ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2021-22 ರ ಬಜೆಟ್‌ನ ಪ್ರಮುಖ ಅಂಶಗಳು

ರೂ 9287.81 ಕೋಟಿ ರೂ ಆದಾಯ ನಿರೀಕ್ಷೆ ಮಾಡಿದರೆ, ರೂ 9286.86 ಕೋಟಿ ವೆಚ್ಚ ನಿರೀಕ್ಷಿಸಿ ಬಜೆಟ್‌ ಮಂಡಿಸಲಾಗಿದೆ.
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2021-22 ರ ಬಜೆಟ್‌ನ ಪ್ರಮುಖ ಅಂಶಗಳು
admin

ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಮಾರ್ಚ್‌27 ರಂದು ಪ್ರಸಕ್ತಸಾಲಿನ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿ ರೂ 9287.81 ಕೋಟಿ ಆದಾಯ ನಿರೀಕ್ಷೆ ಮಾಡಿದರೆ, ರೂ 9286.86 ಕೋಟಿ ವೆಚ್ಚ ನಿರೀಕ್ಷಿಸಿ ಬಜೆಟ್‌ ಮಂಡಿಸಲಾಗಿದೆ. ಆರ್ಥಿಕ ಸಂಕಷ್ಟದ ಹಿನ್ನಲೆ, ಆರೋಗ್ಯ ಶಿಕ್ಷಣ ಕಲ್ಯಾಣ, ಕೆರೆ ವಿಭಾಗವ್ನನು ಹೊರತುಪಡಿಸಿ, ಇತರೆ ವಿಭಾಗಕ್ಕೆ ಹೊಸ ಕಾರ್ಯಕ್ರಮವಿಲ್ಲ ಎಂದು ಘೋಷಿಸಲಾಗಿದೆ.

ಬಜೆಟ್‌ನ ಪ್ರಮುಖ ಮುಖ್ಯಂಶಗಳು

ವಾರ್ಡ್‌ ಮತ್ತು ವಲಯ ಮಟ್ಟದಲ್ಲಿ ಆರ್ಥಿಕ ನಿರ್ವಹಣೆ ಮತ್ತು ಹೊಣೆಗಾರಿಕೆಯ ವಿಕೇಂದ್ರೀಕರಣ

ಅನಾವಶ್ಯಕ ವೆಚ್ಚಗಳ ನಿಯಂತ್ರಣ

ಯಾವುದೇ ತೆರಿಗೆ ಹೆಚ್ಚಳ ಮಾಡಲ್ಲ

ಆಸ್ತಿತೆರಿಗೆಯ ಉತ್ತೇಜನಾ- ವಾರ್ಡ್‌ಗಳಲ್ಲಿ ಸಂಗ್ರಹಿಸಿದ ಆಸ್ತಿ ತೆರಿಗೆಯ ಶೇ 1 ರಷ್ಟು ಅನುದಾನ ಅಗತ್ಯ ಕೆಲಸಗಳನ್ನು ನಿರ್ವಹಿಸಲು ಅದೇ ವಾರ್ಡ್‌ಗೆ ಮೀಸಲು

ಸರ್ಕಾರದಿಂದ 2020 ಬಿಬಿಎಂಪಿ ಕಾಯ್ದೆ ಜಾರಿ

ಇ ತಂತ್ರಾಂಶವನ್ನು ಪಾಲಿಕೆಯ ಎಲ್ಲಾ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಪಾಲಿಕೆ ಲೆಕ್ಕಪತ್ರ ವಿಭಾಗಕ್ಕೆ ಸಂಬಂಧಿಸಿದಂತೆ ಮುನಿಸಿಪಲ್‌ ಅಕೌಂಟಿಂಗ್‌ ಮ್ಯಾನುಯಲ್‌ ಪದ್ಧತಿ ಜಾರಿ

ತಾಂತ್ರಿಕ ಜಾಗೃತ ಕೋಶದ ಮೂಲಕ ಕಾಮಗಾರಿಗಳ ಸ್ಥಳ ಪರಿಶೀಲನೆ

ಪಾಲಿಕೆಯಲ್ಲಿ ಆಂತರಿಕ ಲೆಕ್ಕಪರಿಶೋಧನ ವಿಭಾಗ ಸ್ಥಾಪನೆ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಾರುಕಟ್ಟೆಗಳಿಂದ 38 ಕೋಟಿ ಆದಾಯ ನಿರೀಕ್ಷೆ

ಬಾಡಿಗೆದಾರರಿಗೆ ಸಂಬಂಧಿಸಿದಂತೆ ಹೊಸ ಯೋಜನೆ

ಘನತ್ಯಾಜ್ಯ ನಿರ್ವಹಣೆ- ಸ್ವತಂತ್ರ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಸ್ಥಾಪಿಸಲು ನಿರ್ಧಾರ -1622.33 ಕೋಟಿ ರೂ ಅನುದಾನ

ನಗರದಲ್ಲಿ 67 ಹೊಸ ಶೌಚಾಲಯಗಳ ನಿರ್ಮಾಣದ ಗುರಿ

ಅಂಬೇಡ್ಕರ್‌ ಜನ್ಮದಿನವನ್ನು ಆಚರಿಸಲು ಪ್ರತಿ ಪೌರ ಕಾರ್ಮಿಕರಿಗೆ 5000 ರೂ ನೀಡಲು ತೀರ್ಮಾನ

ಪಾಲಿಕೆ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 85ಕ್ಕೂ ಹೆಚ್ಚು ಅಂಕಪಡೆದವರಿಗೆ 2500೦ ಪ್ರೋತ್ಸಾಹ ಧನ

ಶೇ 60 ರಷ್ಟು ವಿದ್ಯಾರ್ಥಿಗಳು ಮತ್ತು ಶೇ 85 ರಷ್ಟು ಅಂಕ ಪಡೆದ ಶಾಲೆಗಳ ಶಿಕ್ಷಕ ವೃಂದಕ್ಕೆ 2 ಲಕ್ಷ ಪ್ರೋತ್ಸಾಹ ಧನ

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರದಿಂದ 337 ಕೋಟಿ ರೂ ನೆರವು

ಬೀದಿನಾಯಿಗಳ ನಿಯಂತ್ರಣಕ್ಕೆ 5 ಕೋಟಿ ಅನುದಾನ

ಆಸ್ತಿಗೆ ಸಂಬಂಧಿಸಿದಂತೆ ಬಿ ಖಾತಾ ನಿರ್ವಹಣೆ ರದ್ದು, ಎ ಖಾತಾ ಮಾತ್ರ ನಿರ್ವಹಿಸಲು ತೀರ್ಮಾನ

ಮನೆಯಲ್ಲಿಯೇ ತಯಾರಿಸಿದ ಕಾಂಪೋಸ್ಟ್‌ ಗೊಬ್ಬರ ಬಳಸಿ ಅತ್ಯುತ್ತಮ ಮೇಲ್ಚಾವಣಿ ‌ ಮನೆಯ ಉದ್ಯಾನವನಕ್ಕೆ ಸ್ಪರ್ಧೆ, ಪ್ರತಿ ವಲಯಕ್ಕೆ 1 ಲಕ್ಷ ಬಹುಮಾನ

ಗಾಳಿಗುಣಮಟ್ಟದ ಪರೀಕ್ಷಾ ಸಾಧನಗಳ ಮತ್ತು ನಿರ್ವಾಹಣ ಕೇಂದ್ರದ ಸ್ಥಾಪನೆ

ವೈದ್ಯಕೀಯ ವೆಚ್ಚ ಮರುಪಾವತಿಗೆ 25 ಕೋಟಿ ಅನುದಾನ

ಉದ್ಯಾನ ನಿರ್ವಹಣೆ ಮತ್ತು ಪರಿಸರ ನಿರ್ವಹಣೆಗೆ ರೂ 214 ಕೋಟಿ ಅನುದಾನ

ಅರಣ್ಯ ಇಲಾಖೆಗೆ 39 ಕೋಟಿ ರೂ ಅನುದಾನ

ರಾಜಕಾಲುವೆಯ ಹೂಳು ತೆಗೆಯುವುದು ಮತ್ತು ನಿರ್ವಹಣೆಗೆ 60 ಕೋಟಿ ರೂ ಅನುದಾನ

ಬೆಂಗಳೂರು ನಗರಗಳ ವ್ಯಾಪ್ತಿ ಕೆರೆ ನಿರ್ವಹಣೆಗೆ 31 ಕೋಟಿ ರೂ ಅನುದಾನ

ಕೌನ್ಸಿಲ್‌ ಸಭಾಂಗಣ ಮೇಲ್ದರ್ಜೆಗೆರಿಸಲು 10 ಕೋಟಿ ರೂ ಅನುದಾನ

ನಾಗರೀಕರಿಗಾಗಿ ಪಾದಚಾರಿ ಮಾರ್ಗ ಅಭಿಯಾನ- ಪಾದಚಾರಿ ಮಾರ್ಗ ದುರಸ್ಥಿಗಾಗಿ ಪ್ರತಿ ವಾರ್ಡ್‌ ಗೆ 20 ಲಕ್ಷ ಅನುದಾನ

ಕೆರೆ ಪ್ರದೇಶ ರಕ್ಷಣೆ- ಫೆನ್ಸಿಂಗ್‌ ಅಳವಡಿಸಲು ನಿರ್ಧಾರ 10 ಕೋಟಿ ರೂ ಅನುದಾನ

ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ನೀರಿನ ಕೊಳವೆಗಳು ಮತ್ತು ಒಳಚರಂಡಿಗಾಗಿ ಅಗೆದಿರುವ ರಸ್ತೆಗಳ ದುರಸ್ಥಿಪಡಿಸಲು 1000 ಕೋಟಿ ಮೀಸಲಿಡಲಾಗಿದೆ.

ಮುಖ್ಯಮಂತ್ರಿಗಳಿಂದ 2022 ಬೆಂಗಳೂರು ಮಿಷನ್‌ ಘೋಷಣೆ – ಇದು ಮೂಲಭೂತ ಸಮಸ್ಯೆಯನ್ನು ನಿವಾರಿಸಲು ಸಹಕಾರಿ, ನಗರವನ್ನು ಜಾಗತೀಕ ತಾಣವನ್ನಾಗಿ ಮಾಡಲು ಸರ್ಕಾರದಿಂದ ಸಾಕಷ್ಟು ಸಂಪನ್ಮೋಲಗಳನ್ನು ಒದಗಿಸಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com