ಸಿಡಿ ಪ್ರಕರಣ: ಜಾರಿ ನಿರ್ದೇಶಾನಲಯಕ್ಕೆ ದೂರು ನೀಡಿದ ಕಾಂಗ್ರೆಸ್

ಜಾರಕಿಹೊಳಿ ಮಾಧ್ಯಮಗೋಷ್ಟಿಯಲ್ಲಿ ನೀಡಿರುವ ಹೇಳಿಕೆಯನ್ನೇ ಆಧಾರವನ್ನಾಗಿಸಿಕೊಂಡು ಕಾಂಗ್ರೆಸ್‌ ಕೇಂದ್ರ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದೆ.
ಸಿಡಿ ಪ್ರಕರಣ: ಜಾರಿ ನಿರ್ದೇಶಾನಲಯಕ್ಕೆ ದೂರು ನೀಡಿದ ಕಾಂಗ್ರೆಸ್

ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರೀ ಸುದ್ದಿಯಲ್ಲಿರುವ, ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಪ್ರಕರಣದ ಕುರಿತಂತೆ ಕೆಪಿಸಿಸಿ ಕೇಂದ್ರ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದೆ.

ಅಶ್ಲೀಲ ಸಿಡಿ ಹೊರಬರುತ್ತಿದ್ದಂತೆಯೇ, ಮಾಧ್ಯಮಗೋಷ್ಟಿ ನಡೆಸಿದ್ದ ರಮೇಶ್‌ ಜಾರಕಿಹೊಳಿ, ಸಿಡಿ ಪ್ರಕರಣದ ಹಿಂದೆ ಸುಮಾರು 5 ರಿಂದ 100 ಕೋಟಿವರೆಗಿನ ಹಣದ ವಹಿವಾಟು ನಡೆದಿದೆ. ದೃಶ್ಯದಲ್ಲಿರುವ ಮಹಿಳೆಗೆ 2 ಫ್ಲಾಟ್‌ಗಳನ್ನೂ ಕೊಡಿಸಲಾಗಿದೆ ಎಂದು ಆರೋಪಿಸಿದ್ದರು.

ಜಾರಕಿಹೊಳಿ ಮಾಧ್ಯಮಗೋಷ್ಟಿಯಲ್ಲಿ ನೀಡಿರುವ ಹೇಳಿಕೆಯನ್ನೇ ಆಧಾರವನ್ನಾಗಿಸಿಕೊಂಡು ಕಾಂಗ್ರೆಸ್‌ ಕೇಂದ್ರ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದೆ. ದೂರಿನಲ್ಲಿ, 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(Prevention of Money Laundering Act-2002) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com