ಸಿಡಿ ಹಗರಣ: ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದ ದೂರು ವಾಪಸ್

ಒಂದು ಕಡೆ ಸಾಲು ಸಾಲು ಸಚಿವರ ಸ್ಥಾನ ಮತ್ತು ಮಾನಕ್ಕೆ ಸಂಚಕಾರ ತರುವ ಮೂಲಕ ಬಿಜೆಪಿ ಸರ್ಕಾರಕ್ಕೇ ಅಪಾಯ ತಂದೊಡ್ಡುವ ಮಟ್ಟಿಗೆ ಬೆಳೆದಿದ್ದ ತಮ್ಮ ದೂರನ್ನು ಹೀಗೆ ದೂರುದಾರರು ದಿಢೀರನೇ ವಾಪಸು ಪಡೆದಿರುವುದು ಸಹಜವಾಗೇ ದೊಡ್ಡ ಸಂಶಯಗಳಿಗೆ ಎಡೆಮಾಡಿದೆ.
ಸಿಡಿ ಹಗರಣ: ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದ ದೂರು ವಾಪಸ್

ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದೂರುದಾರ ದಿನೇಶ್ ಕಲ್ಳಹಳ್ಳಿ ಉಲ್ಟಾ ಹೊಡೆದಿದ್ದು, ಸಚಿವರು ಯುವತಿಯೊಬ್ಬಳಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಬೆಂಗಳೂರು ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸು ಪಡೆದಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವರಾಗಿದ್ದ ಜಾರಕಿಹೊಳಿ ಅವರ ರಾಜೀನಾಮೆಗೆ ಕಾರಣವಾದ ಬೆನ್ನಲ್ಲೇ ಬಿ ಎಸ್ ಯಡಿಯೂರಪ್ಪ ಸಂಪುಟದ ಸಾಲು ಸಾಲು ಸಚಿವರು ತಮ್ಮ ವಿರುದ್ಧವೂ ಇಂತಹದ್ದೇ ಲೈಂಗಿಕ ಹಗರಣ ಸಿಡಿಗಳು ಹೊರಬರಬಹುದು ಎಂಬ ಧಾವಂತದಲ್ಲಿ ಕೋರ್ಟ್ ಮೊರೆಹೋಗಿ ಮಾಧ್ಯಮಗಳಲ್ಲಿ ಅಂತಹ ಯಾವುದೇ ಮಾನಹಾನಿಕರ ಸುದ್ದಿಗಳು ಪ್ರಸಾರವಾಗದಂತೆ ತಡೆಯಾಜ್ಞೆ ತರುವ ಮೂಲಕ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ ಇದ್ದಕ್ಕಿಂತ ದೂರದಾರರೇ ದೂರು ವಾಪಸು ಪಡೆದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ.

ಸಿಡಿ ಹಗರಣ: ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದ ದೂರು ವಾಪಸ್
ಸಿಡಿ ಬಿಡುಗಡೆ ಮಾಡಲು ಐದು ಕೋಟಿಯ ವ್ಯವಹಾರ ನಡೆದಿದೆ – ಹೆಚ್‌ಡಿಕೆ ಮಾಹಿತಿ

ಸಚಿವರದ್ದು ಎನ್ನಲಾದ ಸೆಕ್ಸ್ ಸಿಡಿ ಬಿಡುಗಡೆಯಾಗಿ ಮತ್ತು ಆ ಕುರಿತು ದಿನೇಶ್ ಕಲ್ಲಹಳ್ಳಿ ಎಂಬ ಸಾಮಾಜಿಕ ಕಾರ್ಯಕರ್ತ ಪೊಲೀಸರಿಗೆ ದೂರು ನೀಡಿ ಐದಾರು ದಿನಗಳಾದರೂ ಪೊಲೀಸರು ಈವರೆಗೆ ದೂರಿನ ಸಂಬಂಧ ಯಾರ ವಿರುದ್ಧವೂ ಎಫ್ ಐಆರ್ ದಾಖಲಾಗಿರಲಿಲ್ಲ. ದೂರುದಾರನಿಗೂ ಕೃತ್ಯದಲ್ಲಿ ಭಾಗಿಯಾದ ಸಂತ್ರಸ್ತೆ ಮಹಿಳೆಗೂ ಯಾವುದೇ ಸಂಬಂಧವಿರದ ಹಿನ್ನೆಲೆಯಲ್ಲಿ, ಸ್ವತಃ ಸಂತ್ರಸ್ತೆ ಅಥವಾ ಆಕೆಯ ರಕ್ತಸಂಬಂಧಿಗಳು ಅಥವಾ ಕುಟುಂಬಸ್ಥರ ಹೇಳಿಕೆ ಪಡೆಯುವವರೆಗೆ ಎಫ್ ಐಆರ್ ದಾಖಲು ಮಾಡಲಾಗದು ಎಂಬ ತಾಂತ್ರಿಕ ತೊಡಕಿನ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಸಂತ್ರಸ್ತೆಯ ಶೋಧ ಕೂಡ ವಿಫಲವಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದಾಗ್ಯೂ ಸಚಿವ ಜಾರಕಿಹೊಳಿ ಅವರು ಸಿಡಿ ಬಹಿರಂಗವಾದ ಮಾರನೇ ದಿನವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರಂಭದಲ್ಲಿ ತಮಗೂ ಸಿಡಿಗೂ ಸಂಬಂಧವಿಲ್ಲ. ಅದು ನಕಲಿ ಸಿಡಿ. ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ, ಕೆಲವೇ ಗಂಟೆಗಳಲ್ಲಿ ದಿಢೀರನೇ ರಾಜೀನಾಮೆ ನೀಡಿದ್ದರು. ಆ ಮೂಲಕ ಪರೋಕ್ಷವಾಗಿ ಸಿಡಿಯ ಸಾಚಾತನದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಸಚಿವರ ವಿರುದ್ಧದ ಲೈಂಗಿಕ ಹಗರಣ ಬಯಲಾಗುತ್ತಲೇ ರಾಜ್ಯ ಮತ್ತು ಕೇಂದ್ರ ಬಿಜೆಪಿ ಕೂಡ ತೀವ್ರ ಸಾರ್ವಜನಿಕ ಒತ್ತಡಕ್ಕೆ ಸಿಲುಕಿತ್ತು. ಮುಜುಗರಕ್ಕೀಡಾಗಿತ್ತು.

ಆದರೆ, ಜಾರಕಿಹೊಳಿ ರಾಜೀನಾಮೆಯ ಬೆನ್ನಲ್ಲೇ, ಒಂದೂವರೆ ವರ್ಷದ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಮೂಲಕ ಕೆಡವಿ, ಮುಂಬೈಗೆ ತೆರಳಿದ್ದ 15 ಮಂದಿ ಶಾಸಕರ ಸಿಡಿಗಳೂ ಬಯಲಾಗಲಿವೆ ಎಂಬ ವದಂತಿ ಹಬ್ಬಿತ್ತು. ಆ ವದಂತಿಯ ಬೆನ್ನಲ್ಲೇ ಆರಕ್ಕೂ ಹೆಚ್ಚು ಸಚಿವರು ಕೋರ್ಟಿನ ಮೊರೆ ಹೋಗಿ ತಮ್ಮ ವಿರುದ್ಧದ ಮಾನಹಾನಿಕರ ವರದಿಗಳನ್ನು ಪ್ರಕಟಿಸದಂತೆ ತಡೆಯಾಜ್ಞೆ ತಂದಿದ್ದಾರೆ. ಆ ಹಿನ್ನೆಲೆಯಲ್ಲಿ ಇಡೀ ಬಿಜೆಪಿ ಸರ್ಕಾರವೇ ಒತ್ತಡಕ್ಕೆ ಸಿಲುಕಿತ್ತು. ಈ ಸಚಿವರ ತಡೆಯಾಜ್ಞೆ ಪ್ರಯತ್ನ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತಂದಿದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಕೂಡ ತರಾಟೆಗೆ ತೆಗೆದುಕೊಂಡಿದ್ದರು. ಇಡೀ ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿತ್ತು.

ಆ ಹಿನ್ನೆಲೆಯಲ್ಲಿ ಸಿಡಿ ಪ್ರಕರಣ ಗಂಭೀರ ತಿರುವು ತೆಗೆದುಕೊಳ್ಳುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ದೂರದಾರರ ಮೇಲೆ ಭಾರೀ ಒತ್ತಡ ಇತ್ತು. ಈ ನಡುವೆ ಪ್ರತಿಪಕ್ಷ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು, ಸಿಡಿ ಹಗರಣದಲ್ಲಿ ಹೆಸರು ಕೇಳಿಬಂದ ಸಚಿವರ ಪರವೇ ವಕಾಲತು ವಹಿಸಿ ದೂರುದಾರರ ವಿರುದ್ಧ ಬ್ಲ್ಯಾಕ್ ಮೇಲೆ ಆರೋಪ ಮಾಡಿದ್ದರು. ಪ್ರಕರಣದಲ್ಲಿ ಬರೋಬ್ಬರಿ ಐದು ಕೋಟಿ ರೂ. ಡೀಲ್ ಆಗಿದೆ ಎಂಬ ಮಾಹಿತಿ ತಮಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಇಂತಹ ಸಂಚಲನದ ಬೆನ್ನಲ್ಲೇ ಇದೀಗ ದೂರುದಾರ ದಿನೇಶ್ ಅವರು, ಪ್ರಕರಣದಲ್ಲಿ ಮಹಿಳೆಗೆ ಅನ್ಯಾಯವಾಗಿದೆ ಎಂಬ ಸಾಮಾಜಿಕ ಕಾಳಜಿಯಿಂದ ದೂರು ನೀಡಿದ್ದೆ. ಆದರೆ, ಇದೀಗ ಮಹಿಳೆಯ ತೇಜೋವಧೆ ಮಾಡಲಾಗುತ್ತಿದೆ ಮತ್ತು ದೂರು ನೀಡಿದ ತಮ್ಮ ಮೇಲೆಯೇ ಬ್ಲ್ಯಾಕ್ ಮೇಲೆ ಆರೋಪ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಮನನೊಂದು ದೂರನ್ನು ವಾಪಸು ಪಡೆಯುತ್ತಿದ್ದೇನೆ ಎಂದು ದೂರು ವಾಪಸು ಪಡೆದಿದ್ದಾರೆ.

ಸಿಡಿ ಹಗರಣ: ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದ ದೂರು ವಾಪಸ್
ರಾಜ್ಯವೇ ತಲೆತಗ್ಗಿಸುವಂತೆ ಮಾಡಿದ ‘ಸಿಡಿ’ ಹಿಂದೆ ಇರುವುದು ಯಾರು?

ಒಂದು ಕಡೆ ಸಾಲು ಸಾಲು ಸಚಿವರ ಸ್ಥಾನ ಮತ್ತು ಮಾನಕ್ಕೆ ಸಂಚಕಾರ ತರುವ ಮೂಲಕ ಬಿಜೆಪಿ ಸರ್ಕಾರಕ್ಕೇ ಅಪಾಯ ತಂದೊಡ್ಡುವ ಮಟ್ಟಿಗೆ ಬೆಳೆದಿದ್ದ ತಮ್ಮ ದೂರನ್ನು ಹೀಗೆ ದೂರುದಾರರು ದಿಢೀರನೇ ವಾಪಸು ಪಡೆದಿರುವುದು ಸಹಜವಾಗೇ ದೊಡ್ಡ ಸಂಶಯಗಳಿಗೆ ಎಡೆಮಾಡಿದೆ. ಜಾರಕಿಹೊಳಿಯಂತಹ ಪ್ರಭಾವಿ ಸಚಿವರ ವಿರುದ್ಧ ಇಂತಹದ್ದೊಂದು ಗುರುತರ ಆರೋಪ ಹೊರಿಸಿ ದೂರು ನೀಡುವಾಗಲೇ ಸಾಮಾನ್ಯವಾಗಿ ಯಾರಾದರೂ ಮುಂದೆ ಎದುರಾಗಬಹುದಾದ ಒತ್ತಡ, ಬೆದರಿಕೆ, ಆರೋಪಗಳನ್ನು ಎಣಿಸಿಯೇ ಇರುತ್ತಾರೆ. ಅಂತಹ ಪರಿಣಾಮಗಳನ್ನು ಊಹಿಸಿಯೇ ಮುಂದಿನ ಹೆಜ್ಜೆ ಇಟ್ಟಿರುತ್ತಾರೆ. ಆದರೆ, ಸ್ವತಃ ಹತ್ತಾರು ವರ್ಷಗಳಿಂದ ಹಲವು ಪ್ರಕರಣಗಳಲ್ಲಿ ಕಾನೂನು ಹೋರಾಟ ಮಾಡಿರುವುದಾಗಿಯೂ, ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡಿರುವುದಾಗಿಯೂ ಹೇಳಿಕೊಂಡಿರುವ ದಿನೇಶ್ ಅವರು, ಅಂತಹದ್ದನ್ನೆಲ್ಲಾ ಊಹಿಸದೇ ಇಂತಹ ಹೈಪ್ರೊಫೈಲ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರೆ? ಹಾಗಿದ್ದರೆ ಕೇವಲ ಆರೋಪಕ್ಕೆ ಬೆದರಿ ವಾಪಸು ಪಡೆದಿದ್ದು ಯಾಕೆ? ಅಥವಾ ಅವರು ಹೇಳಿಕೊಂಡಿರುವ ಕಾರಣಗಳಲ್ಲದೆ ಬೇರೆ ಗಂಭೀರ ಕಾರಣಗಳು ಈ ಅವರು ದೂರು ಪಡೆಯಲು ಪ್ರೇರಣೆಯಾಗಿರಬಹುದೆ? ಎಂಬ ಗಂಭೀರ ಪ್ರಶ್ನೆಗಳು ಈಗ ಎದ್ದಿವೆ.

ಸಿಡಿ ಹಗರಣ: ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದ ದೂರು ವಾಪಸ್
CD ಪ್ರಕರಣ: ರಾಜಿನಾಮೆ ನೀಡಿದ ರಮೇಶ್‌ ಜಾರಕಿಹೊಳಿ

ಮತ್ತೊಂದು ಕಡೆ, ದೂರು ವಾಪಸು ಪಡೆದಿರುವ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ, ಪ್ರಕರಣದಲ್ಲಿ 15 ಕೋಟಿ ರೂ. ವ್ಯವಹಾರ ನಡೆದಿದೆ. ನಾಲ್ಕು ತಂಡಗಳು ಈ ಸಿಡಿ ವಿಷಯದಲ್ಲಿ ಹನಿಟ್ರ್ಯಾಪ್ ಜಾಲ ರಚಿಸಿ ಬ್ಲ್ಯಾಕ್ ಮೇಲ್ ನಡೆಸಿವೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಹಾಗೆ ಆರೋಪ ಮಾಡುವಾಗ ಅವರು ದೂರುದಾರ ದಿನೇಶ್ ಬಗ್ಗೆ ಪ್ರಸ್ತಾಪಿಸಿ, ಅವರು ಅಮಾಯಕರಿರಬಹುದು. ಅವರಿಗೆ ಪ್ರಕರಣದ ಹಿಂದಿನ ವ್ಯಕ್ತಿಗಳು ಮತ್ತು ಹನಿಟ್ರ್ಯಾಪ್ ವಿಷಯ ಗೊತ್ತಿಲ್ಲದೇ ಇರಬಹುದು ಎಂದು ಬಹಳ ಮೃದು ಧೋರಣೆಯ ಮಾತುಗಳನ್ನಾಡಿದ್ದಾರೆ.

ಹಾಗಾಗಿ, ದೂರು ವಾಪಸು ಪಡೆಯುವ ಮೂಲಕ ಸದ್ಯಕ್ಕೆ ರಮೇಶ್ ಜಾರಕಿಹೊಳಿ ಮತ್ತು ರಾಜ್ಯ ಬಿಜೆಪಿ ಸರ್ಕಾರಕ್ಕೆ ನಿರಾಳವೆನಿಸಿದರೂ, ಪ್ರಕರಣದ ಗೋಜಲುಗಳನ್ನು ಬಿಡಿಸಿ, ಸತ್ಯಾಸತ್ಯತೆ ಹೊರಗೆಳೆಯುವ ಮಹತ್ತರ ಹೊಣೆಗಾರಿಕೆ ರಾಜ್ಯ ಪೊಲೀಸರ ಮೇಲಿದೆ ಮತ್ತು ಅಂತಹ ನಿಷ್ಪಕ್ಷಪಾತಿ ತನಿಖೆಯನ್ನು ಖಾತರಿಪಡಿಸುವ ಮೂಲಕ ಇಡೀ ರಾಜ್ಯದ ಜನತೆ ತಲೆತಗ್ಗಿಸುವಂತೆ ಮಾಡಿರುವ ಪ್ರಕರಣದ ಸತ್ಯ ಹೊರಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೇಲಿದೆ. ಆದರೆ, ಸದ್ಯದ ಆಡಳಿತದಿಂದ ಅಂತಹ ಎದೆಗಾರಿಕೆ ಮತ್ತು ಪ್ರಾಮಾಣಿಕತೆಯನ್ನು ನಿರೀಕ್ಷಿಸಬಹುದೆ? ಎಂಬುದು ಪ್ರಶ್ನೆ!

ಸಿಡಿ ಹಗರಣ: ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದ ದೂರು ವಾಪಸ್
ರಮೇಶ್‌ ಜಾರಕಿಹೊಳಿ ವಿರುದ್ದ ತೀವ್ರಗೊಂಡ ಪ್ರತಿಭಟನೆ: ರಾಜಿನಾಮೆಗೆ ಆಗ್ರಹ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com