ಜಾರಕಿಹೊಳಿ ಸಿಡಿ ಪ್ರಕರಣ: ಯುವತಿ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ..!

ಪೊಲೀಸರು ರಾಜಕಾರಣಿಗಳ ಪ್ರಭಾವಕ್ಕೊಳಗಾಗಿದ್ದಾರೆಂದು ದೂರಲಾಗಿದೆ. ಯುವತಿ ಕೋರ್ಟ್‌ನಲ್ಲಿ ನೀಡುವ ಸ್ಟೇಟ್‌ಮೆಂಟ್‌ ಇಡೀ ಕೇಸಿನ ಬೆನ್ನೆಲುಬಾಗಿದೆ ಎಂದು ವಕೀಲ ಜಗದೀಶ್‌ ಹೇಳಿದ್ದಾರೆ.
ಜಾರಕಿಹೊಳಿ ಸಿಡಿ ಪ್ರಕರಣ: ಯುವತಿ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ..!

ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣ ಸಂತ್ರಸ್ತೆ ಯುವತಿ ಸೋಮವಾರ ನ್ಯಾಯಾಲಯದ ಮುಂದೆ ಸ್ವಯಂ ಪ್ರೇರಿತ ಹೇಳಿಕೆ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಯುವತಿ ಪರ ವಕೀಲ ಕೆ.ಎನ್‌ ಜಗದೀಶ್‌ ಸಾಮಾಜಿಕ ಜಾಲತಾಣ ಮಾಹಿತಿ ಹಂಚಿಕೊಂಡಿದ್ದಾರೆ.

ನಾಳೆ ಯುವತಿ ನ್ಯಾಯಾಧೀಶರ ಮುಂದೆ ಹಾಜರಾದರೆ ನಿಯಮ 164ರ ಅಡಿ ಹೇಳಿಕೆ ನೀಡಲಿದ್ದಾರೆ. ಇದು ಪ್ರಕರಣದ ಹೊಸ ತಿರುವು ಪಡೆಯಲಿದೆ ಎಂದು ಜಗದೀಶ್‌ ತಿಳಿಸಿದ್ದಾರೆ. ಈ ವೇಳೆ ಅನ್ಯಾಯಕ್ಕೊಳಗಾದ ಮಗಳ ಪರ ಪೋಷಕರು ನಿಲ್ಲಬೇಕೆಂದು ಕೋರಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅತ್ಯಾಚಾರ ಹಾಗು ಸುಲಿಗೆ ಕೇಸ್‌ ಸಂಬಂಧ ಎರಡು ಪರ ವಿರೋಧ ಎಫ್‌ಐಆರ್‌ ತನಿಖೆಯನ್ನು ಒಂದೇ ತನಿಖಾ ಸಂಸ್ಥೆ ನಡೆಸುತ್ತಿದ್ದು, ತಾರತಮ್ಯ ಆಗಬಹುದು ಎಂದು ಆತಂಕ ವ್ಯಕ್ತಪಡಿಸುವುದರ ಜೊತೆಗೆ ಪೊಲೀಸರು ರಾಜಕಾರಣಿಗಳ ಪ್ರಭಾವಕ್ಕೊಳಗಾಗಿದ್ದಾರೆಂದು ದೂರಲಾಗಿದೆ. ಯುವತಿ ಕೋರ್ಟ್‌ನಲ್ಲಿ ನೀಡುವ ಸ್ಟೇಟ್‌ಮೆಂಟ್‌ ಇಡೀ ಕೇಸಿನ ಬೆನ್ನೆಲುಬಾಗಿದೆ.

ರಮೇಶ್‌ ಜಾರಕಿಹೊಳಿ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸುವ ಮೂಲಕ ಯುವತಿ ನೀಡಿದ ದೂರಿನ ಪ್ರತಿಯನ್ನು ವಕೀಲ ಜಗದೀಶ್‌ ಅವರು ಪೊಲೀಸ್‌ ಕಮೀಷನರ್‌ಗೆ ತಲುಪಿಸಿದ್ದು, ನಂತರ ರಮೇಶ್‌ಜಾರಕಿಹೊಳಿ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com