ಹೆಚ್‌ಡಿಕೆ ವಿರುದ್ದ ಸಿಪಿವೈ ವಾಗ್ದಾಳಿ: ಕಿಡಿಕಾರಿದ ಜೆಡಿಎಸ್‌ ನಾಯಕರು

ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ. ಸಿ.ಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ.ಅದನ್ನು ಅಚ್ಚುಕಟ್ಟಾಗಿ ಮಾಡಲಿ, ಸಾರಾ ಮಹೇಶ್‌ ಕಿವಿ ಮಾತು ಹೇಳಿದ್ದಾರೆ.
ಹೆಚ್‌ಡಿಕೆ ವಿರುದ್ದ ಸಿಪಿವೈ ವಾಗ್ದಾಳಿ: ಕಿಡಿಕಾರಿದ ಜೆಡಿಎಸ್‌ ನಾಯಕರು

ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ವಿರುದ್ದ ಸಚಿವ ಸಿ ಪಿ ಯೋಗೇಶ್ವರ್‌ ಟೀಕಾಪ್ರಹಾರ ನಡೆಸಿದ ಬೆನ್ನಲ್ಲೇ, ಜೆಡಿಎಸ್‌ ನಾಯಕರು ಅವರ ವಿರುದ್ದ ಸಿಡಿದೆದ್ದಿದ್ದಾರೆ. ಯೋಗೇಶ್ವರ್‌ ಒಬ್ಬ ಬಚ್ಚಾ, ಬೆದರಿಕೆ ಹಾಗೂ ಸಿಡಿಯಿಂದ ಸಚಿವನಾದ ಏಕೈಕ ಮಂತ್ರಿ ಎಂದು ಜೆಡಿಎಸ್‌ ನಾಯಕ ಶರವಣ ಹೇಳಿದರೆ ಹುಟ್ಟೂರಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ? ಎಂದು ಸಾರಾ ಮಹೇಶ್‌ ಹೇಳಿದ್ದಾರೆ.

“ಅವನೊಬ್ಬ ಬಚ್ಚಾ... ಯೋಗೇಶ್ವರ್‌ ಕುರಿತ ಹೆಚ್‌ಡಿಕೆ ಅವರ ಮಾತು ಅಕ್ಷರಶಃ ನಿಜ. ಯೋಗೇಶ್ವರ್‌ ರಾಜಕೀಯ ಪ್ರಬುದ್ಧನಲ್ಲ. ಆತನ ಮನಸ್ಸು ಮಂಗನಂತೆ ಚಂಚಲ. ಹೀಗಾಗಿಯೇ ಊರಲ್ಲಿರುವ ಪಕ್ಷಗಳನ್ನೆಲ್ಲ ಸುತ್ತಿಬಂದಿದ್ದಾನೆ. ಈಗ ಬಿಜೆಪಿಯಲ್ಲಿ ಕುಳಿತು ಸಿದ್ಧಾಂತದ ಮಾತಾಡುತ್ತಾನೆ. ಆತನ ಬಾಯಲ್ಲಿ ಸಿದ್ಧಾಂತ ಕೇಳಿ ನಗಲಾರದವರೂ ನಕ್ಕರೆ ಆಶ್ಚರ್ಯವಿಲ್ಲ,” ಎಂದು ಏಕವಚನದಲ್ಲಿ ಯೋಗೇಶ್ವರ್‌ ವಿರುದ್ದ ಕಿಡಿಕಾರಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯೋಗೇಶ್ವರ್‌ ತಾನೊಬ್ಬ ಸಾಚಾ ವ್ಯಕ್ತಿತ್ವದವನೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ, ಮೆಗಾಸಿಟಿ ಹಗರಣದಲ್ಲಿನ ಅವನ ಪಾತ್ರ, ಅವನಿಂದ ನೊಂದವರು, ಆತ್ಮಹತ್ಯೆ ಮಾಡಿಕೊಂಡವರನ್ನು ಆತ ಮರೆಯುತ್ತಾನೆ. ವಂಚನೆ, ದಂಧೆ, ಜೂಜು ಎಂದರೆ ಕಣ್ಣೆದುರಿಗೆ ಬರುವುದೇ ಯೋಗೇಶ್ವರ. ಇಂಥವನು ಜನನಾಯಕನೊಬ್ಬನನ್ನು ಹೀಯಾಳಿಸುವುದು ಅಪಚಾರವೇ ಸರಿ, ಎಂದು ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

ಟಿ ಎ ಶರವಣ
ಟಿ ಎ ಶರವಣ

“ಯೋಗೇಶ್ವರ ಒಬ್ಬ ಸುಳ್ಳುಕೋರ. ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಲು ಹೊರಟ ಆತ, ತಾನು ಕುಮಾರಸ್ವಾಮಿ ಅವರನ್ನು ಅಡ್ಜೆಸ್ಟ್‌ ಮಾಡಿರುವುದಾಗಿ ಚುನಾವಣೆ ವೇಳೆ ಅಪಪ್ರಚಾರ ಮಾಡಿದ್ದ. ಯೋಗೇಶ್ವರನ ಮಾತಿನಿಂದ ಜೆಡಿಎಸ್‌ ಕಾರ್ಯಕರ್ತರು, ಎಚ್ಡಿಕೆ ಅವರಲ್ಲಿ ಉಂಟಾದ ಕೋಪದ ಬೆಂಕಿಗೆ ಆತ ಸೋತ. ಆತನ ಸುಳ್ಳು, ಅಬದ್ಧ ಮಾತುಗಳು ಅವನನ್ನು ಮುಗಿಸಿದವು,” ಎಂದಿದ್ದಾರೆ.

ಇನ್ನು ಯೋಗೇಶ್ವರ್‌ ಅವರನ್ನು ಟೀಕಿಸಲು ಟ್ವಿಟರ್‌ ಮೊರೆ ಹೋದ ಸಾರಾ ಮಹೇಶ್‌ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಚನ್ನಪಟ್ಟಣದಲ್ಲಿ 'ಸರ್ವಪಕ್ಷ ಸದಸ್ಯ' ಯೋಗೇಶ್ವರ್‌ಬೆಂಬಲಿತ ಅಭ್ಯರ್ಥಿಗಳು ಹೇಳ ಹೆಸರಿಲ್ಲದೇ ಸೋತಿದ್ದಾರೆ. 80% ಜೆಡಿಎಸ್‌ ಗೆದ್ದಿದೆ. ದಿನೇ ದಿನೇ ಚನ್ನಪಟ್ಟಣ ಕ್ಷೇತ್ರ ದೂರವಾಗುತ್ತಿರುವುದು ನೋಡಲಾಗದೇ ಕ್ಷೇತ್ರ ಕಳೆದುಹೋಗಿರುವ ನೋವು ತಡೆಯಲಾಗದೇ ಯೋಗೇಶ್ವರ್ ಗೆ ಮತಿ ಭ್ರಮಣೆಯಾಗಿದೆ. ಅದಕ್ಕೇ ಉರಿ ಮಾತು, ಎಂದು ವ್ಯಂಗ್ಯವಾಡಿದ್ದಾರೆ.

“ಚನ್ನಪಟ್ಟಣದ ಚಕ್ಕೆರೆ 'ಸರ್ವಪಕ್ಷ ಸದಸ್ಯ' ಯೋಗೇಶ್ವರ್ ಹುಟ್ಟೂರು. ಯಾವುದೇ ನಾಯಕನಿಗೆ ಹುಟ್ಟೂರಿನಲ್ಲಾದರೂ ಮರ್ಯಾದೆ ಇರುತ್ತದೆ. ಆದರೆ, ಯೋಗೇಶ್ವರ್ ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಮೊನ್ನೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಇಡೀ ಚಕ್ಕರೆ ಗ್ರಾಮ ಪಂಚಾಯಿತಿ ಜೆಡಿಎಸ್‌ ಬೆಂಬಲಿಸಿದೆ. ಈ ನೋವು ಆವರನ್ನು ಕಾಡುತ್ತಿರಬಹುದು,” ಎಂದು ಹೇಳಿದ್ದಾರೆ.

ಸಾರಾ ಮಹೇಶ್
ಸಾರಾ ಮಹೇಶ್

ಹುಟ್ಟೂರಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಎಚ್‌ಡಿಕೆಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್ ಮಾತು ವಾಸ್ತವವೇ? ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ. ಸಿ.ಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ.ಅದನ್ನು ಅಚ್ಚುಕಟ್ಟಾಗಿ ಮಾಡಲಿ, ಎಂದು ಸಾರಾ ಮಹೇಶ್‌ ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com