ಗದಗ: ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಗೆ ಸಿಕ್ಕಿತು ಒಳ್ಳೆಯ ರೆಸ್ ಪಾನ್ಸ್

ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ಸ್ಪರ್ಧೆಗಾಗಿ ಕಳೆದ ಒಂದು ತಿಂಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇನೆ. ಫೆ.19ರಂದು ನಡೆದ 16 ವರ್ಷದೊಳಗಿನವರ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದೇನೆ. ಮುಂಬರುವ ಸ್ಫರ್ಧೆಯು ರಾಜ್ಯದಲ್ಲಿ ನಡೆಯುವುದಾದರೆ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲೆಯ ಕಡಕೊಳ ಗ್ರಾಮದ ಪವಿತ್ರಾ ಕುರ್ತಕೋಟಿ ಅನುಭವ ಹಂಚಿಕೊಂಡರು.
ಗದಗ: ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಗೆ ಸಿಕ್ಕಿತು ಒಳ್ಳೆಯ ರೆಸ್ ಪಾನ್ಸ್

ಸೈಕ್ಲಿಂಗ್ ಫಡರೇಶನ್ ಆಫ್ ಇಂಡಿಯಾ, ರಾಜ್ಯ ಸೈಕ್ಲಿಂಗ್ ಸಂಸ್ಥೆ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಹಾಗೂ ಗ್ರಾ.ಪಂ ಅಸುಂಡಿ ಮತ್ತು ಬಿಂಕದಕಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ 17ನೇ ರಾಷ್ಟ್ರೀಯ ಸೀನಿಯರ್, ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಕ್ರೀಡೆಯನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಬಿಂಕದಕಟ್ಟಿಯಲಿರುವ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಮೌಂಟೇನ್ ಬೈಕ್ ಟ್ರ್ಯಾಕ್‍ನಲ್ಲಿ ಫೆ.19 ರಿಂದ ಫೆ.21ರ ವರೆಗೆ ಈ ಕ್ರೀಡೆಯು ನಡೆಯುತ್ತಿವೆ.

ಉತ್ತರಾಖಂಡ, ಅರುಣಾಚಲ ಪ್ರದೇಶ, ಲಡಾಕ್ ಹೀಗೆ ದೂರದರಾಜ್ಯಗಳಿಂದ ಆಗಮಿಸಿರುವ ಸ್ಪರ್ಧಾರ್ಥಿಗಳ ಕಣ್ಣಲ್ಲಿ ಉತ್ಸಾಹದ ಚಿಲುಮೆ ಹೊಮ್ಮುತ್ತಿತ್ತು. ಸಾಲುಮರದ ತಿಮ್ಮಕ್ಕನ ಉದ್ಯಾನವನದಲ್ಲಿನ ಮರಗಳ ನೆರಳಲ್ಲಿ ಮುದ್ದು ಮಕ್ಕಳ ಆಟ ನೋಡಲು ಪಾಲಕರ ದಂಡೇ ನೆರೆದಿತ್ತು. 2.6 ಮತ್ತು 4.6 ಕಿ.ಮೀ ಟ್ರ್ಯಾಕ್ ಉದ್ದಕ್ಕೂ ಸ್ಪರ್ಧಾಳುಗಳನ್ನು ತರಬೇತಿದಾರರು ಮತ್ತು ಪೋಷಕರ ಚಪ್ಪಾಳೆ, ಸಿಳ್ಳೆ ಮೂಲಕ ಹುರಿದುಂಬಿಸುವಲ್ಲಿ ನಿರತವಾದ ದೃಶ್ಯ ಸಾಮಾನ್ಯವಾಗಿತ್ತು.

ರಾಜ್ಯದಿಂದ 38 ಜನ ಹಾಗೂ ಜಿಲ್ಲೆಯ 7 ಜನ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ದೇಶದ 28 ರಾಜ್ಯಗಳ 292 ಬಾಲಕರು, 94 ಬಾಲಕಿಯರು ಸೇರಿದಂತೆ ಒಟ್ಟು 386 ಸೈಕ್ಲಿಸ್ಟ್‍ಗಳು, 435 ತರಬೇತಿದಾರರು, ನಿರ್ಣಾಯಕರು ಮತ್ತು ವ್ಯವಸ್ಥಾಪಕರು ಪಾಲ್ಗೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗದಗ: ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಗೆ ಸಿಕ್ಕಿತು ಒಳ್ಳೆಯ ರೆಸ್ ಪಾನ್ಸ್
ಫೆ18 ರಿಂದ ಗದಗದಲ್ಲಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆ

ಬಿಂಕದಕಟ್ಟಿಯ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ನಿರ್ಮಿಸಲಾದ ಸೈಕ್ಲಿಂಗ ಟ್ರ್ಯಾಕ್ ಸೈಕ್ಲಿಂಗ್ ಪಂಟರುಗಳಿಗೆ ಸವಾಲು ಹಾಕುವಂತೆ ನಿರ್ಮಿಸಲಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಸೈಕ್ಲಿಸ್ಟ್ ಗಳಿಗೆ ಮೂಲಭೂತ ಸೌಕರ್ಯ,ಊಟೋಪಚಾರ, ವಸತಿ, ಸಾರಿಗೆ ವ್ಯವಸ್ಥೆಯಲ್ಲಿ ಕೊರತೆಯಾಗದಂತೆ ಹಾಗೂ ಅವರ ಮನರಂಜನೆಗಾಗಿ ಪ್ರತಿದಿನ ಸಾಯಂಕಾಲ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆ ಮಾಡುವುದರ ಮೂಲಕ ಅಬಾಲವೃದ್ಧರನ್ನು ಸೆಳೆವುದರಲ್ಲಿ ಯಶಸ್ವಿಯಾದವು.

17ನೇ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಟ್ರ್ಯಾಕ್ ಅದ್ಭುತವಾಗಿದೆ. ಸೈಕ್ಲಿಂಗ್ ಮಜಾ ನೀಡಿತು. ರಾಷ್ಟ್ರೀಯ ಮಟ್ಟದ ಸ್ಪರ್ಧೆ ಜಿಲ್ಲೆಯಲ್ಲಿ ಆಯೋಜಿಸುತ್ತಿರುವುದು ಸಂತೋಷ ತಂದಿದೆ. ಕಳೆದ ವರ್ಷದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದೆ. ಈ ವರ್ಷದ ಸ್ಪರ್ಧೆಯಲ್ಲಿ ಕರ್ನಾಟಕ ಸೈಕ್ಲಿಂಗ್ ಅಸೋಸಿಯೇಷನ್ ನೆರವಿನೊಂದಿಗೆ ಚಿನ್ನದ ಪದಕ ಗೆಲ್ಲಲು ಛಲದೊಂದಿಗೆ ಸತತ ಪ್ರಯತ್ನದಿಂದಲೇ ಸಾಧ್ಯವಾಯಿತು ಎಂದು ಮೈಸೂರಿನ ಕ್ಯಾರಿನ್ ಮಾರ್ಷಲ್ ಸಂತಸ ಹಂಚಿಕೊಂಡರು.ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ಸ್ಪರ್ಧೆಗಾಗಿ ಕಳೆದ ಒಂದು ತಿಂಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇನೆ. ಫೆ.19ರಂದು ನಡೆದ 16 ವರ್ಷದೊಳಗಿನವರ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದೇನೆ. ಮುಂಬರುವ ಸ್ಫರ್ಧೆಯು ರಾಜ್ಯದಲ್ಲಿ ನಡೆಯುವುದಾದರೆ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲೆಯ ಕಡಕೊಳ ಗ್ರಾಮದ ಪವಿತ್ರಾ ಕುರ್ತಕೋಟಿ ಅನುಭವ ಹಂಚಿಕೊಂಡರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com