ರೈತ ಮುಖಂಡ ಯುದ್ದ್‌ವೀರ್‌ ಸಿಂಗ್ ಬಂಧನ: ದೇಶಾದ್ಯಂತ ಚಳವಳಿಗಾರರಿಂದ ಖಂಡನೆ

ಪ್ರಜಾಸತ್ತಾತ್ಮಕವಾದ ಹೋರಾಟಗಾರರ ಬಂಧಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ರೈತ ಮುಖಂಡ ಯುದ್ದ್‌ವೀರ್‌ ಸಿಂಗ್ ಬಂಧನ: ದೇಶಾದ್ಯಂತ ಚಳವಳಿಗಾರರಿಂದ ಖಂಡನೆ

ಗುಜರಾತಿನಲ್ಲಿ ರೈತ ಮಹಾಪಂಚಾಯತ್‌ ಕುರಿತು ಪತ್ರಿಕಾಗೋಷ್ಟಿ ನಡೆಸುತ್ತಿದ್ದ ರೈತ ಮುಖಂಡ ಯುದ್ದ್‌ವೀರ್‌ ಸಿಂಗ್‌ ಅವರನ್ನು ಹಠಾತನೆ ಪೊಲೀಸರು ಬಂಧಿಸಿದ್ದಾರೆ.

ಗುಜರಾತಿನ ಖಾಸಗಿ ಹೋಟೆಲ್‌ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಭಾರತೀಯ ಕಿಸಾನ್‌ ಯೂನಿಯನ್‌ನ ರಾಷ್ಟ್ರೀಯ ಕಾರ್ಯದರ್ಶಿ ಯುದ್ದ್‌ವೀರ್‌ ಸಿಂಗ್‌, ಜೆ ಕೆ ಪಟೇಲ್‌ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ನಡೆಗೆ ದೇಶವ್ಯಾಪಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ವಿನಾಶ ಮಸೂದೆಗಳ ವಿರುದ್ಧ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೂರ್ಚಾದ ಮುಖಂಡ ಯುದ್ದ್‌ವೀರ್‌ ಸಿಂಗ್ ರವರನ್ನು ಪೊಲೀಸರು ದಬ್ಬಾಳಿಕೆಯಿಂದ ಬಂಧಿಸಿರುವುದನ್ನು ಕರ್ನಾಟಕ ರೈತ ಸಂಘಗಳು ಕೂಡಾ ಖಂಡಿಸಿವೆ.

ರೈತ ಮುಖಂಡ ಯುದ್ದ್‌ವೀರ್‌ ಸಿಂಗ್ ಬಂಧನ: ದೇಶಾದ್ಯಂತ ಚಳವಳಿಗಾರರಿಂದ ಖಂಡನೆ
ನಮ್ಮ ಹೋರಾಟ ಭ್ರಷ್ಟ ವ್ಯವಸ್ಥೆಯ ವಿರುದ್ಧ: ಯುದ್ಧವೀರ್ ಸಿಂಗ್

ಕೇಂದ್ರ ಸರ್ಕಾರ ಪೊಲೀಸ್ ಬಲದ ಮೂಲಕ ರೈತ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ. ಪ್ರಜಾಸತ್ತಾತ್ಮಕವಾದ ಹೋರಾಟಗಾರರ ಬಂಧಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಏಪ್ರಿಲ್ 4 ಮತ್ತು 5 ರಂದು ಗುಜರಾತಿನಲ್ಲಿ ಕಿಸಾನ್ ಮಹಾಪಂಚಾಯತ್‌ಗಳು ನಡೆಯಲಿವೆ. ಈ ಸಂಬಂಧ ಪತ್ರಿಕಾಗೋಷ್ಟಿ ನಡೆಸಲಾಗಿತ್ತು. ಗುಜರಾತ್ ಸರ್ಕಾರ ಯಾವುದೇ ಮಾಹಿತಿ ನೀಡದೇ ಬಂಧಿಸಿದೆ. ಗುಜರಾತ್ ಸರ್ಕಾರದ ಸರ್ವಾಧಿಕಾರಿತನದ ವಿರುದ್ಧ ಕೇಂದ್ರಸರ್ಕಾರ ಕಡ್ಡಾಯವಾಗಿದೆ ಕ್ರಮಕೈಗೊಳ್ಳಬೇಕೆಂದು ಎಂದು ಕಿಸಾನ್ ಏಕ್ತಾ ಮೋರ್ಚಾ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದೆ.

ರೈತ ಮುಖಂಡ ಯುದ್ದ್‌ವೀರ್‌ ಸಿಂಗ್ ಬಂಧನ: ದೇಶಾದ್ಯಂತ ಚಳವಳಿಗಾರರಿಂದ ಖಂಡನೆ
ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ ಪೊಲೀಸರ ಸ್ವಯಂಪ್ರೇರಿತ ದೂರು

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com