಾರಿ ನಡೆಯ ವಿರುದ್ಧ ಬಿಜೆಪಿ ಸಚಿವ ಮಾಧುಸ್ವಾಮಿ ಅಸಮಾಧಾನ
admin

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಇದುವರೆಗೂ ರಾಜ್ಯ ಬಿಜೆಪಿ ನಾಯಕರು ಖ್ಯಾತೆ ತೆಗೆದಿರುವುದು ಕಡಿಮೆಯೇ ಇದೀಗ ಸಣ್ಣನೀರಾವರಿ ಬಿಜೆಪಿ ಸಚಿವ ಮಾಧುಸ್ವಾಮಿ ಮೈಸೂರಿನ ಕಾರ್ಯಕ್ರಮಯೊಂದರಲ್ಲಿ ಕೇಂದ್ರದ ಆಡಳಿತ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾರ್ಚ್‌ 27 ರಂದು ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ‘ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ಯ್ರʼ ಎಂಬ ವಿಚಾರ ಸಂಕಿರ್ಣಕ್ಕೆ ಸಚಿವ ಮಾಧುಸ್ವಾಮಿ ಭಾಗವಹಿಸಿದ್ದರು. ಈ ವೇಳೆ ಕೇಂದ್ರಸರ್ಕಾರದಿಂದ ಸರ್ವಾಧಿಕಾರದ ಧೋರಣೆ ಆರಂಭವಾಗಿದೆ ಎಂಬ ಅಚ್ಚರಿಕೆಯ ಹೇಳಿನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರಸರ್ಕಾರದಲ್ಲಿ ಸರ್ವಾಧಿಕಾರದ ಧೋರಣೆ ಆರಂಭವಾಗಿದೆ. ಇದರಿಂದ ಒಕ್ಕೂಟಗಳಿಗೆ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರದ ಕೆಲವು ನೀತಿಗಳಿಂದ ಪ್ರಾದೇಶಿಕತೆಗೆ ದಕ್ಕೆಬರುತ್ತಿದೆ. ರಾಜ್ಯದ ಪಟ್ಟಿಯಲ್ಲಿರುವ ಇಲಾಖೆಗಳು ಕೇಂದ್ರದಕ್ಕೆ ಸೇರಿ ವಿಕೇಂದ್ರೀಕರಣ ಆಗುವ ಬದಲು ಕೇಂದ್ರೀಕರಣವಾಗುತ್ತಿದೆ ಎಂದು ಆಕ್ರೋಶಗೊಂಡಿದ್ದಾರೆ.

ಮೈಸೂರಿನಲ್ಲಿ " ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ಯ್ರ" ಎಂಬ ವಿಚಾರ ಸಂಕಿರ್ಣದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಮಾಧುಸ್ವಾಮಿ...

Posted by Pratidhvani.com on Saturday, March 27, 2021

ಬಹುರಾಷ್ಟ್ರೀಯ ಕಂಪನಿಗಳಿಂದ ಕರ್ನಾಟಕಕ್ಕೆ ಏನು ಲಾಭವಿದೆ ಎಂದು ಪ್ರಶ್ನಿಸಿದ ಮಾಧುಸ್ವಾಮಿ, ಕರ್ನಾಟಕದಲ್ಲಿರುವ ದೊಡ್ಡ-ದೊಡ್ಡ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ, ಸೌಲಭ್ಯ, ಜಾಗ ಎಲ್ಲವೂ ನಮ್ಮದಾದರೂ ಉದ್ಯೋಗ ಮಾತ್ರ ಬೇರೆಯವರ ಕೈಪಾಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಂತಹ ರಾಜ್ಯಗಳು ಅನ್ಯಾಯದ ವಿರುದ್ಧ ಹೋರಾಡಿ ಯಶಸ್ಸುಕಂಡಿವೆ. ಆದರೆ ಕರ್ನಾಟಕದ ಜನರು ಹೋರಾಟ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನೀಟ್‌ ಪರೀಕ್ಷೆಗೂ ನಮ್ಮ ಕರ್ನಾಟಕಕ್ಕೂ ಏನು ಸಂಬಂಧ? ಉತ್ತರ ಭಾರತದವರಿಗೆ ರಾಜ್ಯದಲ್ಲಿ ಹೆಚ್ಚು ಪ್ರವೇಶಾತಿಸಿಗುತ್ತಿದ್ದು, ನಾವು ಬಂಡವಾಳ ಹಾಕಿ ಸ್ವಾಗತಿಸುತ್ತಿದ್ದೇವೆ. ರಾಜ್ಯದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮುಂಬರುವ ವರ್ಷಗಳಲ್ಲಿ ವೈದ್ಯರ ಕೊರತೆ ಉಂಟಾಗಲಿದೆ. ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಶ್ನಿಸಬೇಕೆಂದು ಕಾರ್ಯಕ್ರಮಕ್ಕೆ ಭಾಗವಹಿಸಿದ ಸಂಸದ ತೇಜಸ್ವಿ ಸೂರ್ಯ ಅವರನ್ನು ಎಚ್ಚರಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com