ಸುಧಾಕರ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸಿದ್ದರಾಮಯ್ಯ

ಇಂತಹ ಕೀಳು ಮಟ್ಟದ ಪುರುಷ ರಾಜಕಾರಣಿಗಳ ಕಾರಣದಿಂದಾಗಿಯೇ ರಾಜಕೀಯ ಪ್ರವೇಶಕ್ಕೆ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಸಿದ್ದರಾಮಯ್ಯ ಆರೋಪಿಸಿದ್ದಾರೆ
ಸುಧಾಕರ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸಿದ್ದರಾಮಯ್ಯ

ಏಕಪತ್ನಿ ವೃತಸ್ಥ ಸವಾಲಿನ ಕುರಿತಂತೆ ಆರೋಗ್ಯ ಸಚಿವ ಡಾ. ಸುಧಾಕರ್‌ ವಿಷಾದ ವ್ಯಕ್ತಪಡಿಸಿದ್ದರೂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅದನ್ನು ಸುಮ್ಮನೆ ಬಿಡುವಂತೆ ಕಾಣುತ್ತಿಲ್ಲ. ಇದೀಗ, ವಿವಾದಾತ್ಮಕ ಹೇಳಿಕೆ ಸಂಬಂಧ ಸುಧಾಕರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸಚಿವ ಡಾ.ಸುಧಾಕರ್ ನೀಡಿರುವ ನಿಂದನಾತ್ಮಕ ಹೇಳಿಕೆಯಿಂದ ರಾಜ್ಯದ 225 ಶಾಸಕರ ಮಾನಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿಯವರ ಸಿಡಿ ಹಗರಣದ ಜೊತೆ ಈ ಆರೋಪದ ಬಗ್ಗೆಯೂ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿದ್ದಾರೆ.

ಕಾನೂನಿನ ಹೋರಾಟದ ಮೂಲಕ ಈ ಪ್ರಕರಣವನ್ನು ಎದುರಿಸಲು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇವೆ. ಇಂತಹ ಮಾನಹಾನಿಕರ ಹೇಳಿಕೆ ನೀಡಿರುವ ಸಚಿವ ಡಾ.ಸುಧಾಕರ್ ವಿರುದ್ದ ಪ್ರತ್ಯೇಕವಾಗಿ ಮಾನನಷ್ಟ ಮೊಕದ್ದಮೆ ಹಾಕಬೇಕು ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಸುಧಾಕರ್ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ಅವರೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿ. ಇಂತಹವರು ನಾಲಿಗೆ ಸಡಿಲು ಬಿಟ್ಟು ಬೇರೆ ಜನಪ್ರತಿನಿಧಿಗಳನ್ನು ನಿಂದಿಸಿರುವುದು ಸ್ಪಷ್ಟವಾಗಿ ಸದಸ್ಯರ ವಿಶೇಷ ರಕ್ಷಣೆಯ (Privilege) ಉಲ್ಲಂಘಣೆಯಾಗಿದೆ. ಸುಧಾಕರ್ ಸ್ಥಿತಿ ತಾ ಕಳ್ಳ ಇತರರನ್ನು ನಂಬ ಎಂಬಂತಾಗಿದೆ. ಸಮಾಜದಲ್ಲಿ ಪುರುಷ ಶಾಸಕರು ಇಂತಹ ಆರೋಪಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲರು. ಆದರೆ ಮಹಿಳಾ ಶಾಸಕರಿಗೆ ಇಂತಹ ಸುಳ್ಳು ಆರೋಪಗಳು ಬಹಳ ಹಾನಿ ಉಂಟುಮಾಡುತ್ತದೆ. ಅವರು ತಮ್ಮ ಕುಟುಂಬದವರನ್ನು ಹೇಗೆ ಎದುರಿಸಬೇಕು? ಇಂತಹ ಕೀಳು ಮಟ್ಟದ ಪುರುಷ ರಾಜಕಾರಣಿಗಳ ಕಾರಣದಿಂದಾಗಿಯೇ ರಾಜಕೀಯ ಪ್ರವೇಶಕ್ಕೆ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸುಧಾಕರ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸಿದ್ದರಾಮಯ್ಯ
ಏಕ ಪತ್ನಿ ವೃತಸ್ಥ ಸವಾಲು: ಸುಧಾಕರ್‌ ರಾಜಿನಾಮೆಗೆ ಸಿದ್ದರಾಮಯ್ಯ ಪಟ್ಟು

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com