ಬಸವಕಲ್ಯಾಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ BYವಿಜಯೇಂದ್ರ?

ಬಸವಕಲ್ಯಾಣದಲ್ಲಿ ಮರಾಠರ ಹಾಗೂ ಲಿಂಗಾಯತರ ಮತ ದೊಡ್ಡ ಪ್ರಮಾಣದಲ್ಲಿದೆ. ಮರಾಠಾ ನಿ‌ಗಮ‌ ರಚನೆಯಿಂದ ಮರಾಠಾ ಸಮುದಾಯ ಮತ ಸೆಳೆಯಲು ಸಾಧ್ಯ. ಹಾಗೆಯೇ, ನಿರ್ಣಾಯಕವಾಗಿರುವ ಲಿಂಗಾಯತ ಮತವನ್ನು ವಿಜಯೇಂದ್ರ ಅವರ ಸ್ಪರ್ಧೆಯಿಂದ ಸೆಳೆಯಬಹುದೆಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು.
ಬಸವಕಲ್ಯಾಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ BYವಿಜಯೇಂದ್ರ?

ತಮ್ಮದೇ ಸರ್ಕಾರ ಇರುವ ಬಲದಲ್ಲಿ ಉಪಚುನಾವಣೆಯನ್ನು ಗೆದ್ದೇ ತೀರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿರುವ ಆಡಳಿತರೂಢ ಬಿಜೆಪಿಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ಸೋಲಿನ ಆತಂಕ ಇದೆ. ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಬಸವಕಲ್ಯಾಣವನ್ನು ಅಷ್ಟು ಸುಲಭವಾಗಿ ವಶಕ್ಕೆ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಬಿಜೆಪಿ ನಾಯಕರಲ್ಲಿದೆ. ಹಾಗಾಗಿ ಬಸವಕಲ್ಯಾಣದಲ್ಲಿ ಬಲಾಢ್ಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂದು ಚಿಂತಿಸುತ್ತಿರುವ ಬಿಜೆಪಿ ರಾಜ್ಯ ನಾಯಕರು, ಬಿ ವೈ ವಿಜಯೇಂದ್ರರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಸವಕಲ್ಯಾಣದಲ್ಲಿ ಕಾಂಗ್ರೆಸ್ ದಿ.ನಾರಾಯಣರಾವ್ ಅವರ ಪತ್ನಿ ಶ್ರೀಮತಿ ಮಲ್ಲಮ್ಮ ಅವರಿಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ಮತಚಲಾವಣೆಯಾದರೆ, ಬಿಜೆಪಿಗೆ ಹಿನ್ನಡೆಯಾಗಬಹುದೆಂಬ ಕಾರಣಕ್ಕಾಗಿ ಬಿಜೆಪಿಯಿಂದ ವಿಜಯೆಂದ್ರ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಕೋರ್‍ಕಮಿಟಿ ಸಭೆಯ ಪ್ರಮುಖರು ಪ್ರಸ್ತಾಪಿಸಿದ್ದಾರೆ.

ಬಸವಕಲ್ಯಾಣದಲ್ಲಿ ಮರಾಠರ ಹಾಗೂ ಲಿಂಗಾಯತರ ಮತ ದೊಡ್ಡ ಪ್ರಮಾಣದಲ್ಲಿದೆ. ಮರಾಠಾ ನಿ‌ಗಮ‌ ರಚನೆಯಿಂದ ಮರಾಠಾ ಸಮುದಾಯ ಮತ ಸೆಳೆಯಲು ಸಾಧ್ಯ. ಹಾಗೆಯೇ, ನಿರ್ಣಾಯಕವಾಗಿರುವ ಲಿಂಗಾಯತ ಮತವನ್ನು ವಿಜಯೇಂದ್ರ ಅವರ ಸ್ಪರ್ಧೆಯಿಂದ ಸೆಳೆಯಬಹುದೆಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು.

ಬಸವಕಲ್ಯಾಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ BYವಿಜಯೇಂದ್ರ?
ವಿಜಯೇಂದ್ರ ರಾಜ್ಯದ ಸೂಪರ್ ಸಿಎಂ: ಸಾಕ್ಷಿಗೆ ವಿಡಿಯೋ ಹಂಚಿಕೊಂಡ ಯತ್ನಾಳ್

ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುವ ಅಂತಿಮ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರಿನ ಜೊತೆಗೆ ಸ್ಥಳೀಯ ಒಂದೆರಡು ನಾಯಕರ ಹೆಸರನ್ನು ಕಳುಹಿಸಿಕೊಡಬೇಕು. ವರಿಷ್ಠರು ಯಾರ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡುತ್ತಾರೋ, ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕೋರ್‍ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿವೈವಿ ಆಯ್ಕೆಯಿಂದ ಶಮನವಾದೀತೇ ಸ್ಥಳೀಯ ನಾಯಕರ ಭಿನ್ನಮತ?

ಪಕ್ಷದ ಮೂಲಗಳ ಪ್ರಕಾರ ಬಸವಕಲ್ಯಾಣ ಕ್ಷೇತ್ರದಲ್ಲಿ ಸುಮಾರು 16 ರಿಂದ 18 ಮಂದಿ ಸ್ಥಾನಾಕಾಂಕ್ಷಿಗಳು ಇದ್ದಾರೆ. ಅದರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಅಸಮಾಧಾನ ವ್ಯಕ್ತವಾಗಬಹುದು. ಟಿಕೆಟ್ ವಂಚಿತರು ಭಿನ್ನಮತ ಸಾರಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಬಿಜೆಪಿ ನಾಯಕರಲ್ಲಿ ಮನೆಮಾಡಿದೆ.

ಹಾಗಾಗಿ, ಕಡಿಮೆ ಅವಧಿಯಲ್ಲಿ ಬಿಜೆಪಿಯ ಪ್ರಬಲ ನಾಯಕರಾಗಿ ರೂಪುಗೊಂಡಿರುವ ಬಿ ವೈ ವಿಜಯೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿಸಿದರೆ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಬಿಜೆಪಿ ವಲಯದಲ್ಲಿದೆ.

ಅಲ್ಲದೆ, ಈ ಹಿಂದೆ ಕೆ.ಆರ್.ಪೇಟೆ ಮತ್ತು ಶಿರಾ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರ ನಿಭಾಯಿಸುವಿಕೆ ಯುವ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದು ಬಿಜೆಪಿ ಗೆಲುವಿಗೆ ಹೆಚ್ಚಿನ ಲಾಭವನ್ನು ತಂದಿತ್ತು. ಹೀಗಾಗಿ ಬಸವಕಲ್ಯಾಣದಿಂದ ಅವರನ್ನು ಅಭ್ಯರ್ಥಿ ಮಾಡಿದರೆ ಗೆಲ್ಲಬಹುದೆಂದು ನಿರೀಕ್ಷೆ ಪಕ್ಷದ ಪ್ರಮುಖರದ್ದು.

ಬಸವಕಲ್ಯಾಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ BYವಿಜಯೇಂದ್ರ?
ಬಿಹಾರ ಚುನಾವಣೆ: ಮೋದಿ ಶಕ್ತಿ ಕುಂದಿಸಲು ವಿಜಯೇಂದ್ರ ಫಂಡಿಂಗ್;‌ ಯತ್ನಾಳ್‌ ಗಂಭೀರ ಆರೋಪ
ಬಸವಕಲ್ಯಾಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ BYವಿಜಯೇಂದ್ರ?
ಶಿರಾ: ಕೆ ಆರ್‌ ಪೇಟೆಯಂತೆ ಮತ್ತೆ ಅನಿರೀಕ್ಷಿತ ಗೆಲುವು ಸಾಧಿಸುವ ಹಂಬಲದಲ್ಲಿ ವಿಜಯೇಂದ್ರ

ಮುಖ್ಯವಾಗಿ, ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ ಅವರು ಈಗಾಗಲೇ ಟಿಕೆಟ್‌ ತನಗೇ ಲಭಿಸುವುದೆಂದು ನಂಬುವುದಾಗಿ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಅಲ್ಲದೆ, ಹೊರಗಿನ ಯಾರಿಗೂ ಟಿಕೆಟ್‌ ನೀಡಬಾರದೆಂದು ಈಗಾಗಲೇ ಆಗ್ರಹಿಸಿದ್ದಾರೆ. ಖೂಬಾ ಅವರು ಈಗಾಗಲೇ ಬಂಡಾಯದ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬಿಕ್ಕಟ್ಟುಗಳನ್ನು, ಸವಾಲುಗಳನ್ನು ವಿಜಯೇಂದ್ರ ಅವರು ನಿಭಾಯಿಸಬಲ್ಲರು ಎನ್ನುವುದು ಬಿಜೆಪಿ ನಾಯಕರ ನಂಬಿಕೆ.

ಬಸವಕಲ್ಯಾಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ BYವಿಜಯೇಂದ್ರ?
ಎಸಿಬಿ ಮೆಟ್ಟಿಲೇರಿದ ಸಿಎಂ ಪುತ್ರ ವಿಜಯೇಂದ್ರ ಹಗರಣ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com