ಲಸಿಕೆ ಕಂಡುಹಿಡಿದ ಮಹನೀಯರ ಋಣದಲ್ಲಿ ನಾವಿದ್ದೇವೆ- ಹೆಚ್‌ಡಿಕೆ

ನಮ್ಮ ಮತ-ನಮ್ಮ ದೇವರು ಮೇಲು, ನಿಮ್ಮ ಮತ-ನಿಮ್ಮ ದೇವರು ಕೀಳು ಎಂದು ಬೇಧ-ಭಾವ ಮಾಡುತ್ತಾ ಯುದ್ದೋನ್ಮಾದದಲ್ಲಿ ತೇಲುತ್ತಿರುವ ನಮಗೆ ಕಾಲರಾ, ಪ್ಲೇಗ್, ಕೊರೋನಾ ಮೊದಲಾದ ದೊಡ್ಡ ರೋಗಗಳು ಮೆತ್ತಿಕೊಂಡಾಗ ನೆರವಿಗೆ ಬರುವುದು ಇಂತಹ ನಿಸ್ವಾರ್ಥ ವಿಶ್ವಮಾನವರು ತಮ್ಮ ಜೀವವನ್ನು ಪಣಕ್ಕಿಟ್ಟು ಕಂಡು ಹಿಡಿದ ಲಸಿಕೆಗಳು ಮಾತ್ರ ಎಂದು ಸರ್ಕಾರವನ್ನು, ಸಮಾಜದ ಜನತೆಯನ್ನು ಎಚ್ಚರಿಸಿದ್ದಾರೆ.
ಲಸಿಕೆ ಕಂಡುಹಿಡಿದ ಮಹನೀಯರ ಋಣದಲ್ಲಿ ನಾವಿದ್ದೇವೆ- ಹೆಚ್‌ಡಿಕೆ

ಕಾಲರಾ, ಪ್ಲೇಗ್ ಸಾಂಕ್ರಾಮಿಕ ರೋಗಗಳಿಗೆ ಚುಚ್ಚು ಮದ್ದು ಕಂಡುಹಿಡಿದು. 120 ವರ್ಷಗಳ ಈ ರೋಗದಿಂದ ಭಾರತೀಯರನ್ನು ಕಾಪಾಡಿದ ವ್ಲಾಡಿಮೀರ್ ಹಾಫ್ಕಿನ್ ಜನ್ಮದಿನವಿಂದು. ಭಾರತೀಯರಿಗೆ ಅವರು ಮಾಡಿದ ಸಹಾಯವನ್ನು ನೆನಪಿಸಿಕೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟರ್‌ ಮೂಲಕ ಅವರ ಸೇವೆಯನ್ನು ನೆನಪಿಸಿಕೊಂಡಿದ್ದಾರೆ.

ಇದೀಗಾ ಜಗತ್ತು ಕೊರೋನಾ ವೈರಸ್ ದಾಳಿಯ ಭಯದಲ್ಲಿರುವಂತೆ ಈ ಹಿಂದೆಯೂ ಕಾಲರಾ, ಪ್ಲೇಗ್ ದಾಳಿಗೆ ತುತ್ತಾಗಿತ್ತು. ಇಂತಹ ಸಂಧರ್ಭದಲ್ಲಿ ಜೀವ ಭಯ ತೊರೆದು ದುಡಿದ ವೈದ್ಯ ವಿಜ್ಞಾನಿಗಳಲ್ಲಿ ರಷ್ಯಾದ ವ್ಲಾಡಿಮೀರ್ ಹಾಫ್ಕಿನ್ ಕೂಡ ಒಬ್ಬರಾಗಿದ್ದರು. ದೇಶ ಸೋಂಕಿನ ಸಮಸ್ಯೆಯಿಂದ ಬಳಲುತ್ತಿರುವಾಗ ಇವರು ಭಾರತೀಯರಿಗೆ ಮಾಡಿದ ಸಹಾಯ ಅಧ್ಬುತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದೇ ಸಂಧರ್ಭದಲ್ಲಿ ಭಾರತದಲ್ಲಿ ಕಾಲರಾ ಮರಣ ಮೃದಂಗ ಬಾರಿಸುತ್ತಿತ್ತು. ಬ್ರಿಟೀಷ್ ವೈಸ್ ರಾಯ್ ಫ್ರೆಡೆರಿಕ್ ಹ್ಯಾಮಿಲ್ಟನ್ ಮೂಲಕ ಭಾರತಕ್ಕೆ ಆಗಮಿಸಿದ ಅವರು ಸುಮಾರು 45000 ಜನರಿಗೆ ಕಾಲರಾ ಚುಚ್ಚುಮದ್ದು ನೀಡಿ ಶೆ.70ರಷ್ಟು ಸಾವು ನೋವು ತಪ್ಪಿಸಿ ಭಾರತೀಯರ ಪಾಲಿಗೆ ಆಪದ್ಬಾಂಧವರಾಗಿದ್ದರು ಎಂದು ರಷ್ಯಾದ ವ್ಲಾಡಿಮೀರ್ ಹಾಫ್ಕಿನ್ ಸೇವೆಯನ್ನು ನೆನಪಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಬೈಕುಲಾದಲ್ಲಿ ಪ್ರಯೋಗಾಲಯ ತೆರೆದು ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದರು. 1902-03ರ ಸುಮಾರಿನಲ್ಲಿ ಪ್ಲೇಗ್ ಮಾರಿ ಭಾರತವನ್ನು ಕಾಡಿದಾಗ ಸುಮಾರು 5,00,000 ಮಂದಿಗೆ ಇವರು ಕಂಡು ಹಿಡಿದ ಲಸಿಕೆ ಜೀವದಾನ ಮಾಡಿತು.

ಇಂದಿಗೂ ಇಂತಹ ಅನೇಕ ಮಹನೀಯರ ಋಣದಲ್ಲಿ ನಾವಿದ್ದೇವೆ. ಆದರೆ ಇಂತಹ ವಿಜ್ಞಾನಿಗಳ ಸೇವೆಯನ್ನು ನಾವಾಗಲಿ, ನಾವೇ ಆರಿಸಿದ ಈಗಿನ ನಮ್ಮ ಜನಸೇವಕರಾಗಲಿ ನೆನಪಿಸಿಕೊಳ್ಳುತ್ತಿದ್ದೇವೆಯೆ? ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ.

ಸರ್ಕಾರಿ ಹಣದಲ್ಲಿ ಜಾತಿಗೊಬ್ಬ ನಾಯಕರ ಜಯಂತಿ ಆಚರಿಸುವ, ನಮ್ಮ ಮತ-ನಮ್ಮ ದೇವರು ಮೇಲು, ನಿಮ್ಮ ಮತ-ನಿಮ್ಮ ದೇವರು ಕೀಳು ಎಂದು ಬೇಧ-ಭಾವ ಮಾಡುತ್ತಾ ಯುದ್ದೋನ್ಮಾದದಲ್ಲಿ ತೇಲುತ್ತಿರುವ ನಮಗೆ ಕಾಲರಾ, ಪ್ಲೇಗ್, ಕೊರೋನಾ ಮೊದಲಾದ ದೊಡ್ಡ ರೋಗಗಳು ಮೆತ್ತಿಕೊಂಡಾಗ ನೆರವಿಗೆ ಬರುವುದು ಇಂತಹ ನಿಸ್ವಾರ್ಥ ವಿಶ್ವಮಾನವರು ತಮ್ಮ ಜೀವವನ್ನು ಪಣಕ್ಕಿಟ್ಟು ಕಂಡು ಹಿಡಿದ ಲಸಿಕೆಗಳು ಮಾತ್ರ ಎಂದು ಸರ್ಕಾರವನ್ನು, ಸಮಾಜದ ಜನತೆಯನ್ನು ಎಚ್ಚರಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com