ರಾಜ್ಯ ರಾಜಧಾನಿಯಲ್ಲಿ ರೈತ ಘರ್ಜನೆ: ಬೃಹತ್‌ ವಿಧಾನ ಸೌಧ ಚಲೋ ರ‍್ಯಾಲಿ ಯಶಸ್ವಿ

ಅನ್ಯಾಯದ ವಿರುದ್ಧ ಅಭಿವ್ಯಕ್ತಿ ಸ್ವಾತಂತ್ರ್ಯ ಪರ ಪ್ರಶ್ನೆ ಎತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ರನ್ನು ಗುಂಡಿಟ್ಟು ಕೊಲ್ಲಲಾಯಿತು. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ದಿಶಾ ರವಿಯನ್ನು ಬಂಧಿಸಲಾಯಿತು. ಆಕೆ ಏನು ತಪ್ಪು ಮಾಡಿದ್ದಳು? ಎಂದು ದೆಹಲಿ ರೈತ ಹೋರಾಟದ ನಾಯಕ ಯುದ್ದವೀರ್‌ ಸಿಂಗ್‌ ಪ್ರಶ್ನಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ರೈತ ಘರ್ಜನೆ: ಬೃಹತ್‌ ವಿಧಾನ ಸೌಧ ಚಲೋ ರ‍್ಯಾಲಿ ಯಶಸ್ವಿ

ಸುಮಾರು ನಾಲ್ಕು ತಿಂಗಳಿಂದ ದೆಹಲಿಯ ಗಡಿಬಾಗಗಳಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ದೇಶವ್ಯಾಪಿ ಹರಡಿದೆ. ಸರ್ಕಾರ ಕರಾಳ ಕಾನುನುಗಳನ್ನು ಹಿಂಪಡೆಯುವವರೆಗೂ ಉಗ್ರವಾಗಿ ಹೋರಾಟ ನಡೆಸುತ್ತೇವೆಂಬುವುದು ರೈತರ ದಿಟ್ಟ ಘೋಷಣೆ.

ಪಂಜಾಬ್‌ನ ಪುಟ್ಟ ಹಳ್ಳಿಯಲ್ಲಿ ಹುಟ್ಟಿಕೊಂಡ ರೈತ ಚಳವಳಿ, ದೊಡ್ಡ ಮಟ್ಟದ ಹೋರಾಟವಾಗಿ ಮಾರ್ಪಾಡಾಗಲು ಕಾರಣರಾದವರು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ರಾಕೇಶ್‌ ಟಿಕಾಯತ್, ದರ್ಶನ್ ಪಾಲ್, ಯುದ್ದವೀರ್ ಸಿಂಗ್ ಸೇರಿದಂತೆ ಇತರೆ ರೈತ ಸಂಘಗಳ ರೈತ ಮುಖಂಡರು.

ಉತ್ತರ ಭಾರತದಲ್ಲಿ ಆರಂಭವಾದ ಈಗ ಹೋರಾಟ ದಕ್ಷಿಣ ಭಾರತಕ್ಕೂ ವ್ಯಾಪಿಸಿದೆ. ದಕ್ಷಿಣ ಭಾರತದ ಮೊಟ್ಟಮೊದಲ ಕಿಸಾನ್ ಮಹಾಪಂಚಾಯತ್ ಕರ್ನಾಟದ ಶಿವಮೊಗ್ಗದಲ್ಲಿ ಮಾರ್ಚ್ 20 ರಂದು ಜರುಗಿದ್ದರೆ, ಇಂದು ರಾಜ್ಯರಾಜಧಾನಿ ಬೆಂಗಳೂರಿನ ಸಿಟಿ ರೈಲ್ವೇ ನಿಲ್ದಾಣದಿಂದ ರಾಜ್ಯ ಹಾಗು ರಾಷ್ಟ್ರೀಯ ರೈತ ಮುಖಂಡರ ನೇತೃತ್ವದಲ್ಲಿ ʼವಿಧಾನಸೌಧ ಚಲೋʼ ಬೃಹತ್ ರ‍್ಯಾಲಿ ನಡೆಸಲಾಯಿತು. ನಂತರ ಫ್ರೀಡಂ ಪಾರ್ಕ್ನಲ್ಲಿ ದೊಡ್ಡಮಟ್ಟದ ಸಮಾವೇಶ ನಡೆಯಿತು. ರಾಜ್ಯದ ಮೂಲೆ ಮೂಲೆಗಳಿಂದಲೂ ಮಹಿಳೆಯರು, ಪುರುಷರು ಸೇರಿದಂತೆ ಸಾವಿರಾರು ರೈತರು ಆಗಮಿಸಿದ್ದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ರೈತ ಹೋರಾಟದ ನಾಯಕ ಯುದ್ದವೀರ್‌ ಸಿಂಗ್‌, ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರವಿದೆ ಎಂದು ಹೇಳಲಾಗುತ್ತಿದೆ. ಆದರೆ ಕರ್ನಾಟಕದ ಜನರಿಗೆ ತಿಳಿದಿದೆ. ಫ್ಯಾಸಿಸ್ಟ್‌ಗಳ ಆಳ್ವಿಕೆ ಹೇಗಿದೆ ಎಂದು. ಅನ್ಯಾಯದ ವಿರುದ್ಧ ಅಭಿವ್ಯಕ್ತಿ ಸ್ವಾತಂತ್ರ್ಯ ಪರ ಪ್ರಶ್ನೆ ಎತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ರನ್ನು ಗುಂಡಿಟ್ಟು ಕೊಲ್ಲಲಾಯಿತು. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ದಿಶಾ ರವಿಯನ್ನು ಬಂಧಿಸಲಾಯಿತು. ಆಕೆ ಏನು ತಪ್ಪು ಮಾಡಿದ್ದಳು? ಎಂದು ಪ್ರಶ್ನಿಸಿದ್ದಾರೆ.

ರೈತರ ಹೋರಾಟವನ್ನು ಬೆಂಬಲಿಸಿದ ಪತ್ರಕರ್ತರನ್ನು ಬಂಧಿಸಿ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಸರ್ಕಾರ ಪೊಲೀಸರನ್ನು ಸಂಘ ಪರಿವಾರದ ಗೂಂಡಾಗಳನ್ನು ಮುಂದಿಟ್ಟುಕೊಂಡು ಆಂದೋಲನವನ್ನು ಮುರಿಯುವಂತಹ ಕೆಲಸ ಮಾಡುತ್ತಿದೆ. ಅಧಿಕಾರಕ್ಕೂ ಬರುವ ಮುನ್ನ ರೈತರ ಪರ ಕಲ್ಯಾಣ ಅಭಿವೃದ್ಧಿ ಕೆಲಸ ಮಾಡುತ್ತೇವೆಂದವರು, ಈಗ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಡೀ ದೇಶದ ರೈತರು ಯೋಚಿಸಿ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ಕರೆ ನೀಡಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿಯಲ್ಲಿ ದೊಡ್ಡಮಟ್ಟದ ಹೋರಾಟವೊಂದು ಆರಂಭವಾಗಿದೆ. ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರದ ಜೊತೆ 12 ಸುತ್ತಿನ ಮಾತುಕತೆಯಾಗಿದೆ. ಪಕ್ಷದ ಸರ್ಕಾರವಾದ್ರೆ ಪರಿಹಾರ ಒದಗಿಸುತ್ತಿತ್ತು. ಇದು ಪಕ್ಷಗಳ ಸರ್ಕಾರವಲ್ಲ. ಮೋದಿ, ಮೋದಿ ಎಂದು ವ್ಯಕ್ತಿ ಆರಾಧನೆ ಮಾಡುತ್ತಿರುವ ಸರ್ಕಾರ. ಚಳವಳಿ ಆರಂಭಗೊಂಡು ನಾಲ್ಕು ತಿಂಗಳಾಗಿದೆ. ಮೊದಲಿಗೆ ಸರ್ಕಾರ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದರ ಜೊತೆಗೆ ರೈತರ ಆಂದೋಲನವನ್ನು ದೇಶದ್ರೋಹಿ ಆಂದೋಲನದಂತೆ ಬಿಂಬಿಸಲಾಗಿತ್ತು. ಆದರೆ ದೇಶದ ಜನತೆಗೆ ಈಗ ಅರ್ಥವಾಗಿದೆ ಇದು ಸ್ವತಂತ್ರ ಹೋರಾಟವೆಂದು. ದೇಶದೆಲ್ಲೆಡೆ ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಪ್ರಧಾನಿಯವರು ಸಂಸತ್ನಲ್ಲಿ MSP ಈಗಲೂ ಇದೆ, ಮುಂದೆಯೂ ಇರುತ್ತೆ ಎಂದಿದ್ದರು. ಬರೀ ಬಾಯಿ ಮಾತ್ರಕ್ಕೆ ಹೇಳಬಾರದು ಅದಕ್ಕೊಂದು ನಿರ್ದಿಷ್ಟ ಶಾಸನಾತ್ಮಕ ರೂಪ ಕೊಡಿ. ನೀವು ಕೃಷಿ ಮಾರುಕಟ್ಟೆಯನ್ನು ಬಂಡವಾಳ ಶಾಹಿಗಳ ಕೈಗೆ ಕೊಡುತ್ತಿದ್ದೀರಿ, ಆ ಮೂಲಕ ರೈತ ವಂಶವನ್ನು ನಿರ್ವಂಶ ಮಾಡುತ್ತಿದ್ದೀರಿ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ರಾಜ್ಯ ಹಾಗು ರಾಷ್ಟ್ರೀಯ ರೈತ ನಾಯಕರು, ಕರ್ನಾಟಕ ಸರ್ಕಾರದ ಕೃಷಿ ಸಚಿವ ಬಿಸಿ ಪಾಟೀಲ್‌ ಅವರಿಗೆ ರೈತರ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ನಿರಂತರ ಹೋರಾಟ ನಡೆಸುತ್ತೇವೆಂದು ಎಚ್ಚರಿಸಲಾಗಿದೆ. ಇದೇ ವೇಳೆ ಮಾರ್ಚ್ 26 ರಂದು ರೈತ ಸಂಘಟನೆಗಳು ದೇಶವ್ಯಾಪಿ ಬಂದ್ಗೆ ಕರೆ ನೀಡಿವೆ.

ಇಂದು ನಡೆದ ವಿಧಾನಸೌಧ ಚಲೋ ರ್ಯಾಲಿಗೆ ರಾಷ್ಟ್ರೀಯ ರೈತ ಮುಂಖಡ ದರ್ಶನ್‌ ಪಾಲ್‌, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್,ರಾಜಕೀಯ ಹೋರಾಟಗಾರ ಎಸ್ ಆರ್ ಹಿರೇಮಠ್, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಚಲನಚಿತ್ರ ನಟ ಚೇತನ್ ಸೇರಿದಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ಬರಹಗಾರರು, ಹಾಗು ರಾಜ್ಯದ ಹಲವು ಭಾಗಗಳಿಂದ ರೈತರು ವಿಧಾನಸೌಧ ಚಲೋ ಮೆರವಣಿಗೆಗೆ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com