ಇದು ಕೇವಲ ಸೆಕ್ಸ್ ಹಗರಣವಲ್ಲ...! ಇದರ ಹಿಂದಿದೆ ದೇಶಭಕ್ತಿ ಮತ್ತು ಲಾಕ್ ಡೌನ್ ಕರಾಳತೆ !

ನಾನು ಆರ್ಮಿ ಸೋಲ್ಜರ್ ಮಗಳು. ನಾನು ನಿಮ್ಮ ಮನೆ ಬಳಿಯೇ ಇದ್ದರೂ ಈ ವರೆಗೂ ಭೇಟಿಯಾಗಿಲ್ಲ. ಈಗ ನೀವು ದೇಶಭಕ್ತ ಮಂತ್ರಿಯಾಗಿದ್ದು ಬೋ ಖುಷಿಯಾಗಿದೆ" ಎಂದೇ ಆ ಮಿನಿಸ್ಟರ್ ಗೆ ಪರಿಚಯ ಮಾಡಿಕೊಳ್ಳುತ್ತಾಳೆ.
ಇದು ಕೇವಲ ಸೆಕ್ಸ್ ಹಗರಣವಲ್ಲ...! ಇದರ ಹಿಂದಿದೆ ದೇಶಭಕ್ತಿ ಮತ್ತು ಲಾಕ್ ಡೌನ್ ಕರಾಳತೆ !

ಆಕೆ ಆ ಪ್ರಭಾವಿ ಮಂತ್ರಿಯ ಮನೆ ಬಳಿಯೇ ವಾಸಿಸುತ್ತಿದ್ದಳು. ಅವರೋ ದೊಡ್ಡ ಸಾಹುಕಾರರು. ಇವಳೋ ಪುಟ್ಟ ಮನೆಯಲ್ಲಿ ವಾಸವಾಗಿದ್ದಳು.‌ ಇನ್ನೂ 23-24 ಹರೆಯದ ಆಕೆ ತನ್ನ ಕಾಲೇಜು ಜೀವನಕ್ಕೆ ತೀವ್ರ ಹಣಕಾಸು ಮುಗ್ಗಟ್ಟು ಆದಾಗಲೂ ಆ ಸಚಿವರ ಮನೆ ಬಾಗಿಲಿಗೆ ಹೋಗಿಲ್ಲ. ಅದಕ್ಕೆ ಎರಡು ಕಾರಣ ಇದ್ದವು. ಒಂದು ಆಕೆ ಅಪ್ಪಟ ಭಕ್ತೆ. ಇನ್ನೊಂದು ತನ್ನ ಅಪ್ಪ ನಿವೃತ್ತ ಸೈನಿಕ ಎಂಬ ಆತ್ಮಾಭಿಮಾನ. ಆ ಮಂತ್ರಿ ಮತ್ತು ಮಂತ್ರಿಯ ಅಣ್ಣ ಜಾತ್ಯಾತೀತ ಪಕ್ಷದಲ್ಲಿದ್ದರು. ಆದ್ದರಿಂದ ಮನೆ ಎದುರೇ ಮಂತ್ರಿ ಮನೆ ಇದ್ದರೂ ಸಹಾಯ ಕೇಳದೆಯೇ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಪಿಜಿ ಸೇರಿದ್ದಳು.

ನಿವೃತ್ತ ಸೈನಿಕರ ಮಗಳಾಗಿದ್ದ ಆಕೆ ಪಿಜಿಯಲ್ಲೂ ರಾಷ್ಟ್ರಭಕ್ತಿಯ ಬಗ್ಗೆ ಮಾತನಾಡುತ್ತಿದ್ದಳು. ಯಾರಾದರೂ ಪ್ರಧಾನ ಸೇವಕರ ವಿರುದ್ದ ಮಾತನಾಡಿದರೆ ಕೆಂಡಾಮಂಡಲವಾಗುತ್ತಿದ್ದಳು. ಬೆಂಗಳೂರಿಗೆ ಬಂದ ಮೇಲೆ ಆದ ಮೊದಲ ಲವ್ ಅನ್ನು ಇದೇ ಕಾರಣಕ್ಕೇ ದೂರ ಮಾಡಿದಳು. ಹೀಗಿರುತ್ತಾ ಒಂದು ದಿನ ತನ್ನೂರಿನ ಮನೆ ಎದುರಿನ ಮನೆಯ ಮಂತ್ರಿ ಜಾತ್ಯಾತೀತ ಪಕ್ಷ ಬಿಟ್ಟು ದೇಶಭಕ್ತರ ಪಕ್ಷ ಸೇರಿದರು. ಈಗ ನಮಗೂ ಆ ಮಂತ್ರಿಗೂ ಮ್ಯಾಚ್ ಆಗುತ್ತೆ. ನನ್ನಪ್ಪ ಆರ್ಮಿ, ಆ ಮಂತ್ರಿಯೋ ದೇಶಭಕ್ತರ ಪಾರ್ಟಿಯಲ್ಲಿದ್ದಾರೆ. ಮನೆ ಎದುರೇ ಅವರ ಮನೆ ಬೇರೆ. ನನಗೆ ಕೆಲಸ ಫಿಕ್ಸ್ ಎಂಬ ತೀರ್ಮಾನಕ್ಕೆ ಯುವತಿ ಬರುತ್ತಾಳೆ.

ಬೆಂಗಳೂರಿನ ಪಿಜಿಯಲ್ಲಿದ್ದ ಗೆಳೆಯರು ಒಂದು ಸಾಕ್ಷ್ಯಚಿತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಅದರಿಂದ ಒಂದಷ್ಟು ದುಡ್ಡು ಬರುತ್ತದೆ. ಆ ಸಾಕ್ಷ್ಯಚಿತ್ರಕ್ಕೆ ಡ್ಯಾಂಗಳ ಮೇಲಿಂದ ಚಿತ್ರೀಕರಣ ಮಾಡಬೇಕಿರುತ್ತದೆ. ಈ ಮಂತ್ರಿಯ ಬಳಿ ಹೋದರೆ ನಿಷೇಧಿತ ವಲಯವಾಗಿರುವ ಡ್ಯಾಂಗಳ ಚಿತ್ರೀಕರಣ ಮಾಡಬಹುದು ಎಂದುಕೊಂಡು ನೆರೆಮನೆಯ ಮಂತ್ರಿಯ ಸಹಾಯ ಕೇಳುತ್ತಾಳೆ. "ನಾನು ಆರ್ಮಿ ಸೋಲ್ಜರ್ ಮಗಳು. ನಾನು ನಿಮ್ಮ ಮನೆ ಬಳಿಯೇ ಇದ್ದರೂ ಈ ವರೆಗೂ ಭೇಟಿಯಾಗಿಲ್ಲ. ಈಗ ನೀವು ದೇಶಭಕ್ತ ಮಂತ್ರಿಯಾಗಿದ್ದು ಬೋ ಖುಷಿಯಾಗಿದೆ" ಎಂದೇ ಆ ಮಿನಿಸ್ಟರ್ ಗೆ ಪರಿಚಯ ಮಾಡಿಕೊಳ್ಳುತ್ತಾಳೆ. ಅದು ಆತ್ಮೀಯತೆಗೆ ತಿರುಗುತ್ತದೆ. ಡ್ಯಾಂ ಚಿತ್ರೀಕರಣದ ಅನುಮತಿ ಕೊಡಿಸುವುದೊಂದು ಬಿಟ್ಟು ಉಳಿದೆಲ್ಲವನ್ನೂ ಮಂತ್ರಿ ಮಾತನಾಡುತ್ತಾನೆ. ಪ್ರತೀ ಕರೆ ಮಾಡಿದಾಗಲೂ ಯುವತಿಯ ಖಾಸಗಿ ಬದುಕಿನ ಬಗ್ಗೆ ಮಂತ್ರಿ ವಿಚಾರಿಸುತ್ತಾರೆ. "ಆ ಡ್ಯಾಂ ಶೂಟಿಂಗ್ ಪರ್ಮಿಶನ್ ಕೊಡಿಸಿದ್ರೆ ಚಲೋ ಇತ್ತು ಸರ" ಎಂದು ಆಕೆ ಪ್ರತೀ ಭಾರಿಯೂ ಮಂತ್ರಿಯನ್ನು ಗೋಗರೆಯುತ್ತಾಳೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಏನೇನೋ ಕನಸು ಹೊತ್ತ ಸೈನಿಕನ ಮಗಳು ಬದುಕಿಗಾಗಿ ಗೆಳೆಯರ ಜೊತೆ ಏನೇನೋ ಸಾಹಸ ಮಾಡುತ್ತಾಳೆ. ಈ ಮಧ್ಯೆ ನಗರದ ಗೆಳೆಯರಂತೆ ನಾನೂ ಬದುಕಬೇಕು ಎಂಬ ಕೆಟ್ಟ ಶೋಕಿಯ ಬೆನ್ನೇರುತ್ತಾಳೆ. ಅಷ್ಟರಲ್ಲಿ ಪ್ರಧಾನಿಯವರು ಲಾಕ್ ಡೌನ್ ಘೋಷಿಸುತ್ತಾರೆ. ಅಲ್ಲಿಗೆ ಮಹಾನಗರಿಯಲ್ಲಿ ಪಿಜಿ ಸೇರಿದ್ದ ಸೈನಿಕನ ಮಗಳ ಕನಸುಗಳು ಕಮರಿ ಹೋಗುತ್ತೆ. ಕೈಯ್ಯಲ್ಲಿ ಒಂದು ಪೈಸೆ ಇಲ್ಲ. ಆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ರಿಯಲ್ ಎಸ್ಟೇಟ್ ಆಫೀಸ್ ಬಾಗಿಲು ಮುಚ್ಚುತ್ತೆ. ಲಾಕ್ ಡೌನ್ ತೆರವಾದಾಗ ಬದುಕು ಇನ್ನಷ್ಟೂ ದುಸ್ತರವಾಗುತ್ತದೆ. ಹಲವು ಕನಸುಗಳನ್ನು ಹೊತ್ತುಕೊಂಡು ಗೆಳೆಯರ ಜೊತೆ ಹೈಫೈ ಬದುಕಿನ ರುಚಿ ಕಂಡಿದ್ದ ಬಡ ಸೈನಿಕನ ಮಗಳಿಗೆ ಆಗ ನೆನಪಾಗುವುದು ಅದೇ ದೇಶಭಕ್ತರ ಪಕ್ಷದ ಮಿನಿಸ್ಟರ್. ಮತ್ತೆ ಮಿನಿಸ್ಟರ್ ಅನ್ನು ಆಕೆ ಸಂಪರ್ಕ ಮಾಡುತ್ತಾಳೆ‌. ಈ ಬಾರಿ ಮಿನಿಸ್ಟರ್ ಲಾಕ್ ಡೌನ್ ನ ಎಲ್ಲಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಲಾಕ್ ಡೌನ್ ಸಮಯದ ಬದುಕಿನ ಕಷ್ಟಗಳನ್ನು ನಿವಾರಿಸುವ ನೆಪದಲ್ಲಿ ಮಗಳ ಪ್ರಾಯದ ಸೈನಿಕನ ಮಗಳನ್ನು ಮುಕ್ಕಿ ತಿನ್ನುತ್ತಾನೆ. ಅದನ್ನು ಆ ಮಂತ್ರಿಯ ಇಚ್ಚೆಯಂತೆಯೇ ಆಕೆ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಾಳೆ. ಅದನ್ನು ಅವರಿಬ್ಬರೂ ನೋಡಿ ಆನಂದಿಸುತ್ತಾರೆ.

ಗೆಳೆಯರ ಜೊತೆ ಇದ್ದಾಗ ಆಕೆಯ ಮೊಬೈಲ್ ಗೆಳೆಯರಿಗೆ ಸಿಕ್ಕಿ ಆ ವಿಡಿಯೊಗಳು ಲೀಕ್ ಆಗಿರಬಹುದಾದ ಸಾಧ್ಯತೆಗಳಿವೆ. ಈಗ ಇಡೀ ದೇಶದಲ್ಲಿ ಮಂತ್ರಿಯ ಸೆಕ್ಸ್ ಸಿಡಿಯದ್ದೇ ಸುದ್ದಿ.

ಟಿವಿ ಚಾನೆಲ್ ಗಳಲ್ಲಿ ಈ ಸೆಕ್ಸ್ ಸಿಡಿಯ ಬಗ್ಗೆ ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. "ಆ ವಿಡಿಯೋ ನೋಡಿದಾಗ ಆಕೆ ಒಪ್ಪಿ ಲೈಂಗಿಕ ಕ್ರಿಯೆ ಮಾಡಿದಂತಿದೆ. ಆದ್ದರಿಂದ ಇದು ಅಪರಾಧ ಅಲ್ಲ. ಆ ಮಂತ್ರಿ ಅಮಾಯಕ" ಎನ್ನುತ್ತಿದ್ದಾರೆ. ನೀವು ಖೋಟಾ ನೋಟು ಕೊಟ್ಟು ಆಭರಣ ಖರೀಧಿಸಬಹುದು. ಜ್ಯುವೆಲ್ಲರಿ ಶಾಪ್ ನವನು ನೀವು ಕೊಟ್ಟ ಹಣ ಖೋಟಾ ಎಂದು ತಿಳಿಯದೆ ನಿಮಗೆ ಬಿಲ್ ಕೊಟ್ಟು ಗೌರವಯುತವಾಗಿಯೇ ಕಳುಹಿಸಬಹುದು. ನಂತರ ಖೋಟಾ ನೋಟು ಎಂದು ತಿಳಿದು ಕೇಸ್ ಹಾಕಿದಾಗ "ನೀವೇ ಪ್ಯಾಕ್ ಮಾಡಿ ಕೊಟ್ಟು ಕಳುಹಿಸಿದ್ದು ತಾನೆ ?" ಅಂತ ವಾದಿಸೋಕೆ ಆಗುತ್ತಾ? ಯುವತಿಯ ಬಡತನ, ಲಾಕ್ ಡೌನ್ ಅಫೆಕ್ಟ್ ಅನ್ನು ಮಂತ್ರಿ ಕೆಟ್ಟದಾಗಿ ಬಳಕೆ ಮಾಡಿದ್ದಾರೆ ಅಷ್ಟೆ. ಇದೊಂದು ಲೈಂಗಿಕ ಕಿರುಕುಳವೇ ಸರಿ. ಸಿಡಿಯೇನಾದರೂ ಹೊರಬರದೇ ಇದ್ದರೆ ಆ ಯುವತಿ ಇಂದು ಜೀವಂತ ಇರ್ತಾ ಇದ್ದಳೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳಿವೆ.

ಒಂದು ಲೈಂಗಿಕ ದೌರ್ಜನ್ಯದ ಸಿಡಿ ಹಿಂದೆ ಹುಸಿ ದೇಶಭಕ್ತಿಯ ಭರವಸೆ, ಲಾಕ್ ಡೌನ್ ಪರಿಣಾಮಗಳಿವೆ. ಸಿಡಿ ಬಹಿರಂಗಗೊಂಡ ಬಳಿಕ ಜೈಲಿಗೆ ಹೋಗಬೇಕಾದ ಆ ದೇಶಭಕ್ತ ಮಂತ್ರಿ ಮಾತ್ರ ರಾಜೀನಾಮೆ ಕೊಟ್ಟು ವಂಧಿಮಾಗದರು, ಭಕ್ತರ ವಿಮರ್ಶೆಯಲ್ಲಿ ನಿರಪರಾಧಿ ಆಗುತ್ತಿದ್ದಾರೆ. ದೇಶಭಕ್ತರು, ಸುಸಂಸ್ಕೃತರು "ಇಂತಹ ಮಹಿಳೆಯರಿಂದಲೇ ಸಮಾಜ ಹಾಳಾಗುತ್ತಿದೆ" ಎಂದು ಆ ಹುಡುಗಿಯ ಸಾಲು ಸಾಲು ಫೋಟೋಗಳನ್ನು ಹರಿ ಬಿಡುತ್ತಿದ್ದಾರೆ. ಈ ರೀತಿ ಆ ಹುಡುಗಿಯ ಫೋಟೋವನ್ನು ಕಳುಹಿಸಿ ಕೆಟ್ಟದಾಗಿ ಬರೆಯೋ ಮೊದಲು ಆ ಬಡ ಸೈನಿಕನ ಮಗಳ ಬದುಕಿನ ಬಗ್ಗೆ ಅರಿವಿರಲಿ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com