ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಕೊಡಗಿನಲ್ಲಿ ಆಲಿಕಲ್ಲು ಮಳೆ, ಬೆಂಗಳೂರಿನ ಹಲವೆಡೆ ಅಕಾಲಿಕ ಮಳೆ

ಈ ಕುರಿತು ಮಾತನಾಡಿದ ರೈತ ರುದ್ರಪ್ಪ (72ವರ್ಷ) ಅವರು ತಾನು ಜೀವಮಾನದಲ್ಲಿ ಇಷ್ಟೊಂದು ಆಲಿಕಲ್ಲು ಬಿದ್ದಿದ್ದನ್ನು ನೋಡೇ ಇಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಬೆಳಿಗ್ಗೆ 11 ಘಂಟೆಗೆ ಆರಂಭಗೊಂಡ ಆಲಿಕಲ್ಲು ಸಹಿತ ಮಳೆ ಒಂದುವರೆ ಘಂಟೆ ಸುರಿದಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಕೊಡಗಿನಲ್ಲಿ ಆಲಿಕಲ್ಲು ಮಳೆ, ಬೆಂಗಳೂರಿನ ಹಲವೆಡೆ ಅಕಾಲಿಕ ಮಳೆ

ಕೊಡಗು ಜಿಲ್ಲೆಯ ಸೋಮುವಾರಪೇಟೆ ತಾಲೂಕಿನ ಶನಿವಾರಸಂತೆಯ ಸುತ್ತಮುತ್ತ ಶುಕ್ರವಾರ ಅಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಅದರಲ್ಲೂ ಶನಿವಾರಸಂತೆ ಸಮೀಪದ ಅಂಕನಳ್ಳಿಯಲ್ಲಿ ಭಾರೀ ಗಾತ್ರದ ಆಲಿಕಲ್ಲು ಸಹಿತ ಮಳೆ ಆಗಿದ್ದು ರಸ್ತೆ ಮೇಲೆ ಅರ್ಧ ಅಡಿಯಷ್ಟು ಅಲಿಕಲ್ಲುಗಳು ಬಿದ್ದಿದ್ದನ್ನು ನೂರಾರು ಗ್ರಾಮಸ್ಥರು ಮೊಬೈಲ್‌ ಗಳಲ್ಲಿ ಸೆರೆ ಹಿಡಿದಿದ್ದಾರೆ.

ಈ ಕುರಿತು ಮಾತನಾಡಿದ ರೈತ ರುದ್ರಪ್ಪ (72ವರ್ಷ) ಅವರು ತಾನು ಜೀವಮಾನದಲ್ಲಿ ಇಷ್ಟೊಂದು ಆಲಿಕಲ್ಲು ಬಿದ್ದಿದ್ದನ್ನು ನೋಡೇ ಇಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಬೆಳಿಗ್ಗೆ 11 ಘಂಟೆಗೆ ಆರಂಭಗೊಂಡ ಆಲಿಕಲ್ಲು ಸಹಿತ ಮಳೆ ಒಂದುವರೆ ಘಂಟೆ ಸುರಿದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂದು ಸುಮಾರು ಒಂದುವರೆ ಇಂಚಿನಷ್ಟು ಮಳೆ ಸುರಿದಿದ್ದು ಇದರಿಂದ ಕಾಳು ಮೆಣಸು ಬೆಳೆಗೆ ಹಾನಿಯಾಗಿದೆ ಎಂದು ಮತ್ತೊಬ್ಬ ರೈತ ಬಸವರಾಜು ಹೇಳಿದರು. ಕಾಳು ಮೆಣಸಿಗೆ ಈಗ ಕೊಯ್ಲಿನ ಸಮಯವಾಗಿದ್ದು ಬಳ್ಳಿಯಲ್ಲಿದ್ದ ಮೆಣಸು ಕೆಳಕ್ಕೆ ಬಿದ್ದಿದೆ, ಈಗ ಕಾಳುಮೆಣಸಿಗೂ ಬೆಲೆ ಕೆಜಿಗೆ 330 ರೂಪಾಯಿಗಳಿಗೆ ಕುಸಿದಿದೆ. ಈ ಸಂದರ್ಭದಲ್ಲಿ ಬೆಳೆಗೂ ಹಾನಿ ಆದರೆ ರೈತರ ಬದುಕು ಕಷ್ಟ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲೂ ಮಳೆ

ಬೆಂಗಳೂರಿನ ಜಯನಗರ, ಬಸವನಗುಡಿ, ಕತ್ರಿಗುಪ್ಪೆ, ಚಾಮರಾಜಪೇಟೆ, ಬನಶಂಕರಿ, ಆರ್ ಆರ್ ನಗರ, ಮಲ್ಲೇಶ್ವರಂ ಭಾಗದಲ್ಲಿ ಇಂದು ಮಧ್ಯಾಹ್ನದಿಂದ ಮೋಡ ಆವರಿಸಿದ್ದು ಅಲ್ಲಲ್ಲಿ ಮಳೆಯಾದ ಕುರಿತು ವರದಿ ಆಗಿದೆ. ಕರಾವಳಿ, ಮಲೆನಾಡಿನ ಕೆಲವು ಭಾಗಗಳಲ್ಲಿ ನಿನ್ನೆಯಿಂದ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗದಲ್ಲಿ ಫೆ. 21ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯಾದ್ಯಂತ ಹಲವೆಡೆ ಇನ್ನೆರಡು ದಿನ ಅಕಾಲಿಕ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com