ಕರ್ನಾಟಕದಲ್ಲಿ ಖಾಲಿಯಾಗಿರುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಪ್ರಕಟವಾಗಿದೆ. ಏಪ್ರಿಲ್ 17 ಮೂರೂ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.
ರಾಯಚೂರಿನ ಮಸ್ಕಿ ವಿಧಾನಸಭೆಯ ಶಾಸಕರಾಗಿದ್ದ ಪ್ರತಾಪ್ ಗೌಡ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದರು. ಇದರಿಂದಾಗಿ ಅಲ್ಲಿ ಉಪಚುನಾವಣೆ ಬಂದಿದೆ. ಇನ್ನುಳಿದಂತೆ ಬೆಳಗಾವಿ ಸಂಸದರಾದ ಸುರೇಶ ಅಂಗಡಿ ಅವರು ಕೋವಿಡ್ನಿಂದಾಗಿ ಮೃತಪಟ್ಟಿದ್ದರು. ಬೀದರ್ ಬಸವಕಲ್ಯಾಣದ ಕಾಂಗ್ರೆಸ್ ಶಾಸಕರಾದ ಬಿ ನಾರಾಯಣರಾವ್ ಅವರು ಕೋವಿಡ್ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು.
ಮಾರ್ಚ್ 30 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಲಿದ್ದು, ಮಾರ್ಚ್ 31ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 3ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಲಿದೆ.
ಉಪಚುನಾವಣೆಯ ಫಲಿತಾಂಶವು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ದಿನದಂದೇ ಅಂದರೆ ಮೇ 2ರಂದು ಪ್ರಕಟವಾಗಲಿದೆ.