ಸಿಡಿ ಪ್ರಕರಣದ ಹಿಂದೆ ಘಟಾನುಘಟಿಗಳ ಕೈವಾಡವಿದೆ: ಬಿ ವೈ ವಿಜಯೇಂದ್ರ

ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಭಾಗಿಯಾದವರು ಸಾಮಾನ್ಯರಲ್ಲ. ಈ ಷಡ್ಯಂತರದ ಹಿಂದೆ ದೊಡ್ಡ ಕೈಗಳೇ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಸಿಡಿ ಪ್ರಕರಣದ ಹಿಂದೆ ಘಟಾನುಘಟಿಗಳ ಕೈವಾಡವಿದೆ: ಬಿ ವೈ ವಿಜಯೇಂದ್ರ

ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ರಾಜ್ಯದ ವಿವಿಧ ರಾಜಕೀಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೇಲ್ನೋಟಕ್ಕೆ ಇದೊಂದು ನಕಲಿ ಸಿಡಿ ಎಂದು ಬಹುತೇಕ ನಾಯಕರು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಭಾಗಿಯಾದವರು ಸಾಮಾನ್ಯರಲ್ಲ. ಈ ಷಡ್ಯಂತರದ ಹಿಂದೆ ದೊಡ್ಡ ಕೈಗಳೇ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸಿಡಿ ಪ್ರಕರಣದ ಕುರಿತಂತೆ ಜಾರಕಿಹೊಳಿ‌ ಸಹೋದರರು ಪುನಃ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಅವರ ಅಪೇಕ್ಷೆ ಮೇರೆಗೆ ನಕಲಿ ಸಿಡಿ ಕುರಿತಂತೆ ಮುಖ್ಯಮಂತ್ರಿ ತನಿಖೆ ನಡೆಸಲು ಆದೇಶಿಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ದ ನಕಲಿ ಸಿಡಿ ಬಿಡುಗಡೆ ಮಾಡುವ ಮೂಲಕ ರಾಜಕೀಯ ಷಡ್ಯಂತ್ರ ನಡೆಸಲಾಗಿದ್ದು ಈ ಬಗ್ಗೆ ತನಿಖೆ ನಡೆಸಲು ಆದೇಶಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ತೇಜೋವಧೆ ಮಾಡುತ್ತಿದ್ದಾರೆ. ಇಂತಹ ಬ್ಲಾಕ್‌ ಮೇಲ್ ಮಾಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆರೋಪ ಬರುತ್ತಿದ್ದಂತೆ ನೈತಿಕ ಹೊಣೆ ಹೊತ್ತು, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ನೋಡಿದರೆ ದೂರುದಾರರೇ ದೂರು ವಾಪಸ್ ಪಡೆದಿದ್ದಾರೆ ಹಾಗಾಗಿ ರಾಜಕೀಯಕ್ಕೆ ಮತ್ತೆ ರಮೇಶ್ ಜಾರಕಿಹೊಳಿ ವಾಪಸ್ ಬರಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಇನ್ನು, ಇದೇ ವಿಚಾರದ ಕುರಿತಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, ಸಿಡಿ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇವೆ. ಇದು ಸುಳ್ಳು ದಾಖಲೆ ರೀತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಸಿಡಿ ಪ್ರಕರಣದ ಹಿಂದೆ ಘಟಾನುಘಟಿಗಳ ಕೈವಾಡವಿದೆ: ಬಿ ವೈ ವಿಜಯೇಂದ್ರ
ಸಿಡಿ ಹಗರಣ: ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದ ದೂರು ವಾಪಸ್

ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ಜೊತೆ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಾರಕಿಹೊಳಿ ಕುಟುಂಬದ ಆಪ್ತ, ಮಾಜಿ ಶಾಸಕ ನಾಗರಾಜ್, ನಕಲಿ ಸಿಡಿ ಬಲೆ ಹೆಣೆದಿರುವ ಮಾಹಿತಿ ಬಗ್ಗೆ ನಾಲ್ಕು ತಿಂಗಳ ಮೊದಲೇ ಗೊತ್ತಾಗಿತ್ತು ಈ ಬಗ್ಗೆ ರಮೇಶ್ ಜಾರಕಿಹೊಳಿ ಅವರ ಗಮನಕ್ಕೂ ತರಲಾಗಿತ್ತು ಎಂದು ತಿಳಿಸಿದ್ದಾರೆ.

ನನಗೆ ಬಾಲಚಂದ್ರ ಜಾರಕಿಹೊಳಿ ನಾಲ್ಕು ತಿಂಗಳ ಹಿಂದೆ ಹೇಳಿದ್ದರು. ರಮೇಶ್ ಜಾರಕಿಹೊಳಿ ಬಳಿ ಹೋಗಿ ಈ ವಿಚಾರ ತಿಳಿಸು ಎಂದಿದ್ದರು. ಆಗ ರಮೇಶ್ ಜಾರಕಿಹೊಳಿ ಅವರು ನನ್ನ ಸಿಡಿ ಇರಲು ಸಾಧ್ಯವಿಲ್ಲ. ಸಿಡಿ ಎಲ್ಲಿರುತ್ತೆ ಎಲ್ಲಾ ಸುಳ್ಳು ಎಂದಿದ್ದರು. ನಾನು ಆ ರೀತಿಯಲ್ಲಿ ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಒಟ್ಟಾರೆ ಜಾರಕಿಹೊಳಿ ಅವರ ಮನೆತನದ ಗೌರವ ಉಳಿಯಬೇಕು ಅಷ್ಟೇ ಎಂದು ಅವರು ಹೇಳಿದ್ದಾರೆ.

ಈ ನಡುವೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಜಾರಕಿಹೊಳಿ ಅಮಾಯಕರು ಎಂಬ ಹೇಳಿಕೆ ನೀಡಿ ಅವರ ಬೆನ್ನಿಗೆ ನಿಂತಿದ್ದರು. ಸಿಡಿ ರಾಜಕಾರಣದ ವಿರುದ್ದ ಅವರು ತೀಕ್ಷ್ಣವಾಗಿ ಹರಿಹಾಯ್ದಿದ್ದರು.

ಸಿಡಿ ಪ್ರಕರಣದ ಹಿಂದೆ ಘಟಾನುಘಟಿಗಳ ಕೈವಾಡವಿದೆ: ಬಿ ವೈ ವಿಜಯೇಂದ್ರ
ರಾಜ್ಯವೇ ತಲೆತಗ್ಗಿಸುವಂತೆ ಮಾಡಿದ ‘ಸಿಡಿ’ ಹಿಂದೆ ಇರುವುದು ಯಾರು?

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com