ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಚಾಲ್ತಿಯಲ್ಲಿರುವ ಸಿ.ಡಿ ಪ್ರಕರಣ ಡಿಕೆ ಶಿವಕುಮಾರ್ ಕಾಲಿನ ಸುತ್ತ ಸುತ್ತುತ್ತಿದೆ. ಸಂತ್ರಸ್ತೆ ಯುವತಿಯ ತಂದೆಯೇ ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದು, ಪ್ರಕರಣ ಹೊಸ ಮಜಲಿಗೆ ತಲುಪಿದೆ.
ವಿಶೇಷ ತನಿಖಾ ತಂಡ(SIT)ದ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆ ಯುವತಿಯ ತಂದೆ, ಈ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕೈವಾಡವಿರುವುದನ್ನು ಬಹಿರಂಗಗೊಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಯುವತಿ ಗೋವಾ ತೆರಳಲು ಡಿಕೆ ಶಿವಕುಮಾರ್ ನೆರವು ನೀಡಿದ್ದಾರೆಂದು ಯುವತಿ ಮನೆಯವರು ನೀಡಿರುವ ಹೇಳಿಕೆಯಲ್ಲಿ ವ್ಯಕ್ತವಾಗಿದೆ.
ನಾವು SIT ಅಧಿಕಾರಿಗಳಿಗೆ ನಮ್ಮ ಹೇಳಿಕೆಯನ್ನು ನೀಡಿದ್ದೇವೆ. ನನ್ನ ಸಹೋದರಿಯ ಆಡಿಯೊ ಕ್ಲಿಪಿಂಗ್ ಅನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದೇವೆ. ಸಂಭಾಷಣೆಯ ಸಮಯದಲ್ಲಿ, ನನ್ನ ಸಹೋದರಿ ಡಿಕೆ ಶಿವಕುಮಾರ್ ತನ್ನನ್ನು ಹೊರರಾಜ್ಯಕ್ಕೆ ಸುರಕ್ಷಿತವಾಗಿ ತಲುಪಿಸುವುದಾಗಿ ಹೇಳಿರುವುದು ದಾಖಲೆಯಾಗಿದೆ. ರಾಜಕೀಯ ದುರುದ್ದೇಶಕ್ಕಾಗಿ ಇಂತಹ ವಿಡಿಯೋಗಳನ್ನು ತಯಾರಿಸುವುದು, ಮಹಿಳೆಯರನ್ನು ಇಟ್ಟು ಧ್ವೇಷ ಸಾಧಿಸುವುದು ಸರಿಯಲ್ಲ ಎಂದು ಯುವತಿಯ ಸಹೋದರ ಹೇಳಿದ್ದಾರೆ.
ಮಾರ್ಚ್ 2 ರಂದು ತನ್ನ ಸಹೋದರಿಯ ಫೋನ್ ಆಫ್ ಆಗಿತ್ತು. ನಾವು ಆಕೆಯ ಗೆಳೆಯನಿಗೆ ಕರೆ ಮಾಡಿದಾಗ, ವಿಡಿಯೋ ತಿರುಚಲಾಗಿದೆ ಎಂದು ಹೇಳಿದ್ದಾನೆ. ಹಾಗೂ ಅವರು ಡಿಕೆಶಿ ಮನೆಯಲ್ಲಿರುವುದಾಗಿಯೂ, ಡಿಕೆ ಶಿವಕುಮಾರ್ ಆಕೆಯನ್ನು ಸುರಕ್ಷಿತವಾಗಿ ಗೋವಾಗೆ ತಲುಪಿಸುವುದಾಗಿಯೂ ಆತ ಹೇಳಿದ್ದ ಎಂದು ಸಹೋದರ ತಿಳಿಸಿದ್ದಾನೆ.
ನಾನೊಬ್ಬ ಮಾಜಿ ಸೈನಿಕ, ರಾಜಕೀಯ ಹಿತಾಸಕ್ತಿಗೋಸ್ಕರ ಪರಿಶಿಷ್ಟ ಪಂಗಡದ ಯುವತಿಯೊಬ್ಬಳನ್ನು ದುರ್ಬಳಕೆ ಮಾಡುವುದು ಅಸಹ್ಯತನ. ನಮಗೆ ಯಾರ ಮೇಲೂ ಆರೋಪ ಮಾಡಲಿಕ್ಕಿಲ್ಲ. ನಮಗೆ ನಮ್ಮ ಮಗಳು ನಮ್ಮ ಮನೆಗೆ ಹಿಂದಿರುಗಬೇಕು ಅಷ್ಟೇ. ಆಕೆಯನ್ನು ಮರಳಿ ತರಲು ನಮಗೆ ಪೊಲೀಸರ ಹಾಗೂ ಮಾಧ್ಯಮಗಳ ಸಹಾಯ ಬೇಕು. ಎಂದು ಅವರು ಹೇಳಿದ್ದಾರೆ.
ಎಸ್ಐಟಿ ತಂಡ ಯುವತಿಯ ಪೋಷಕರನ್ನು ವಿಚಾರಣೆಗೊಳಪಡಿಸುವುದು ಇದು ಎರಡನೇ ಬಾರಿ. ಈ ಹಿಂದೆ ಕಲಬುರಗಿಯಲ್ಲಿ ಒಮ್ಮೆ ತನಿಖೆಗೊಳಪಡಿಸಿತ್ತು.