ʼಸನಾತನಿಗಳುʼ ಊಳಿಗಮಾನ್ಯ ಪದ್ಧತಿ ಪುನಃ ತರಲು ಹೊರಟಿದ್ದಾರೆ: ಕೃಷಿ ಕಾನೂನು ವಿರುದ್ಧ ಯತೀಂದ್ರ ವಾಗ್ದಾಳಿ

ತಮ್ಮನ್ನು ತಾವು ಸನಾತನಿಗಳು ಎಂದು ಕರೆದುಕೊಳ್ಳುತ್ತಿರುವ ಬಿಜೆಪಿಗರು ಕರಾಳ ಕಾನೂನು ಮೂಲಕ ಊಳಿಗಮಾನ್ಯ ಕಾಲದ ಪದ್ಧತಿಗಳನ್ನು ಮತ್ತೆ ತರಲು ಹೊರಟಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ
ʼಸನಾತನಿಗಳುʼ ಊಳಿಗಮಾನ್ಯ ಪದ್ಧತಿ ಪುನಃ ತರಲು ಹೊರಟಿದ್ದಾರೆ: ಕೃಷಿ ಕಾನೂನು ವಿರುದ್ಧ ಯತೀಂದ್ರ ವಾಗ್ದಾಳಿ
349946853048101

ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಹೋರಾಟ ರಾಜಕೀಯ ಹೋರಾಟ ಅಲ್ಲ, ರಾಜಕೀಯ ಅಧಿಕಾರಕ್ಕಾಗಿ ಮಾಡುತ್ತಿರುವ ಹೋರಾಟವೂ ಅಲ್ಲ. ಇದು ಜನರ ಪರವಾಗಿ ಮಾಡುತ್ತಿರುವ ಹೋರಾಟ. ಜನರ ಜೀವನ ಸುಧಾರಣೆಗಾಗಿ ಮಾಡುತ್ತಿರುವ ಹೋರಾಟ ಎಂದು ವರುಣಾ ಕ್ಷೇತ್ರ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಕೃಷಿ ಕಾನೂನುಗಳ ಕುರಿತಂತೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆ ಮೂಲಕ ಪ್ರತಿಕ್ರಿಯಿಸಿದ ಅವರು, ತಮ್ಮನ್ನು ತಾವು ಸನಾತನಿಗಳು ಎಂದು ಕರೆದುಕೊಳ್ಳುತ್ತಿರುವ ಬಿಜೆಪಿಯವರು ಕರಾಳ ಕಾನೂನು ಮೂಲಕ ಊಳಿಗಮಾನ್ಯ ಕಾಲದ ಪದ್ಧತಿಗಳನ್ನು ಮತ್ತೆ ತರಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಜೀವನವನ್ನು ಹಾಗೂ ನಮ್ಮ ದೇಶದ ಕೃಷಿ ವ್ಯವಸ್ಥೆಯನ್ನು ಹಾಳುಮಾಡಲು ಹೊರಟಿದೆ ಅದರ ವಿರುದ್ಧ ಮಾಡುತ್ತಿರುವ ಹೋರಾಟ. ರೈತ ವಿರೋಧಿ ಕಾಯ್ದೆ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವಂತಹ ಹೋರಾಟ.ನಾವು ನ್ಯಾಯಬದ್ದವಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅನುಮತಿ ಕೇಳಿದರೆ ಜಿಲ್ಲಾಢಳಿತ ಮತ್ತು ತಾಲ್ಲೂಕು ಆಡಳಿತ ಅನುಮತಿಯನ್ನು ನೀಡದೆ ನಮ್ಮ ಹೋರಾಟದ ಹಕ್ಕನ್ನು ಮೊಟಕುಗೊಳಿಸುವ ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸರ್ವಾಧಿಕಾರ ನಡೆಸುತ್ತಿದೆ, ಅದೇ ರೀತಿ ಮೈಸೂರು ಜಿಲ್ಲಾಢಳಿತ ಹಾಗೂ ನಂಜನಗೂಡು ತಾಲ್ಲೂಕು ಆಡಳಿತ ಕೂಡ ಸರ್ವಾಧಿಕಾರ ನಡೆಸುತ್ತಿದೆ ಇದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ರೈತರ ಮೂರು ಕೃಷಿ ಕಾಯ್ದೆಗಳಲ್ಲಿರುವ ಮುಖ್ಯ ಅಂಶ ಏನೆಂದರೆ ಎಪಿಎಂಸಿ ಗಳನ್ನು ಮುಚ್ಚುವುದು.ಆದರೇ ಸರ್ಕಾರ ಹೇಳುತ್ತಿದೆ ನಾವು ಎಪಿಎಂಸಿಯನ್ನು ಮುಚ್ಚುವುದಿಲ್ಲ, ಎಪಿಎಂಸಿಗಳು ಎಂದಿನಂತೆಯೇ ನಡೆಯುತ್ತವೆ. ರೈತರು ಎಪಿಎಂಸಿಯಲ್ಲಿಯೂ ಮಾರಾಟ ಮಾಡಬಹುದು , ಹೊರಗಡೆಯೂ ಮಾರಾಟ ಮಾಡಬಹುದು ಎಂದು ಹೇಳುತ್ತಾರೆ. ಆದರೆ ಅದು ವಾಸ್ತವವಾಗಿ ಸತ್ಯಕ್ಕೆ ದೂರವಾದ ಮಾತು. ಏಕೆಂದರೆ ಎಪಿಎಂಸಿಗಳಲ್ಲಿ ಸೆಸ್ ಚಾರ್ಜ್ ಮಾಡ್ತಾರೆ ಶೇಕಡ ೧.೫ ರಿಂದ ಶೇಕಡ ೨ ಸೆಸ್ ಹಾಕುತ್ತಾರೆ, ಈ ರೀತಿ ತೆರಿಗೆ ಹಾಕಿದ್ದಾಗ ಯಾವುದೇ ಖರೀದಿದಾರರು ಎಪಿಎಂಸಿ ಮಾರುಕಟ್ಟೆಗೆ ಬಂದು ಖರೀದಿ ಮಾಡುವುದಿಲ್ಲ.ಎಪಿಎಂಸಿ ಮಾರುಕಟ್ಟೆ ಹೊರಗೆ ಖರೀದಿ ಮಾಡಲು ಶುರುಮಾಡುತ್ತಾರೆ. ಆಗ ವ್ಯಾಪಾರಗಳು ನಡೆಯದೆ ಇದ್ದಾಗ , ಎಪಿಎಂಸಿಗಳು ನಿಧಾನವಾಗಿ ಒಂದಾದ ಮೇಲೆ ಒಂದು ಮುಚ್ಚಿಕೊಳ್ಳಲು ಶುರುಮಾಡುತ್ತವೆ.ಒಂದು ಕಡೆ ಹೇಳ್ತಾರೆ ನಾವು ಎಪಿಎಂಸಿ ಮುಚ್ಚಲ್ಲ ಅಂತ ಆದರೇ ಎಪಿಎಂಸಿ ಮುಚ್ಚುವುದಕ್ಕೆ ಏನು ವ್ಯವಸ್ಥೆ ತರಬೇಕೋ ಅದನ್ನು ತರಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯವರ ಹುನ್ನಾರ ಏನಿದೆ ಎಂಬುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಬಾಯಿಬಿಟ್ಟು ಹೇಳಿದ್ದಾರೆ, ಎಪಿಎಂಸಿಗಳನ್ನು ಮುಚ್ಚೊದಕ್ಕೆ ಇದು ಸಕಾಲ ಅಂತ. ಮೇಲ್ನೋಟಕ್ಕೆ ಅವರು ಎಪಿಎಂಸಿ ಮುಚ್ಚದೆಹೊದರು ನಿಧಾನಕ್ಕೆ ಅವರು ತರುತ್ತಿರುವ ಕಾಯ್ದೆಗಳ ಪರಿಣಾಮ ಎಪಿಎಂಸಿಗಳು ಶಾಶ್ವತವಾಗಿ ಮುಚ್ಚಿ ಹೋಗುತ್ತವೆ. ಈಗಾಗಲೇ ಎಪಿಎಂಸಿಗಳು ಕಡಿಮೆ ಇವೆ , ಅವುಗಳು ಮುಚ್ಟಿಹೋದರೇ ರೈತರು ಎಲ್ಲಿಗೆ ಹೋಗಬೇಕು ಎಂಬುದನ್ನು ರೈತರೇ ಅರ್ಥಮಾಡಿಕೊಳ್ಳಬೇಕು.ಅವರು ಆವಾಗ ಪೂರ್ತಿಯಾಗಿ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳು,ವ್ಯಾಪಾರಸ್ತರ ದಾಕ್ಷಿಣ್ಯಕ್ಕೆ ಒಳಗಾಗುತ್ತಾರೆ. ಪ್ರಾರಂಭದಲ್ಲಿ ರೈತರು ಎಪಿಎಂಸಿಗಳಿಗೆ ಹೋಗುವುದನ್ನು ತಪ್ಪಿಸಲು ದೊಡ್ಡ ದೊಡ್ಡ ವ್ಯಾಪಾರಸ್ತರು ರೈತರಿಗೆ ಹೆಚ್ಚು ಹಣವನ್ನು ನೀಡಿ ಖರೀದಿಸುತ್ತಾರೆ. ಆವಾಗ ಎಪಿಎಂಸಿ ಮುಚ್ಚಿಹೋಗುತ್ತದೆ. ಯಾವಾಗ ರೈತರು ಸಂಪೂರ್ಣವಾಗಿ ಈ ಉದ್ದಿಮೆದಾರರ ದಾಕ್ಷಿಣ್ಯಕ್ಕೆ ಒಳಗಾಗುತ್ತಾರೋ ಅವಾಗ ನಿಧಾನವಾಗಿಒಂದೊಂದಾಗಿ ತಮ್ಮ ನಿಜಬಣ್ಣ ತೋರಲು ಶುರುಮಾಡುತ್ತಾರೆ. ಎಪಿಎಂಸಿ ಇಲ್ಲದ ಕಾರಣ ಉದ್ದಿಮೆದಾರರು ರೈತರ ಬೆಳೆಗಳಿಗೆ ಕಡಿಮೆ ಹಣ್ಣ ನೀಡಲು ಮುಂದಾಗುತ್ತಾರೆ,ಅವಾಗ ರೈತರು ವಿಧಿಯಿಲ್ಲದೇ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಟ ಮಾಡಬೇಕಾಗುತ್ತದೆ ಅವಾಗ ರೈತರಿಗೆ ನಷ್ಟ ಉಂಟಾಗುತ್ತದೆ. ರೈತರು ತಮ್ಮ ಬೆಳೆಗಳನ್ನು ಎಲ್ಲಿಬೇಕಾದರೂ ಹೋಗಿ ಮಾರಾಟ ಮಾಡಬಹುದೆಂದು ಹೇಳ್ತಾರೆ, ಇದರಿಂದ ಏನು ಪ್ರಯೋಜನ. ರೈತರು ಬೆಳೆಯನ್ನು ಬೆಳೆದು ಕಟಾವು ಮಾಡುವುದಕ್ಕೆ ಸಾಲ ಮಾಡಿಕೊಂಡಿರುತ್ತಾರೆ ಅಂತಹದರಲ್ಲಿ ಬೇರೆ ಕಡೆ ಸಾರಿಗೆ ಮೂಲಕ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಹಣ ಇರುತ್ತಾ? ಇಷ್ಟೆಲ್ಲಾ ತೊಡಕುಗಳು ಇದ್ದರು ಸಹ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಇಂತಹ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೇಹಲಿಯಲ್ಲಿ ಎಪ್ಪತ್ತೈದಕ್ಕೂ ಹೆಚ್ಚು ದಿನಗಳಿಂದ ಮೈಕೊರೆಯುವ ಚಳಿಯಲ್ಲಿ ಕುಳಿತು ರೈತರು ಪ್ರತಿಭಟನೆ ಮಾಡುತ್ತಿದ್ದಾರೇ ಅವರೇನು ಪೆದ್ದರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಅವರ ಕಸುಬುಗಳ ಬಗ್ಗೆ ಅವರಿಗೆ ಜ್ಞಾನ ಇಲ್ಲವಾ.ರೈತರಿಗೆ ಬುದ್ಧಿ ಹೇಳ್ತಾರೆ ನೀವು ತಪ್ಪು ತಿಳಿದುಕೊಂಡಿದ್ದಿರ ಅಂತ. ತಮ್ಮ ಕೆಲಸದ ಬಗ್ಗೆ ಅವರಿಗೆ ಜ್ಞಾನ ಇಲ್ಲ ಅಂತೇಳುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ಅವಮಾನ ಮಾಡುತ್ತಿದೆ. ಪ್ರತಿಭಟನೆ ಮಾಡುತ್ತಿರುವವರನ್ನು ಯಾವ್ಯಾವ ರೀತಿ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆಂದರೇ,ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಸುತ್ತಿದ್ದಾರೆ.ಅವರನ್ನು ಖಲೀಸ್ತಾನಿಗಳು ಅಂತಾರೇ , ದೇಶದ್ರೋಹಿಗಳು ಅಂತಾರೇ ಭಯೋತ್ಪಾದಕರು ಅಂತಾರೇ. ನಮ್ಮ ರಾಜ್ಯದ ಕೃಷಿ ಮಂತ್ರಿನೇ ಪ್ರತಿಭಟನೆ ಮಾಡುತ್ತಿರುವವರು ಭಯೋತ್ಪಾದಕರು ಎಂದು ಹೇಳಿಕೆ ಕೊಟ್ಟಿದ್ದಾರೆ.ಕೇಂದ್ರ ಸರ್ಕಾರದ ಮಂತ್ರಿಗಳು ಕೂಡ ಇದೇ ರೀತಿ ಹೇಳಿಕೆ ಕೊಟ್ಟಿದ್ದಾರೆ. ತನ್ನದೇ ದೇಶದ ಪ್ರಜೆಗಳನ್ನ,ರೈತರನ್ನ ಭಯೋತ್ಪಾದಕರು ಅಂತ ಕರೆದಿರುವ ರಾಷ್ಟ್ರ ವಿಶ್ವದಲ್ಲಿ ಯಾವುದಾದರುಇದ್ದರೇ ಅದು ಭಾರತ ಮಾತ್ರ. ದೇಶದ ಜನರು,ರೈತರು ಪ್ರತಿಭಟನೆ ನಡೆಸಿದರೆ ಸರ್ಕಾರ ಕಿವಿಗೊಡಬೇಕು,ಅವರ ಬಳಿಗೆಹೋಗಿ ಸಮಸ್ಯೆ ಆಲಿಸಿ ಪರಿಹರಿಸಬೇಕು,ಆದರೇ ಪ್ರಧಾನಮಂತ್ರಿಗಳು ಆ ಕೆಲಸ ಮಾಡದೆ ರೈತರ ಪ್ರತಿಭಟನೆ ಹತ್ತಿಕ್ಕಲು ಮುಂದಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಪ್ರತಿ ಭಾನುವಾರ ಮನ್ ಕೀ ಬಾತ್ ಅಂತ ರೇಡಿಯೋದಲ್ಲಿ ಮಾತನಾಡುತ್ತಾರೆ.ಒಮ್ಮೆ ಆದರೂ ರೈತರ ಬಗ್ಗೆ ಮಾತನಾಡಲಿಲ್ಲ.ಬದಲಾಗಿ ತಾವು ತಂದಿರುವಂತಹ ಕಾಯ್ದೆಗಳು ಬಹಳ ಚೆನ್ನಾಗಿವೆ,ರೈತರೇ ತಪ್ಪುದಾರಿಗಿಳಿದಿದ್ದಾರೆ ಅಂತೇಳಿ ಮತ್ತೆ ರೈತರ ಮೇಲೆ ತಪ್ಪನ್ನು ಹೊರೆಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಒಬ್ಬ ಪ್ರಧಾನಿ ಪತ್ರಿಕಾಗೋಷ್ಠಿಯನ್ನು ಮಾಡದೆ, ಚಳವಳಿ ಮಾಡುತ್ತಿರುವ ರೈತರನ್ನು ಕೂಡ ಮಾತನಾಡಿಸದೆ ಈ ರೀತಿ ಮೌನಕ್ಕೆ ಶರಣಾಗಿರೋದು ಇತಿಹಾಸದಲ್ಲಿ ಎಲ್ಲೂ ಇಲ್ಲ.ಹಾಗಾಗಿ ಮೋದಿ ಅಂತ ಹೇಡಿ ಪ್ರಧಾನಿ ಇತಿಹಾಸದಲ್ಲಿ ಈ ದೇಶದಲ್ಲಿ ಯಾವತ್ತು ಬಂದಿರಲಿಲ್ಲ. ಕರ್ನಾಟಕದಲ್ಲಿ ಭೂ ಸುಧಾರಣೆ ಕಾಯ್ದೆ ತಂದು ರೈತರು ತಮ್ಮ ಭೂಮಿನಾ ಮಾರಿಕೊಳ್ಳುವಂತೆ ಮಾಡುತ್ತಾರೆ,ಇನ್ನೊಂದು ಕಡೆ ಎಪಿಎಂಸಿ ಕಾಯ್ದೆ ಜಾರಿಗೆ ತಂದು ರೈತರಿಗೆ ಬರುವ ವರಮಾನ ಕಡಿಮೆ ಮಾಡುವ ಮೂಲಕ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದಿದ್ದಾರೆ.

ಈ ಮೊದಲು ರೈತರಲ್ಲದವರು , ಕೃಷಿಕರಲ್ಲದವರು,ಇಪ್ಪತ್ತೈದು ಲಕ್ಷಕ್ಕಿಂತ ಹೆಚ್ಚು ವರಮಾನ ಹೊಂದಿರುವವರು ಕೃಷಿ ಭೂಮಿಯನ್ನು ಖರೀದಿಸುವಂತಿರಲ್ಲಿಲ್ಲ, ಇದನ್ನೆಲ್ಲ ದಿ.ಡಿ ದೇವರಾಜ ಅರಸರು ಜಾರಿಗೆ ತಂದಿದ್ದು ಯಾತಕ್ಕೆ ? ನಿಜವಾದ ರೈತರಿಗೆ ಭೂಮಿ ಸಿಗಬೇಕು ಎಂಬ ಕಾರಣಕ್ಕೆ. ಆದರೆ ಇವತ್ತು ಬಿಜೆಪಿ ಸರ್ಕಾರ ರೈತರಿಂದ ಕೃಷಿ ಭೂಮಿನಾ ಕಿತ್ತು ಬಂಡವಾಳಶಾಹಿಗಳ ಕೈಗೆ ನೀಡುತ್ತಿದ್ದಾರೆ. ತನ್ನ ಭೂಮಿಯನ್ನು ಮಾರಿಕೊಂಡ ರೈತ ಇದೆ ಬಂಡವಾಳಶಾಹಿಗಳ ಬಳಿ ಕೂಲಿ ಆಳುಗಳಾಗಿ ಕೆಲಸ ಮಾಡಬೇಕಾಗುತ್ತದೆ. ಬಿಜೆಪಿಯವರು ಈ ಎಲ್ಲ ಕರಾಳ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಹಿಂದಿನ ಕಾಲದ ಊಳಿಗಮಾನ್ಯ ಪದ್ದತಿಯನ್ನು ತರಲು ಹೊರಟಿದ್ದಾರೆ. ಬಿಜೆಪಿಯವರು ಯಾವಾಗಲೂ ತಮ್ಮನ್ನು ತಾವು ಸನಾತನಿಗಳು ಅಂತ ಹೇಳಿಕೊಳ್ಳುತ್ತಾರೆ. ಸನಾತನಿಗಳು ಅಂದರೇ ಯಾರು? ಸಾವಿರಾರು ವರ್ಷಗಳ ಹಿಂದೆ ಇದ್ದಂತಹ ಪದ್ಧತಿಗಳನ್ನು ಜಾರಿಗೆ ತರುವವರು. ಹಿಂದೆ ಇದ್ದಂತಹ ಶೋಷಣೆ ಪದ್ಧತಿಯನ್ನು ಜಾರಿಗೆ ತರಲು ಬಿಜೆಪಿಯವರು ಹೊರಟಿದ್ದಾರೆ ಹಾಗಾಗಿ ಈ ಎಲ್ಲ ಹುನ್ನಾರಗಳ ವಿರುದ್ಧ ಜನರು ಜಾಗೃತರಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com