CD ಪ್ರಕರಣ: ರಾಜಿನಾಮೆ ನೀಡಿದ ರಮೇಶ್‌ ಜಾರಕಿಹೊಳಿ

ಈ ವೀಡಿಯೋ ತನ್ನದಲ್ಲ ಎಂದು ಹೇಳಿದ್ದ ರಮೇಶ್‌ ಜಾರಕಿಹೊಳಿ ಅವರು, ನಿನ್ನೆ ರಾಜಿನಾಮೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.
CD ಪ್ರಕರಣ: ರಾಜಿನಾಮೆ ನೀಡಿದ ರಮೇಶ್‌ ಜಾರಕಿಹೊಳಿ

ಸಿಡಿ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಕೊನೆಗೂ ರಮೇಶ್‌ ಜಾರಕಿಹೊಳಿ ಅವರಿಂದ ರಾಜಿನಾಂಎಯನ್ನು ಪಡೆದಿದೆ.

ಬುಧವಾರ, ಬಾಲಚಂದ್ರ ಜಾರಕಿಹೊಳಿ ಅವರು, ತಮ್ಮ ಅಣ್ಣ ರಮೇಶ ಜಾರಕಿಹೊಳಿ ಪರವಾಗಿ ರಾಜಿನಾಮೆ ಪತ್ರವನ್ನು ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದಾರೆ.

“ತನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದರ ಕುರಿತು ಶೀಘ್ರದಲ್ಲಿಯೇ ತನಿಖೇ ಆಗಬೇಕು. ನಾನು ನಿರ್ದೋಷಿಯಾಗುವ ವಿಶ್ವಾಸವಿದ್ದರೂ, ನೈತಿಕ ಹೊಣೆ ಹೊತ್ತು ಸಚಿವ ಸಂಪುಟ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ,” ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ ನಾಯಕರ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ, ತುರ್ತಾಗಿ ರಾಜಿನಾಮೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ವೀಡಿಯೋ ತನ್ನದಲ್ಲ ಎಂದು ಹೇಳಿದ್ದ ರಮೇಶ್‌ ಜಾರಕಿಹೊಳಿ ಅವರು, ನಿನ್ನೆ ರಾಜಿನಾಮೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಆದರೆ, ಬುಧವಾರ ಮಧ್ಯಾಹ್ನದ ವೇಳೆ ಎಲ್ಲಾ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿ, ರಾಜಿನಾಮೆ ನೀಡಲೇಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com