ಸಿಡಿ ಪ್ರಕರಣ: ಅಪಪ್ರಚಾರದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕರ್ನಾಟಕ ರಣಧೀರ ಪಡೆ

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಣಧೀರ ಪಡೆ , ನಮ್ಮ ವೇದಿಕೆಯಲ್ಲಿರುವ ಯುವತಿಯ ಫೋಟೋ ಬಳಸಿಕೊಂಡು 'ಸೆಕ್ಸ್-ಸಿಡಿ ಹನಿಟ್ರಾಪ್ ' ಎಂಬಂತಹ ಕ್ಯಾಪ್ಷನ್ ನೀಡಿ ಜಾಲತಾಣಗಳಲ್ಲಿ ಹರಿಬಿಡುವುದು ಕಂಡುಬಂದಿದೆ. ಈ ಕೃತ್ಯದ ವಿರುದ್ಧ ಕಾನೂನು ಕ್ರಮಕ್ಕೆ ಕರಪ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಿಡಿ ಪ್ರಕರಣ: ಅಪಪ್ರಚಾರದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕರ್ನಾಟಕ  ರಣಧೀರ ಪಡೆ

ದೇಶಾದ್ಯಂತ ಸುದ್ದಿ ಮಾಡುತ್ತಿರುವ ಕರ್ನಾಟಕ ಸಚಿವರ ಸಿಡಿ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ನಿಗೂಢವಾಗಿದೆ. ಈ ನಡುವೆ ಕರ್ನಾಟಕ ರಣಧೀರ ಪಡೆಯ ವಿರುದ್ಧ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಸಿಡಿಯ ದೃಶ್ಯಾವಳಿಯಲ್ಲಿರುವ ಯುವತಿಗೆ ಸಾಮ್ಯವಿರುವ ಯುವತಿಯರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡಲಾಗುತ್ತದೆಯೆಂದು ಕರ್ನಾಟಕ ರಣಧೀರ ಪಡೆ ಆರೋಪಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಣಧೀರ ಪಡೆ , ನಮ್ಮ ವೇದಿಕೆಯಲ್ಲಿರುವ ಯುವತಿಯ ಫೋಟೋ ಬಳಸಿಕೊಂಡು 'ಸೆಕ್ಸ್-ಸಿಡಿ ಹನಿಟ್ರಾಪ್ ' ಎಂಬಂತಹ ಕ್ಯಾಪ್ಷನ್ ನೀಡಿ ಜಾಲತಾಣಗಳಲ್ಲಿ ಹರಿಬಿಡುವುದು ಕಂಡುಬಂದಿದೆ. ಈ ಕೃತ್ಯದ ವಿರುದ್ಧ ಕಾನೂನು ಕ್ರಮಕ್ಕೆ ಕರಪ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com