ಎಲೆಕ್ಟ್ರಾನಿಕ್ ರಿಪೇರಿಯಲ್ಲಿ ಬದುಕು ಅರಳಿಸಿದ ಸಾವಿತ್ರಿ: ಗದಗದಲ್ಲೊಬ್ಬಳು ಮಾದರಿ ಸ್ತ್ರೀ

ಎಲೆಕ್ಟ್ರಾನಿಕ್ಸ್ ವಸ್ತುಗಳ ಕುರಿತು ಏನನ್ನು ಅರಿಯದ ಇವಳಿಗೆ ಜೀವನ ನಿರ್ವಹಣೆಗಾಗಿ ಸಣ್ಣಪುಟ್ಟ ರಿಪೇರಿಗಳನ್ನು ಮಾಡುತ್ತಿದ್ದ ಪತಿ ದ್ಯಾಮಪ್ಪ ಆರಂಭದಲ್ಲಿ ತರಬೇತಿಯನ್ನು ನೀಡಿದ್ದಾರೆ.
ಎಲೆಕ್ಟ್ರಾನಿಕ್ ರಿಪೇರಿಯಲ್ಲಿ ಬದುಕು ಅರಳಿಸಿದ ಸಾವಿತ್ರಿ: ಗದಗದಲ್ಲೊಬ್ಬಳು ಮಾದರಿ ಸ್ತ್ರೀ

ಇದು ಗದಗ್ ಹತ್ತಿರದ ನರೇಗಲ್ ಎಂಬ ಪಟ್ಟಣದ ಮಹಿಳೆಯ ಸಾಗಸಗಾಥೆ. ಎಲೆಕ್ಟ್ರಾನಿಕ್ ರಿಪೇರಿಯ ಸ್ವಯಂ ಉದ್ಯೋಗದಲ್ಲಿ ಬದುಕು ಕಟ್ಟಿಕೊಂಡ ಮಹಿಳೆಯೊಬ್ಬರು ಕೆಲಸವಿಲ್ಲ ಎಂದು ಅಲೆಯುವ ಯುವಕ, ಯುವತಿಯರಿಗೆ ಮಾದರಿಯಾಗಿದ್ದು, ಕಷ್ಟಪಟ್ಟು ಬದುಕಬೇಕೆಂಬ ಛಲವಿದ್ದರೇ ಮಾತ್ರ ಬದುಕು ಅರಳುತ್ತದೆ ಎನ್ನುವುದಕ್ಕೆ ಪಟ್ಟಣದ ಸಾವಿತ್ರಿ ಕಡತೋಟದ ಸಾಕ್ಷಿಯಾಗಿದ್ದಾರೆ. ಸಮಾನ ನ್ಯಾಯ ಹಾಗೂ ಸಮಾನವಾದ ಮಿಸಲಾತಿ ಇದ್ದರು ಅದೆಷ್ಟೋ ಮಹಿಳೆಯರು ಮದುವೆಯಾದ ನಂತರ ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಹೆದರುತ್ತಾರೆ. ಆದ್ರೆ ಇವಳು ಸಮಾಜದಲ್ಲಿ ನಾವು ಯಾರಿಗೆನೂ ಕಮ್ಮಿಯಿಲ್ಲ ಎಂಬಂತೆ ಇಲ್ಲಿನ ಐತಿಹಾಸಿಕ ಹಿರೇಕೆರೆಯ ಸಮೀಪ ಇರುವ ಭೂಥನಾತೇಶ್ವರ ದೇವಸ್ಥಾನದ ಪಕ್ಕದಲ್ಲಿ ಎಲೆಕ್ಟ್ರಾನಿಕ್ ರಿಪೇರಿ ಅಂಗಡಿಯನ್ನು ಹಾಕಿಕೊಂಡು ಸ್ವಯಂ ಉದ್ಯೋಗ ಜತೆಗೆ ಜೀವನವನ್ನ ನಡೆಸುತ್ತಿದ್ದಾಳೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಲೆಕ್ಟ್ರಾನಿಕ್ಸ್ ವಸ್ತುಗಳ ಕುರಿತು ಏನನ್ನು ಅರಿಯದ ಇವಳಿಗೆ ಜೀವನ ನಿರ್ವಹಣೆಗಾಗಿ ಸಣ್ಣಪುಟ್ಟ ರಿಪೇರಿಗಳನ್ನು ಮಾಡುತ್ತಿದ್ದ ಪತಿ ದ್ಯಾಮಪ್ಪ ಆರಂಭದಲ್ಲಿ ತರಬೇತಿಯನ್ನು ನೀಡಿದ್ದಾರೆ. ಎಲೆಕ್ಟ್ರಾನಿಕ್ ವಸ್ತುಗಳ ಕುರಿತು ಮಾಹಿತಿ ನೀಡಿ ಪ್ರೋತ್ಸಾಹಿದ್ದಾನೆ. ನಂತರ ಕಲಿಕೆಯಲ್ಲಿ ಆಸಕ್ತಳಾದ ಇವಳು ಮಿಕ್ಸಿ, ಸೀಲಿಂಗ್ ಫ್ಯಾನ್, ಟೆಬಲ್ ಫ್ಯಾನ್, ಇಸ್ತ್ರಿ ಪೆಟ್ಟಿಗೆ, ಗ್ಯಾಂಗ್ ಬಾಕ್ಸ್, ಬ್ಯಾಟರಿ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿಗೂ ಸೈ ಎಂದಿದ್ದಾಳೆ. ಸುತ್ತಮುತ್ತಲಿನ ಗ್ರಾಮಗಳಾದ ಮಾರನಬಸರಿ, ಜಕ್ಕಲಿ, ಅಬ್ಬಿಗೇರಿ, ಕೋಚಲಾಪುರ, ತೋಟಗಂಟಿ, ದ್ಯಾಂಪುರ, ಹಾಲಕೆರೆ, ಕೊಪ್ಪ, ಬೂದಿಹಾಳ, ಕೋಟುಮಚಗಿ ಗ್ರಾಮಗಳ ಗ್ರಾಹಕರು ತಮ್ಮ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಏನೇ ಸಮಸ್ಯೆ ಬಂದರು ಬೋರ್ಡ್ ಇಲ್ಲದ ಇವಳ ಅಂಗಡಿಯನ್ನು ಹುಡಿಕೊಂಡು ಬರುತ್ತಾರೆ. ಪ್ರತಿ ದಿನ ಕನಿಷ್ಟ 5 ರಿಂದ 10 ರಿಪೇರಿಗಳನ್ನು ಬಿಡುವಿಲ್ಲದೇ ಮಾಡುತ್ತಾಳೆ. ಸುತ್ತಲು ಕ್ಷೌರಿಕ ಹಾಗೂ ಚಿಕನ್ ಅಂಗಡಿಗಳು ಹಾಗೂ ಪುರುಷರ ಒಡಾಟವೇ ಹೆಚ್ಚಿರುವ ಜಾಗದಲ್ಲಿ ಇವರ ಅಂಗಡಿ ಇದೆ. ಮೊದಲಿಗೆ ಭಯಪಟ್ಟ ಇವಳು ಆರಂಭದಲ್ಲಿ ಎದುರಾದ ಸಂಕಷ್ಟಗಳಿಗೆ ಧೃತಿಗೆಡೆ ಅಗ್ಗದ ದರದಲ್ಲಿ ಗ್ಯಾರಂಟಿ ರಿಪೇರಿ ಮಾಡುವ ಮೂಲಕ ಗ್ರಾಹಕರ ಮೆಚ್ಚುಗೆಯನ್ನು ಪಡೆದಿದ್ದಾಳೆ.

ಬಿ.ಎ. ಪದವೀಧರಳಾದ ಇವಳು ಕೇವಲ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿಯಲ್ಲಿ ನಿಲ್ಲದೇ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿಯವರು ನೀಡುವ ಕೌಶಲ್ಯಾಭಿವೃದ್ದಿ ತರಬೇತಿಗೆ ಸೇರಿಕೊಂಡಿದ್ದಾಳೆ. ಧಾರವಾಡದಿಂದ ತರಬೇತಿ ನೀಡಲು ಬಂದಿದ್ದ ಜಗದೀಶ ಪೂಜಾರ ಅವರ ಬಳಿ ತಾವು ಮೋಟಾರ ವೆಂಡಿಂಗ್ ಕಲಿಯುವುದಾಗಿ ತಿಳಿಸಿದ್ದಾರೆ. ಪುರುಷರೇ ಮಾಡುವ ಈ ಕೆಲಸವನ್ನು ಮಹಿಳೆ ಮಾಡುತ್ತೇನೆ ಎಂದಾಗ ಮೊದಲಿಗೆ ಹಿಂದೇಟು ಹಾಕಿದ ಅವರು ನಂತರ ಧಾರವಾಡದಲ್ಲಿ ಇರುವ ರುಡಸೇಟ್ ತರಬೇತಿ ಕೇಂದ್ರದವರೊಂದಿಗೆ ಮಾತನಾಡಿ ಒಪ್ಪಿಸಿದ್ದಾರೆ.

30 ಜನರ ಮೋಟಾರ ವೆಂಡಿಂಗ್ ತರಬೇತಿ ಶಿಬಿರದ ಬ್ಯಾಚ್‌ನಲ್ಲಿ ಸಾವಿತ್ರಿ ಒಬ್ಬಳೆ ಮಹಿಳೆ. 5 ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಒಂದು ತಿಂಗಳು ತರಬೇತಿಯಲ್ಲಿ ಪಾಲ್ಗೊಂಡ ಇವಳು ಹೆಚ್ಚಿನ ಆಸಕ್ತಿಯಿಂದ ಪ್ರತಿ ಪ್ರಾಯೋಗಿಕ ತರಗತಿಯಲ್ಲಿ ಪಾಲ್ಗೊಂಡಿದ್ದಾಳೆ. 3 ಫೇಸ್ ವೆಂಡಿಂಗ್ (ಕೃಷಿ ಆಧಾರಿತ ಹಾಗೂ ದೊಡ್ಡ ಮೋಟಾರ) ಹಾಗೂ ಸಿಂಗಲ್ ಫೇಸ್ ವೆಂಡಿಂಗ್ (ಮನೆಯಲ್ಲಿ ಬಳಕೆ ಮಾಡುವ ಮೋಟಾರ) ಎರಡು ತರಬೇತಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಾಗಿ ರಾಷ್ಟ್ರಮಟ್ಟದ ಕೌಶಲ್ಯಾಭಿವೃದ್ದಿಯ ಹಿರಿಯ ತರಬೇತುದಾರ ಜಯರಾಜ ಬಳ್ಳಾರಿಯವರ ಮೆಚ್ಚಿಗೆಗೆ ಪಾತ್ರವಾಗಿದ್ದಾಳೆ. ಇದೇ ವರ್ಷ ಜುಲೈ ತಿಂಗಳಲ್ಲಿ ಸ್ಕಿಲ್ ಇಂಡಿಯಾದ ಅಡಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಮಹಿಳೆಯರೊಂದಿಗೆ ಪ್ರೋಜೆಕ್ಟರ್‌ ಮೂಲಕ ನಡೆಸಿದ ಸಂವಾದದಲ್ಲಿ ಧಾರವಾಡ ಜಿಲ್ಲಾ ಪಂಚಾಯಿತಿಯಿಂದ ಪಾಲ್ಗೊಂಡಿದ್ದಳು.

ಮನೆಯಲ್ಲಿ ಖಾಲಿ ಕೂಡಬಾರದು ಮಹಿಳೆಯರು ಕುಟುಂಬ ಮತ್ತು ಮನೆ ನಿರ್ವಹಿಸುವುದರ ಜತೆಗೆ ಸ್ವಯಂ ಉದ್ಯೋಗವನ್ನು ಕಲಿಯಬೇಕು ಎಂದು ಪ್ರೋತ್ಸಾಹಿಸಿದ ಮನೆಯವರಿಗೆ ಧನ್ಯವಾದ ಹೇಳುವ ಇವಳು ಎಲೆಕ್ಟ್ರಾನಿಕ್ ಹಾಗೂ ಮೋಟಾರ ವೆಂಡಿಂಗ್‌ನಲ್ಲಿ ಇನ್ನೂ ಹೆಚ್ಚಿನ ತರಬೇತಿ ಪಡೆದುಕೊಳ್ಳುವ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ. ಇದೇ ವೃತ್ತಿಯಲ್ಲಿ ಉನ್ನತ ಮಟ್ಟದ ಸಾಧನೆಯನ್ನು ಮಾಡುವ ಕನಸನ್ನು ಕಟ್ಟಿಕೊಂಡಿದ್ದೇನೆ. ಈ ಉದ್ಯೋಗ ನಮ್ಮ ಸಂಸಾರಕ್ಕೆ ಆಧಾರವಾಗಿದೆ ಹೀಗಾಗಿ ಇದೇ ನಮಗೆ ಆದಾಯ ಕೊಡುವ ಕಾಯಕವಾಗಿದೆ ಎನ್ನುತ್ತಾಳೆ.

ಸಾವಿತ್ರಿಯವರ ಪತಿ ದ್ಯಾಮಪ್ಪ ಕಡತೋಟದ ಅವರಿಗೆ ಪತ್ನಿಯ ಬಗ್ಗೆ ಕೇಳಿದಾಗ ಹೆಮ್ಮೆಯಿಂದ ಹೇಳಿದ್ದು ಹೀಗೆ, “ಮಹಿಳೆಯರು ಪುರುಷರಿಗಿಂತ ಯಾವು ಉದ್ಯೋಗದಲ್ಲಿಯೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ. ಸ್ವಾವಲಂಬಿ ಛಲವನ್ನು ಹೊಂದಿ ಆರ್ಥಿಕ ಸಂಪಾದನೆಗೆ ಅಣಿಯಾಗಿ ಸಂಸಾರಕ್ಕೆ ನೆರವಾಗಿದ್ದಾಳೆ”.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com