ಬೆಳಗಾವಿಯಲ್ಲಿ ಕಣಕ್ಕಿಳಿಯಲು ಶಿವಸೇನೆ-MES ಚಿಂತನೆ: ಮರಾಠ ಮತವನ್ನು ಕಳೆದುಕೊಳ್ಳುವ ಆತಂಕದಲ್ಲಿ ಬಿಜೆಪಿ

ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿ ಮತದಾರರ ಸಂಖ್ಯೆ ಹೆಚ್ಚಿದೆ. ಎಂಇಎಸ್‌ ಸ್ಪರ್ಧೆಯೊಂದಿಗೆ ಈ ಮತಗಳು ಬಿಜೆಪಿ ಹಾಗೂ ಎಂಇಎಸ್‌ ನಡುವೆ ಹಂಚಿಹೋಗಲಿದೆ.
ಬೆಳಗಾವಿಯಲ್ಲಿ ಕಣಕ್ಕಿಳಿಯಲು ಶಿವಸೇನೆ-MES ಚಿಂತನೆ: ಮರಾಠ ಮತವನ್ನು ಕಳೆದುಕೊಳ್ಳುವ ಆತಂಕದಲ್ಲಿ ಬಿಜೆಪಿ

ಸಾಕಷ್ಟು ಕುತೂಹಲ ಮೂಡಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಂಟಕಗಳು ಎದುರಾಗಿವೆ. ಒಂದು ಕಡೆ ಕಾಂಗ್ರೆಸ್‌ ಸತೀಶ್‌ ಜಾರಕಿಹೊಳಿಯಂತಹ ಪ್ರಭಾವಿ ರಾಜಕಾರಣಿಯನ್ನು ಕಣಕ್ಕಿಳಿಸುತ್ತಿದ್ದರೆ, ಇನ್ನೊಂದೆಡೆ ತನ್ನ ಸಾಂಪ್ರದಾಯಿಕ ಮತಬ್ಯಾಂಕ್‌ ವಿಭಜನೆಯಾಗುವ ಆತಂಕವನ್ನೂ ಬಿಜೆಪಿ ಎದುರಿಸುತ್ತಿದೆ.

ಬೆಳಗಾವಿಯಲ್ಲಿ ಮರಾಠ ಮತದಾರರ ಸಂಖ್ಯೆ ನಿರ್ಣಾಯಕವಾಗಿದ್ದು, ಈ ಮತವನ್ನು ಬಿಜೆಪಿ ತನ್ನ ಖಾತೆಯಲ್ಲಿ ಭದ್ರಗೊಳಿಸಿತ್ತು. ಇತ್ತೀಚೆಗೆ, ಕನ್ನಡಿಗರ ವಿರೋಧ ಕಟ್ಟಿಕೊಂಡು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ಹಿಂದೆಯೂ ಈ ಮತವನ್ನು ಉಳಿಸಿಕೊಳ್ಳುವ ಬಿಜೆಪಿಯ ತಂತ್ರಗಾರಿಕೆಯೇ ಕೆಲಸ ಮಾಡಿದೆ ಎನ್ನಲಾಗಿದೆ. ಆದರೆ, ಇದೀಗ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗುವಂತೆ ಶಿವಸೇನೆ- MES (ಮಹಾರಾಷ್ಟ್ರ ಏಕೀಕರಣ ಸಮಿತಿ) ಬೆಳಗಾವಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಸುಳಿವು ನೀಡಿರುವ ಮಾಜಿ ಶಾಸಕ ಎಂಇಎಸ್‌ ಮುಖಂಡ ಮನೋಹರ ಕಿಣೆಕರ್‌, ಎಂಇಎಸ್‌ ಅಥವಾ ಶಿವಸೇನೆ ಪರವಾಗಿ ನಾವು ಒಂದು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದೇವೆ. ಈ ಭಾಗದಲ್ಲಿ ಎಂಇಎಸ್‌ ಪ್ರಭಾವಿಯಾಗಿದೆ. ಹಾಗೂ ಶಿವಸೇನಾ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿದ್ದೇವೆ. ಶಿವಸೇನೆಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಶಿವಸೇನೆ ಅಥವಾ ಎಂಇಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೇ ಆಗಿದ್ದರೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ನಿರಂತರ ಗೆದ್ದಿದ್ದ ಬಿಜೆಪಿಗೆ ಎಂಇಎಸ್‌ ಹಾಗೂ ಶಿವಸೇನೆ ಕಂಟಕಪ್ರಾಯವಾಗಲಿವೆ.

ಬೆಳಗಾವಿಯಲ್ಲಿ ಕಣಕ್ಕಿಳಿಯಲು ಶಿವಸೇನೆ-MES ಚಿಂತನೆ: ಮರಾಠ ಮತವನ್ನು ಕಳೆದುಕೊಳ್ಳುವ ಆತಂಕದಲ್ಲಿ ಬಿಜೆಪಿ
ತೇಜಸ್ವಿನಿಯವರಿಗಿಲ್ಲದ ಟಿಕೆಟ್ ಮಂಗಳಾರಿಗೆ ಏಕೆ? ಬಿಜೆಪಿ ದ್ವಿಮುಖ ನೀತಿಗೆ ಬೆಂಬಲಿಗರ ಛೀಮಾರಿ

ಕಳೆದ ಕೆಲವು ತಿಂಗಳುಗಳಿಂದ, ಕರ್ನಾಟಕದ ಬಿಜೆಪಿ ಸರ್ಕಾರ ಮತ್ತು ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರದ ನಡುವೆ ಗಡಿ ವಿವಾದದ ಬಗ್ಗೆ ಭಿನ್ನಾಭಿಪ್ರಾಯವಿದೆ, ಇದು ಗಡಿಯಲ್ಲಿ ಹಿಂಸಾಚಾರ ಮತ್ತು ಉದ್ವಿಗ್ನತೆಗೆ ಕಾರಣವಾಗಿದೆ. ಇದುವರೆಗೂ ಬಿಜೆಪಿಗೆ ಬೆಂಬಲಿಸಿಕೊಂಡು ಬಂದಿದ್ದ ಎಂಇಎಸ್‌ ಹಾಗೂ ಶಿವಸೇನೆಗೆ ಕರ್ನಾಟಕದಲ್ಲಿ ಇದು ಮೊದಲ ಉಪಚುನಾವಣೆಯಾಗಲಿದೆ.

ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿ ಮತದಾರರ ಸಂಖ್ಯೆ ಹೆಚ್ಚಿದೆ. ಎಂಇಎಸ್‌ ಸ್ಪರ್ಧೆಯೊಂದಿಗೆ ಈ ಮತಗಳು ಬಿಜೆಪಿ ಹಾಗೂ ಎಂಇಎಸ್‌ ನಡುವೆ ಹಂಚಿಹೋಗಲಿದೆ. ಇದರ ನೇರ ಲಾಭವನ್ನು ಕಾಂಗ್ರೆಸ್‌ ಪಡೆಯಲಿದೆ ಎನ್ನಲಾಗಿದೆ.

Source: Indian Express

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com