ರಾಜ್ಯದಲ್ಲಿ ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. 2021 ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಯು ಜುಲೈ 7 ಮತ್ತು ಜುಲೈ 8 ರಂದು ನಡೆಯಲಿದೆ. ದ್ವಿತೀಯ ಪಿಯುಸಿ ಮತ್ತು ಸಿಬಿಎಸ್ಸಿ 12 ನೇ ತರಗತಿಯ ಪರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸಿಇಟಿ ಪರೀಕ್ಷೆಯ ವೇಳಾಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.
ಸಿಇಟಿ ಪರೀಕ್ಷಾ ವೇಳಾಪಟ್ಟಿ
ಜುಲೈ7 2021 ಬುಧವಾರ (ಜೀವವಿಜ್ಞಾನ) - ಬೆಳಗ್ಗೆ 10.30ರಿಂದ 11.50 ರವರೆಗೆ
ಜುಲೈ7 2021 ಬುಧವಾರ (ಗಣಿತ) – ಮಧ್ಯಾಹ್ನ 2.30ರಿಂದ 3.50 ರವರೆಗೆ
ಜುಲೈ8 2021 ಗುರುವಾರ (ಭೌತ ವಿಜ್ಞಾನ) - ಬೆಳಗ್ಗೆ 10.30ರಿಂದ 11.50 ರವರೆಗೆ
ಜುಲೈ8 2021 ಗುರುವಾರ (ರಸಾಯನವಿಜ್ಞಾನ) - ಮಧ್ಯಾಹ್ನ 2.30ರಿಂದ 3.50 ರವರೆಗೆ
ಜುಲೈ9 2021 ಶುಕ್ರವಾರ (ಕನ್ನಡ ) - ಬೆಳಗ್ಗೆ 11.30ರಿಂದ 12.30 ರವರೆಗೆ ಬೆಂಗಳೂರಿನಲ್ಲಿ ಮಾತ್ರಾ ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ - ಮೇ 24 ರಿಂದ ಜೂನ್ 10 ರವರೆಗೆ ನಡೆಯಲಿದೆ. ಹಾಗೆಯೇ ಸಿಬಿಎಸ್ 12 ನೇ ತರಗತಿ ಪರೀಕ್ಷೆ – ಮೇ 4 ರಿಂದ ಜೂನ್ 2, ನೀಟ್ – ಜುಲೈನಲ್ಲಿ ನಡೆಯಲಿದೆ. ಹೀಗೆ ಇನ್ನಿತರೆ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ಸಿಇಟಿ ಪರೀಕ್ಷಾ ವೇಳಾಪಟ್ಟಿ ತಯಾರಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದಲ್ಲಿ ಪಶುವೈದ್ಯ, ಕೃಷಿ ವಿಜ್ಞಾನ, ಎಂಜೀನಿಯರಿಂಗ್, ಯೋಗ ಸೇರಿದಂತೆ ಇನ್ನಿತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ.