ಮಹಾದಾಯಿ ಹೋರಾಟಕ್ಕೆ ಇದೀಗ 2075 ದಿನಗಳು: ಏಪ್ರಿಲ್ 6 ಕ್ಕೆ ಕಣಕುಂಬಿಯಲ್ಲಿ ಕೋಟಿ ಜಪ ಯಜ್ಞ

ಕಳೆದ ವರ್ಷ 500 ಕೋಟಿ ಮೀಸಲಿಟ್ಟ ರಾಜ್ಯ ಸರ್ಕಾರ, ಪ್ರಸಕ್ತ ವರ್ಷ 1677 ಕೋಟಿಯನ್ನು ಬಜೆಟ್ ನಲ್ಲಿ ಮೀಸಲಿರಿಸಿದೆ. ಹಣವೇನೋ ಮೀಸಲಿರಿಸುತ್ತಾರೆ ಆದರೆ ಅದರ ಕಾಮಗಾರಿಯ ಅನುಷ್ಠಾನ ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮಹಾದಾಯಿ ಹೋರಾಟಕ್ಕೆ ಇದೀಗ 2075 ದಿನಗಳು: ಏಪ್ರಿಲ್ 6 ಕ್ಕೆ ಕಣಕುಂಬಿಯಲ್ಲಿ ಕೋಟಿ ಜಪ ಯಜ್ಞ

ಮಹಾದಾಯಿ ಹೋರಾಟಕ್ಕೆ 2075 ಕ್ಕೂ ಅಧಿಕ ದಿನಗಳು ಕಳೆದರೂ ಇನ್ನೂ ನೀರು ಸಿಕ್ಕಿಲ್ಲ. ನೀರು ಮನೆಗಳಿಗೆ ಯಾವಾಗ ಬರುತ್ತವೆ, ಹೊಲಗಳಿಗೆ ಯಾವಾಗ ಸಿಗುತ್ತವೆ ಎಂಬ ಉತ್ತರಕ್ಕೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಯ ಜನರು ಕಾತರದಿಂದ ಕಾದು ಕಾದು ಸುಸ್ತಾಗಿದ್ದಾರೆ. ಒಂದು ಹೋರಾಟ ಇಷ್ಟು ದಿನಗಳ ವರೆಗೆ ನಡೆಯಬಹುದು ಎಂಬುದು ನೋಡಿದ್ದೆ ಮೊದಲ ಸಲ. ಪ್ರತಿದಿನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಹಳ ರೈತರು ನೀರಿಗಾಗಿ ಕಾಯುತ್ತಿದ್ದಾರೆ.

ಕಳೆದ ವರ್ಷ 500 ಕೋಟಿ ಮೀಸಲಿಟ್ಟ ರಾಜ್ಯ ಸರ್ಕಾರ, ಪ್ರಸಕ್ತ ವರ್ಷ 1677 ಕೋಟಿಯನ್ನು ಬಜೆಟ್ ನಲ್ಲಿ ಮೀಸಲಿರಿಸಿದೆ. ಹಣವೇನೋ ಮೀಸಲಿರಿಸುತ್ತಾರೆ ಆದರೆ ಅದರ ಕಾಮಗಾರಿಯ ಅನುಷ್ಠಾನ ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಮಹದಾಯಿ ಕಾಮಗಾರಿ ಕೈಗೊಳ್ಳುವಂತೆ ಸಾವಿರಾರಯ ಮನವಿಗಳನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಿದರೂ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಷ್ಟೆಲ್ಲ ಆದರೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂಬಂತೆ ಮಹದಾಯಿ ಹೋರಾಟಗಾರರು ಇದೇ ಏಪ್ರಿಲ್ 6 ರಂದು ಮಹದಾಯಿ ಉಗಮ ಸ್ಥಾನ ಕಣಕುಂಬಿಯಲ್ಲಿ ಕೋಟಿ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ರೈತಸೇನಾ ಕರ್ನಾಟಕ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ ಮಾಧ್ಯಮದವರೊಂದಿಗೆ ಮಾತನಾಡಿ, “ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಧಾರವಾಡ, ಬಾಗಲಕೋಟೆ, ಗದಗ, ಬೆಳಗಾವಿ ಜಿಲ್ಲೆಗಳ ಸಾವಿರಾರು ರೈತರು ನಮ್ಮೊಂದಿಗೆ ಈ ಹೋರಾಟದಲ್ಲಿ ಕೈಜೋಡಿಸಿ. ನಾವೆಲ್ಲಒಂದಾಗಿ ಹೀಗೆ ಹೋರಾಟ ಮುಂದುವರೆಸೋಣ” ಎಂದರು.

ಮಹಾದಾಯಿ ಹೋರಾಟಕ್ಕೆ ಇದೀಗ 2075 ದಿನಗಳು: ಏಪ್ರಿಲ್ 6 ಕ್ಕೆ ಕಣಕುಂಬಿಯಲ್ಲಿ ಕೋಟಿ ಜಪ ಯಜ್ಞ
ಮಹಾದಾಯಿ ಕಾಮಗಾರಿ ಮುಂದುವರೆಸುತ್ತೇವೆ – ಪ್ರಹ್ಲಾದ್ ಜೋಷಿ

ಉತ್ತರ ಕರ್ನಾಟಕದ ರೈತರೊಬ್ಬರು, “ನಾವೆಲ್ಲ ಇಷ್ಟು ದಿನವಾದರೂ ನೀರು ಸಿಗುತ್ತೆ ಎಂಬ ಭರವಸೆಯಿಂದ ಕಾಯುತ್ತಿದ್ದೇವೆ. ನಮ್ಮ ಹೋರಾಟದ ಮೇಲೆ ನಮಗೆ ನಂಬಿಕೆಯಿದೆ. ನಮ್ಮಲ್ಲಿರುವ ೆಷ್ಟೋ ಜನ ರೈತರ ಹೊಲಗಳಿಗೆ ನೀರಿಲ್ಲ, ಭೂಮಿ ಒಣಗುತ್ತಿದೆ. ಹವಾಮಾನ ವೈಪರೀತ್ಯದಿಂದ ಫಸಲು ಕೈಗೆ ಸಿಗುತ್ತಿಲ್ಲ. ಇಷ್ಟೆಲ್ಲ ಸಂಕಷ್ಟಗಳ ಮಧ್ಯೆ ಹೋರಾಟ ಮುಂದುವರೆಸಿಕೊಂಡು ಹೋಗುವಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತ ಈ ಬಾರಿ ನಡೆಯುವ ಕೋಟಿ ಜಪಯಜ್ಞದಲ್ಲಿ ಪಾಲ್ಗೊಳ್ಳಿ ಎಂದು ವಿನಂತಿಸುವೆ”.

ಅನಸವ್ವ ಹಿರೇಮಠ ಎಂಬ ರೈತ ಮಹಿಳೆಯೊಬ್ಬರು, “ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಕಾಮಗಾರಿ ಅನೇಕ ಕಾರಣಗಳಿಂದ ವಿಳಂಬವಾಗುತ್ತಿದೆ. ಈಗ ಅವರಿರವರನ್ನು ದೂಷಿಸುವುದು ಸರಿಯಲ್ಲ. ಇದು ಯಾವುದೇ ಪಕ್ಷಕ್ಕೆ ಅಂತಲ್ಲ, ಜನಪ್ರತಿನಿಧಿಗಳು ಮುಂದೆ ನಿಂತು ಮಾಡಬೇಕಾದ ಕರ್ತವ್ಯ. ಇನ್ನಾದರೂ ಎಲ್ಲರೂ ಒಟ್ಟಾಗಿ ವಿನಂತಿಸಿಕೊಳ್ಳೋಣ, ವಿನೂತನೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳೋಣ. ಕೋಟಿ ಜಪಯಜ್ಞದಿಂದ ಆ ಭಗವಂತ ಭಗೀರಥನಾಗಿ ನೀರು ಹರಿಸಲಿ ಎಂಬ ಮಹದಾಸೆ ನಮ್ಮೆಲ್ಲರ ಮನದಲ್ಲಿದೆ. ಅದೂ ಕೈಗೂಡಲಿದೆಯೂ ಕೂಡ. ಇದು ನಮ್ಮೆಲ್ಲ ಹೋರಾಟಗಾರರ ಅಚಲ ನಂಬಿಕೆ”.

ಮಹಾದಾಯಿ ಹೋರಾಟಕ್ಕೆ ಇದೀಗ 2075 ದಿನಗಳು: ಏಪ್ರಿಲ್ 6 ಕ್ಕೆ ಕಣಕುಂಬಿಯಲ್ಲಿ ಕೋಟಿ ಜಪ ಯಜ್ಞ
ಮಹಾದಾಯಿ ನದಿ ವಿವಾದದ ಕುರಿತು ಭಾರತ ಸರ್ಕಾರ ಹೊರಡಿಸಿದ ಗೆಜೆಟ್‌

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com