CBI, IT, ED ಹಿಡಿದುಕೊಂಡರೆ ಎಲ್ಲರೂ ಚಾಣಕ್ಯರೇ; ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬಿಜೆಪಿ ಯಾವ ರಾಜ್ಯ ಚುನಾವಣೆಗಳನ್ನು ಗೆದ್ದಿದೆ? ಗುಜರಾತ್‌, ಗೋವಾ, ಮಧ್ಯಪ್ರದೇಶ ಮೊದಲಾದ ಎಲ್ಲಾ ರಾಜ್ಯಗಳಲ್ಲೂ ಆಪರೇಶನ್‌ ಕಮಲ ಮೂಲಕ ಗೆದ್ದಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ
CBI, IT, ED ಹಿಡಿದುಕೊಂಡರೆ ಎಲ್ಲರೂ ಚಾಣಕ್ಯರೇ; ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬಿಜೆಪಿಯ ಚಾಣಾಕ್ಯ ಎಂದು ಕರೆಯುವುದನ್ನು ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಸಾರ್ವತ್ರಿಕ ಚುನಾವಣೆ ಎದುರಿಸುವ ಕುರಿತು ಹಾಗೂ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಮುಖಂಡರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಕಳೆದ ಆರು ವರ್ಷದಲ್ಲಿ ಉತ್ತರ ಪ್ರದೇಶ ಬಿಟ್ಟರೆ ಬಿಜೆಪಿಗೆ ಎಲ್ಲೂ ಸ್ವಂತ ಬಲದಿಂದ ರಾಜ್ಯ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಸಿಬಿಐ, ಐಟಿ, ಇಡಿ ಇಟ್ಟುಕೊಂಡು ಚಾಣಾಕ್ಯರೆಂದು ಹೇಳುತ್ತಾರೆ.“

ಬಿಜೆಪಿ ಯಾವ ರಾಜ್ಯ ಚುನಾವಣೆಗಳನ್ನು ಗೆದ್ದಿದೆ? ಗುಜರಾತ್‌, ಗೋವಾ, ಮಧ್ಯಪ್ರದೇಶ ಮೊದಲಾದ ಎಲ್ಲಾ ರಾಜ್ಯಗಳಲ್ಲೂ ಆಪರೇಶನ್‌ ಕಮಲ ಮೂಲಕ ಗೆದ್ದಿದ್ದಾರೆ. ಕರ್ನಾಟಕದಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಆಪರೇಶನ್‌ ಕಮಲ, ಸಿಬಿಐ, ಐಟಿ ಇಟ್ಟುಕೊಂಡ ತಕ್ಷಣ ಎಲ್ಲರೂ ಚಾಣಾಕ್ಯರಾಗುತ್ತಾರೆ ಎಂದು ಪರೋಕ್ಷವಾಗಿ ಅಮಿತ್‌ ಶಾ ಅವರನ್ನು ವ್ಯಂಗ್ಯವಾಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com