ರಮೇಶ್‌ ಜಾರಕಿಹೊಳಿ ವಿಚಾರಣೆ ನಡೆಸಿದ ಎಸ್‌ಐಟಿ; ಹೆಚ್‌ಡಿಕೆ, ಜಾರಕಿಹೊಳಿ ವಿರುದ್ಧ ಎಸಿಬಿಗೆ ದೂರು

ಸಿಡಿ ಪ್ರಕರಣ ಸಂಬಂಧ ಮಾಹಿತಿ ನನಗೆ ಐದು ತಿಂಗಳ ಮುಂಚೆಯೇ ಗೊತ್ತಿತ್ತು. ಇದರಲ್ಲಿ ಐದು ಕೋಟಿ ಡೀಲ್‌ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಹೇಳಿಕೆ ಕೊಟ್ಟಿದ್ದರು. ರಮೇಶ್‌ ಜಾರಕಿಹೊಳಿ ಮತ್ತು ಕುಮಾರಸ್ವಾಮಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಸಿಬಿ ತನಿಖೆ ನಡೆಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ರಮೇಶ್‌ ಜಾರಕಿಹೊಳಿ ವಿಚಾರಣೆ ನಡೆಸಿದ ಎಸ್‌ಐಟಿ; ಹೆಚ್‌ಡಿಕೆ, ಜಾರಕಿಹೊಳಿ ವಿರುದ್ಧ ಎಸಿಬಿಗೆ ದೂರು

ಸಿಡಿ ಪ್ರಕರಣ ಸಂಬಂಧಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಎಸ್‌ಐಟಿ ತಂಡ ಶುಕ್ರವಾರ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಸಮನ್ಸ್‌ ಪಡೆದ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ಮಡಿವಾಳದಲ್ಲಿರುವ ವಿಚಾರಣಾ ಕೇಂದ್ರಕ್ಕೆ ಹಾಜರಾಗಿದ್ದು, ಸಿಸಿಬಿ ಎಸಿಪಿ ಹೆಚ್.ಎನ್.ಧರ್ಮೇಂದ್ರ ಅವರು ವಿಚಾರಣೆ ನಡೆಸಿದ್ದಾರೆ. ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ, ಸಿಡಿ ಬಿಡುಗಡೆ ಮಾಡಿದ ತಂಡದಿಂದ ನಿಜಕ್ಕೂಬ್ಲಾಕ್‌ಮೇಲ್‌ ನಡೆದಿತ್ತೇ..? ಯುವತಿ ನಿಮಗೆ ಪರಿಚಯವಿಲ್ಲವೇ..? ಸಿಡಿ ಬಹಿರಂಗದ ಹಿಂದಿರುವವರು ಯಾವಾಗ ನಿಮ್ಮನ್ನು ಸಂಪರ್ಕಿಸಿದ್ದರು..? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಿದ್ದಾರೆ. ಅಗತ್ಯವಿದ್ದಾಗ ಮತ್ತೆ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯುವತಿಗೆ ಹಾಗು ಆಕೆಯ ಕುಟುಂಬಕ್ಕೆ ಕೂಡ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ತಂಡದಿಂದ ಮೂರು ನೋಟೀಸ್‌ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಯುವತಿಯೂ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಇನ್ನೂ ನಾಲ್ಕು ಜನರಿಗೆ ನೋಟೀಸ್‌ ಜಾರಿ ಮಾಡಲಾಗಿದೆ. ಈಗಾಗಲೇ ಆರು ಜನರನ್ನು ತನಿಖೆಗೆ ಒಳಪಡಿಸಿ ವಿಚಾರಣೆ ನಡೆಸಿ ಬಿಡುಗಡೆಗೊಳಿಸಲಾಗಿದೆ. ಆದರೆ ತನಿಖೆ ಪೂರ್ಣಗೊಳ್ಳುವವರಿಗೂ ನಗರ ಬಿಟ್ಟು ಬೇರೆಡೆಗೆ ಹೋಗದಂತೆ ಸೂಚಿಸಲಾಗಿದೆ. ಮತ್ತೆ ಅವಶ್ಯಕತೆಯಿದ್ದರೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ವಿಡಿಯೋ ಬಿಡುಗಡೆಗೊಳಿಸಿದ ರೂವಾರಿ ಎನ್ನಲಾದ ನರೇಶ್‌ ಗೌಡ ಅವರಿಗಾಗಿ ಎಸ್‌ಐಟಿ ಹುಡುಕಾಟ ನಡೆಸುತ್ತಿದೆ.

ಹೆಚ್‌ಡಿಕೆ, ಜಾರಕಿಹೊಳಿ ವಿರುದ್ಧ ಎಸಿಬಿಗೆ ದೂರು

ಮತ್ತೊಂದೆಡೆ ಪ್ರಕರಣವು ಹೊಸ ರೂಪ ಪಡೆದುಕೊಂಡಿದ್ದು, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಗು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಕೀಲ ಮಂಜುನಾಥ್‌ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.

ರಮೇಶ್‌ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆಗೊಳಿಸದಿರಲು ಐದು ಕೋಟಿ ಕೊಡಲಾಗಿದೆ ಎನ್ನಲಾಗಿದೆ. ಹೇಳಿದ್ದರು. ಎಲ್ಲಿಂದ ಕೊಟ್ಟಿದ್ದಾರೆ..? ಯಾರಿಗೆ ಕೊಟ್ಟಿದ್ದಾರೆ..? ಅಷ್ಟು ಪ್ರಮಾಣದ ಹಣ ಎಲ್ಲಿಂದ ಬಂದಿದೆ..? ಎಂಬುವುದರ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಸಿಡಿ ಪ್ರಕರಣ ಸಂಬಂಧ ಮಾಹಿತಿ ನನಗೆ ಐದು ತಿಂಗಳ ಮುಂಚೆಯೇ ಗೊತ್ತಿತ್ತು. ಇದರಲ್ಲಿ ಐದು ಕೋಟಿ ಡೀಲ್‌ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಹೇಳಿಕೆ ಕೊಟ್ಟಿದ್ದರು. ರಮೇಶ್‌ ಜಾರಕಿಹೊಳಿ ಮತ್ತು ಕುಮಾರಸ್ವಾಮಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಸಿಬಿ ತನಿಖೆ ನಡೆಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com