ನಾಜೀ಼ ಆಡಳಿತದ ನೀತಿಯನ್ನು RSS ಮುಂದುವರೆಸಿದರೆ ಮುಂದೇನಾಗಬಹುದೋ ಎಂಬ ಆತಂಕವಿದೆ - ಕುಮಾರಸ್ವಾಮಿ

ಆರ್ ಎಸ್ ಎಸ್ ಹುಟ್ಟಿದ್ದು ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಎಂದು ಚರಿತ್ರಾಕಾರರು ಹೇಳುತ್ತಾರೆ. ಆ ನೀತಿಗಳನ್ನೆ ಮುಂದುವರೆಸಿಕೊಂಡು ಬಿಟ್ಟರೆ ಮುಂದೇನಾಗುತ್ತದೆ ಎಂದು ಕೆಲವರಲ್ಲಿ ಆತಂಕವಿದೆ, ಎಂದು RSS ವಿರುದ್ದ HDK ಕಿಡಿ ಕಾರಿದ್ದಾರೆ.
ನಾಜೀ಼ ಆಡಳಿತದ ನೀತಿಯನ್ನು RSS ಮುಂದುವರೆಸಿದರೆ ಮುಂದೇನಾಗಬಹುದೋ ಎಂಬ ಆತಂಕವಿದೆ - ಕುಮಾರಸ್ವಾಮಿ

ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡದೇ ಇರುವ ವ್ಯಕ್ತಿಗಳ ಮನೆಯನ್ನು ಗುರುತು ಮಾಡಿಕೊಳ್ಳಲಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು ಬಹಿರಂಗಪಡಿಸಿದ್ದಾರೆ. ಈಗಿನ ಕೇಂದ್ರ ಸರ್ಕಾರದ ಆಡಳಿತವನ್ನು ಹಿಟ್ಲರ್‌ ಆಡಳಿತಕ್ಕೆ ಹೋಲಿಸಿ ಟ್ವೀಟ್‌ ಮಾಡಿದ್ದಾರೆ.

“ರಾಮಮಂದಿರಕ್ಕಾಗಿ ಹಣ ಸಂಗ್ರಹ ಮಾಡುತ್ತಿರುವವರು ಹಣ ಕೊಟ್ಟವರ ಕೊಡದವರ ಮನೆಗಳನ್ನು ಗುರುತು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಿಟ್ಲರ್ ಕಾಲದಲ್ಲಿ ನಾಜಿ ಮತ್ತು ಯೆಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ಗೊತ್ತಿಲ್ಲ ಇದು ಎಲ್ಲಿಗೆ ಹೋಗುತ್ತೆ ಎಂಬುದು, ಯಾತಕ್ಕೆ ಮನೆಗಳನ್ನು ಗುರುತು ಮಾಡುತ್ತಿದ್ದಾರೆ?,” ಎಂದು ಪ್ರಶ್ನಿಸಿದ್ದಾರೆ.

ಆರ್ ಎಸ್ ಎಸ್ ಹುಟ್ಟಿದ್ದು ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಎಂದು ಚರಿತ್ರಾಕಾರರು ಹೇಳುತ್ತಾರೆ. ಆ ನೀತಿಗಳನ್ನೆ ಮುಂದುವರೆಸಿಕೊಂಡು ಬಿಟ್ಟರೆ ಮುಂದೇನಾಗುತ್ತದೆ ಎಂದು ಕೆಲವರಲ್ಲಿ ಆತಂಕವಿದೆ, ಎಂದು RSS ವಿರುದ್ದ ಕಿಡಿ ಕಾರಿದ್ದಾರೆ.

ದೇಶದಲ್ಲಿ ಮಾತಾಡುವಂತಹ ಮೂಲಭೂತ ಹಕ್ಕನ್ನೆ ಕಸಿಯುತ್ತಿದ್ದಾರೆ.ಸ್ವತಂತ್ರವಾಗಿ ಯಾರೂ ಭಾವನೆಗಳನ್ನೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಘೋಷಿತ ತುರ್ತು ಪರಿಸ್ಥಿತಿ ಇದೆ. ಯಾರೊಬ್ಬರೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ನಾಳೆ ಬೆಳಗ್ಗೆ ಮಾಧ್ಯಮಗಳು ಸರ್ಕಾರ ಭಾವನೆಗಳನ್ನು ಎತ್ತಿಹಿಡಿದರೆ ನಿಮಗೇನಾಗುತ್ತೋ ಗೊತ್ತಿಲ್ಲ ನನಗೆ. ಇನ್ನೂ ಜನಸಾಮಾನ್ಯರೆ ಪರಿಸ್ಥಿತಿ ಏನು? ವಾತಾವರಣವನ್ನು ನೋಡಿದಾಗ ದೇಶದಲ್ಲಿ ಏನು ಬೇಕಾದರೂ ಆಗಬಹುದು, ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com