ಆರ್ಥಿಕ ದಿವಾಳಿತನ: ಶಾಂತಿನಗರ TTMC ಅಡವಿಟ್ಟ ಬಿಎಂಟಿಸಿ

ಕಳೆದ ಒಂದು ವರ್ಷದಿಂದ ಬಿಎಂಟಿಸಿಯು ತನ್ನ ನೌಕರರ ಸಂಬವನ್ನು ಪಾವತಿಸಲು ಹೆಣಗಾಡುತ್ತಿದೆ. ಕರೋನಾ ಸಂಕಷ್ಟ ಹಾಗೂ ಪ್ರಯಾಣಿಕರ ಕೊರತೆಯಿಂದ ಬಿಎಂಟಿಸಿ ಇನ್ನಷ್ಟು ನಷ್ಟವನ್ನು ಎದುರಿಸುತ್ತಿದೆ.
ಆರ್ಥಿಕ ದಿವಾಳಿತನ: ಶಾಂತಿನಗರ TTMC ಅಡವಿಟ್ಟ ಬಿಎಂಟಿಸಿ

ರಾಜ್ಯ ಸರ್ಕಾರದ ಆರ್ಥಿಕ ದೀವಾಳಿತನ RTI ಮೂಲಕ ಬಹಿರಂಗವಾಗಿದೆ. BMTCಯ ಸಾಲದ ಹೊರೆಯನ್ನು ತಪ್ಪಿಸಲು, ಶಾಂತಿನಗರ ಟಿಟಿಎಂಸಿ ಕಟ್ಟಡವನ್ನೇ ಬ್ಯಾಂಕಿನಲ್ಲಿ ಅಡವಿಡಲಾಗಿದೆ.

ಮಂಡ್ಯ ಮೂಲದ ಆನಂದ್‌ ಎಂಬವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಬಿಎಂಟಿಸಿಯು ಅಕ್ಟೋಬರ್‌ 2019 ರಿಂದ ಫೆಬ್ರುವರಿ 2021ರ ಅವಧಿಯವರೆಗೆ ಕೆನರಾ ಬ್ಯಾಂಕಿನಿಂದ ರೂ. 160 ಕೋಟಿ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನವಾಗಿ ಇರಿಸಲಾಗಿದೆ. ಈ ಸಾಲಕ್ಕೆ ಬಡ್ಡಿಯಾಗಿ ಪ್ರತೀ ತಿಂಗಳು ರೂ. 1.4 ಕೋಟಿಯನ್ನು ಬಿಎಂಟಿಸಿಯು ಬ್ಯಾಂಕಿಗೆ ಪಾವತಿಸುತ್ತಿದೆ, ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಏಳು ಎಕರೆ ಪ್ರದೇಶದಲ್ಲಿರುವ ಶಾಂತಿನಗರ ಟಿಟಿಎಂಸಿ ಕಟ್ಟಡವು, ಒಂದು ಬಸ್‌ ಸ್ಟ್ಯಾಂಡ್‌, ವಾಣಿಜ್ಯ ಸಂಕೀರ್ಣ ಹಾಗೂ ಪಾರ್ಕಿಂಗ್‌ ಪ್ರದೇಶವನ್ನು ಒಳಗೊಂಡಿದೆ. ಈ ಕಟ್ಟಡವನ್ನು ನರ್ಮ್‌ ಯೋಜನೆಯಡಿಯಲ್ಲಿ ರೂ. 108 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಕಳೆದ ಒಂದು ವರ್ಷದಿಂದ ಬಿಎಂಟಿಸಿಯು ತನ್ನ ನೌಕರರ ಸಂಬವನ್ನು ಪಾವತಿಸಲು ಹೆಣಗಾಡುತ್ತಿದೆ. ಕರೋನಾ ಸಂಕಷ್ಟ ಹಾಗೂ ಪ್ರಯಾಣಿಕರ ಕೊರತೆಯಿಂದ ಬಿಎಂಟಿಸಿ ಇನ್ನಷ್ಟು ನಷ್ಟವನ್ನು ಎದುರಿಸುತ್ತಿದೆ. ಕೆನರಾ ಬ್ಯಾಂಕ್‌ ಇತರ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದೆ ಬಂದ ಕಾರಣಕ್ಕಾಗಿ ಈ ನಿರ್ಧಾರ ತಾಳಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಬಿಎಂಟಿಸಿಯ ಸಿಬ್ಬಂದಿಗಳಿಗೆ ಪಿಎಫ್‌ ಅನ್ನು ಇನ್ನೂ ಪಾವತಿಸಲಾಗಿಲ್ಲ. ಈಗಾಗಲೇ ನಿವೃತ್ತಿ ಹೊಂದಿರುವ ಸಿಬ್ಬಂದಿಗಳಿಗೆ ಗ್ರಾಚುಯಿಟಿ ನೀಡಿಲ್ಲ. ಇದಕ್ಕೂ ಮಿಗಿಲಾಗಿ ಸಿಬ್ಬಂದಿಗಳ ಎಲ್‌ಐಸಿ ಪಾಲಿಸಿಯ ಬಾಖಿಯನ್ನು ಪಾವತಿಸಿಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com