ACB ಬಂಧಿಸಿದ ADTP ಬಳಿ ಪತ್ತೆಯಾಯ್ತು 120 ಲೀ ವಿದೇಶಿ ಮದ್ಯ! ಪ್ರಕರಣ ಅಬಕಾರಿ ಇಲಾಖೆಗೆ ವರ್ಗ

ಆರೋಪಿ ಬಳಿ ಲಕ್ಷಾಂತರ ಮೌಲ್ಯದ ವಿವಿಧ ಬ್ಯಾಂಡ್‌ನ ಹಲವಾರು ಮದ್ಯದ ಬಾಟಲಿಗಳು ದೊರೆತಿದ್ದು ಅಬಕಾರಿ ಇಲಾಖೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ACB ಬಂಧಿಸಿದ ADTP ಬಳಿ ಪತ್ತೆಯಾಯ್ತು 120 ಲೀ ವಿದೇಶಿ ಮದ್ಯ! ಪ್ರಕರಣ ಅಬಕಾರಿ ಇಲಾಖೆಗೆ ವರ್ಗ

ಲಂಚ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಅವರ ಕಾರಿನಿಂದ ಬಿಬಿಎಂಪಿ ನಗರ ಯೋಜನೆ ಇಲಾಖೆಗೆ ಸೇರಿದ ಸುಮಾರು 50 ಕ್ಕೂ ಹೆಚ್ಚು ಕಡತಗಳು, ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನ ಸೀಲು, ಕಛೇರಿ ಸೀಲು 7.40 ಲಕ್ಷಕ್ಕೂ ನಗದು ಪತ್ತೆಯಾಗಿದ್ದು ಮುಂದಿನ ವಿಚಾರಣೆ ಸಲುವಾಗಿ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು ನಗರದ ನಿವಾಸಿಯೊಬ್ಬರಿಂದ 20 ಲಕ್ಷ ಲಂಚ ಪಡೆಯುತ್ತಿದ್ದ ಸಂಧರ್ಭದಲ್ಲಿ ಫೆಬ್ರವರಿ 5 ರಂದು ಎಸಿಬಿ ಅಧಿಕಾರಿಗಳು ಬೊಮ್ಮನಹಳ್ಳಿ ವಲಯದ ಎಡಿಟಿಪಿ ದೇವೇಂದ್ರಪ್ಪರನ್ನು ಬಂಧಿಸಿದ್ದರು, ವಿಚಾರಣೆ ಸಂಧರ್ಭದಲ್ಲಿ ಆರೋಪಿಯ ಬಳಿ ಬೆಲೆ ಬಾಳುವ ಕಾರುಗಳು, ವಿವಿಧ ಬ್ಯಾಂಕ್‌ ಅಕೌಂಟ್‌ಗಳು, ಎಫ್.ಡಿ, ನಗದು ದೊರೆತಿದ್ದು ಇದರ ಕುರಿತಂತೆ ಪ್ರತ್ಯೇಕ ತನಿಖೆ ನಡೆಸುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ACB ಬಂಧಿಸಿದ ADTP ಬಳಿ ಪತ್ತೆಯಾಯ್ತು 120 ಲೀ ವಿದೇಶಿ ಮದ್ಯ! ಪ್ರಕರಣ ಅಬಕಾರಿ ಇಲಾಖೆಗೆ ವರ್ಗ
20 ಲಕ್ಷ ಲಂಚದೊಂದಿಗೆ ಬಿಬಿಎಂಪಿ ADTPಯನ್ನು ವಶಕ್ಕೆ ಪಡೆದ ಎಸಿಬಿ

ಅಲ್ಲದೆ, ಆರೋಪಿ ಬಳಿ ಲಕ್ಷಾಂತರ ಮೌಲ್ಯದ ವಿವಿಧ ಬ್ಯಾಂಡ್‌ನ ಹಲವಾರು ಮದ್ಯದ ಬಾಟಲಿಗಳು ದೊರೆತಿದ್ದು ಅಬಕಾರಿ ಇಲಾಖೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇದುವರೆಗೂ ತನಿಖೆ ಸಲುವಾಗಿ ಒಟ್ಟು 27.40 ಲಕ್ಷ ನಗದು ಹಾಗೂ 480 ಕ್ಕೂ ಹೆಚ್ಚು ಕಡತಗಳು ಹಾಗೂ ಸೀಲುಗಳ ಬಗ್ಗೆ ವಿಚಾರಣೆ ಮುಂದುವರೆದಿದೆ ಎಂದು ಎಸಿಬಿ ಹೇಳಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com