ಬೀದಿಯಲ್ಲಿ ರೈತರನ್ನು ನೋಡುವಾಗ ಹೊಟ್ಟೆ ಉರಿಯುತ್ತೆ: ಶಿವರಾಜ್‌ಕುಮಾರ್

ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡುವಾಗೆಲ್ಲಾ ಹೊಟ್ಟೆ ಉರಿಯುತ್ತೆ. ರೈತರಿಗೆ ನಮ್ಮ ಬೆಂಬಲ ಖಂಡಿತಾ ಇದ್ದೇ ಇರುತ್ತೆ -ಶಿವರಾಜ್‌ಕುಮಾರ್
ಬೀದಿಯಲ್ಲಿ ರೈತರನ್ನು ನೋಡುವಾಗ ಹೊಟ್ಟೆ ಉರಿಯುತ್ತೆ: ಶಿವರಾಜ್‌ಕುಮಾರ್

ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ ಕನ್ನಡದ ಹಿರಿಯ ನಟ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅನುಕಂಪ ತೋರಿಸಿದ್ದಾರೆ.

ʼಯಾರೂ ಹೋರಾಟದ ಬಗ್ಗೆ ಕಾಮೆಂಟ್ ಮಾಡುತ್ತಿಲ್ಲ ಅಂತಿದ್ದಾರೆ. ಆದರೆ ನಾವು ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿಗೆ ಇಳಿಯೋದರಿಂದ ಏನೂ ಸಾಧ್ಯವಾಗುವುದಿಲ್ಲ. ಹಾಗೇ ಸಾಧ್ಯವಾಗುವುದಿದ್ದರೆ ನಾವು ಬೀದಿಗಿಳಿಯಲು ಸಾಧ್ಯ. ಅದು ಸರ್ಕಾರದಿಂದ ಮಾಡೋಕಷ್ಟೇ ಸಾಧ್ಯʼ ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡುವಾಗೆಲ್ಲಾ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗುತ್ತಿಲ್ಲ.. ನಮ್ಮ ಕೈಯಲ್ಲಿ ಏನೂ ಇಲ್ಲ. ರೈತರಿಗೆ ನಮ್ಮ ಬೆಂಬಲ ಖಂಡಿತಾ ಇದ್ದೇ ಇರುತ್ತೆ. ಆದರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ. ಆದ್ರೆ ಅಧಿಕಾರ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೀದಿಯಲ್ಲಿ ರೈತರನ್ನು ನೋಡುವಾಗ ಹೊಟ್ಟೆ ಉರಿಯುತ್ತೆ: ಶಿವರಾಜ್‌ಕುಮಾರ್
ಅಂಬಾನಿ ಪ್ರಾರಂಭಿಸುವ 5G ಬಹುದೊಡ್ಡ ಹಗರಣ; ದರ್ಶನ್ ಮಾತಿನ ತಾತ್ಪರ್ಯವೇನು?

ಶಿವರಾಜ್‌ಕುಮಾರ್‌ ರೈತ ಹೋರಾಟ ಪರ ಮಾತನಾಡುವುದು ಇದೇ ಮೊದಲಲ್ಲ. ದೆಹಲಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ ಆರಂಭದ ದಿನದಲ್ಲೇ ಶಿವರಾಜ್‌ಕುಮಾರ್‌ ಅವರು ಟ್ವೀಟ್‌ ಮುಖಾಂತರ ಬೆಂಬಲ ಸೂಚಿಸಿದ್ದರು. ‌"ರೈತ ದೇಶದ ಬೆನ್ನೆಲುಬು , ರೈತ ಇದ್ರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ" ಎಂದು ಶಿವರಾಜ್‌ಕುಮಾರ್‌ ಪ್ರತಿಕ್ರಿಯಿಸಿದ್ದರು.

ಅಂತರಾಷ್ಟ್ರೀಯ ಪಾಪ್‌ ತಾರೆ ರಿಹಾನ್ನ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿ ಮಾಡಿದ ಒಂದು ಟ್ವೀಟ್‌ ಬಳಿಕ ಬಾಲಿವುಡ್‌ ನಟ-ನಟಿಯರು ರೈತ ಹೋರಾಟದ ಪರ-ವಿರೋಧ ನಿಲುವು ವ್ಯಕ್ತಪಡಿಸಿದ್ದರು. ಕನ್ನಡದ ನಟರು ಕೂಡಾ ಬಹಿರಂಗವಾಗಿ ತಮ್ಮ ನಿಲುವು ವ್ಯಕ್ತಪಡಿಸಬೇಕೆಂದು ಅಭಿಮಾನಿಗಳು, ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದ್ದರು.

ಇದುವರೆಗೆ ಕನ್ನಡ ಸಿನಿಮಾ ರಂಗದಲ್ಲಿ ನಟ ಚೇತನ್‌, ಕಿರಣ್‌, ನಿರ್ದೇಶಕರಾದ ಬಿ. ಸುರೇಶ್‌, ಜಯತೀರ್ಥ, ಮಂಸೋರೆ, ಕಥೆಗಾರ ದಯಾನಂದ ಟಿಕೆ, ಗೀತರಚನೆಕಾರ ಕವಿರಾಜ್‌ ಮೊದಲಾದವರು ರೈತ ಹೋರಾಟಕ್ಕೆ ಬೆಂಬಲ ನೀಡಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com