ರಸ್ತೆ ತಡೆ ಚಳವಳಿ: ರೈತರನ್ನು ವಶಕ್ಕೆ ಪಡೆದ ಪೊಲೀಸರು

ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಘೋಷಣೆ ಕೂಗಲಾಗುತ್ತಿತ್ತು. ಚಳವಳಿ ಆರಂಭಿಸಿದ ಸ್ವಲ್ಪ ಹೊತ್ತಲೇ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಚಳವಳಿ ನಿರತ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಸ್ತೆ ತಡೆ ಚಳವಳಿ: ರೈತರನ್ನು ವಶಕ್ಕೆ ಪಡೆದ ಪೊಲೀಸರು

ಕೇಂದ್ರದ ಕೃಷಿ ಕಾನೂನು ಹಾಗು ದೆಹಲಿಯ ಪ್ರತಿಭಟನಾ ನಿರತ ರೈತರ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ, ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ್ದ ಕರೆಯ ಮೇರೆಗೆ ದೇಶದಲ್ಲಿ ರೈತರು ಶಾಂತಿಯುತ ರಸ್ತೆ ತಡೆ ಚಳವಳಿಯನ್ನು ನಡೆಸುತ್ತಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯದಲ್ಲಿಯೂ ರೈತ ಸಂಘಟನೆಗಳಿಂದ ರಸ್ತೆ ತಡೆ ಚಳವಳಿ ನಡೆದಿದೆ. ಚಳವಳಿ ಆರಂಭಿಸಿದ ಸ್ವಲ್ಪ ಹೊತ್ತಲೇ ರೈತ ಮುಖಂಡ ಕುರುಬೂರು ಶಾಂತ ಕುಮಾರ್, ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ರೈತ ಮುಖಂಡರೊಂದಿಗೆ ರೈತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗ

ಬೆಂಗಳೂರಿನ ಯಲಯಂಕ ಪೊಲೀಸ್ ಠಾಣೆಯ ವೃತ್ತದ ಬಳಿ ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಹೆದ್ದಾರಿಯಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಗುತ್ತಿತ್ತು. ದೆಹಲಿ ರೈತರ ಮೇಲಾಗುತ್ತಿರುವ ದಬ್ಬಾಳಿಕೆ ಮತ್ತು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಘೋಷಣೆ ಕೂಗಲಾಗುತ್ತಿತ್ತು. ಚಳವಳಿ ಆರಂಭಿಸಿದ ಸ್ವಲ್ಪ ಹೊತ್ತಲೇ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಚಳವಳಿ ನಿರತ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಚಳವಳಿಯನ್ನು ಮುಂದುವರೆಸಿದ್ದರು.

ವಿಜಯಪುರ

ಹಾಸನ

ಮೈಸೂರಿನಲ್ಲಿ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದ ರೈತರನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ

ರಾಜ್ಯದಲ್ಲಿ ಕಲಬುರಗಿ, ಹಾಸನ, ಶಿವಮೊಗ್ಗ, ವಿಜಯಪುರ, ದಾವಣಗೆರೆ, ರಾಯಚೂರು ಸೇರಿದಂತೆ ಹಲವೆಡೆ ದೇಶದ ರೈತಮುಖಂಡರು ಕರೆ ನೀಡಿದ ರಸ್ತೆ ತಡೆ ಚಳವಳಿಗೆ ಬೆಂಬಲ ಸೂಚಿಸಿ ಹೆದ್ದಾರಿಗಳಲ್ಲಿ ಚಳವಳಿ ನಡೆಸಿ ಕೇಂದ್ರ ಸರ್ಕಾರದಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಖಂಡಿಸಿದ್ದಾರೆ.

ದಾವಣಗೆರೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com