ರೈತ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ವಾಕ್ ಸ್ವಾತಂತ್ರ್ಯವನ್ನು ಕಸಿಯುತ್ತಿರುವ ವಿದ್ಯಾಮಾನಗಳನ್ನು ಟೀಕಿಸಿದ ಅಂತರಾಷ್ಟ್ರೀಯ ಸೆಲೆಬ್ರಿಟಿಗಳಿಗೆ ಭಾರತದ ಕ್ರಿಕೆಟ್ ಆಟಗಾರರು ಹಾಗೂ ಚಲನಚಿತ್ರ ತಾರೆಯರು ಒಗ್ಗಟ್ಟಿನ ಮಂತ್ರ ಪಠಿಸುವ ಪ್ರಯತ್ನ ನಡೆಸಿದ್ದರು. ಇದು ದೇಶದಾದ್ಯಂತ ಟೀಕೆಗೆ ಒಳಗಾಗಿತ್ತು. ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಏಕೆ ಮೌನವಾಗಿದ್ದರು ಎಂದು ಜನಸಾಮಾನ್ಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗ ಕನ್ನಡ ಚಿತ್ರರಂಗದ ನಟ ಚೇತನ್ ಅವರು, ಕ್ರಿಕೆಟ್ ತಾರೆಗಳ ವಿರುದ್ದ ಕಿಡಿ ಕಾರಿದ್ದಾರೆ. ಈವರೆಗೆ ಚಿತ್ರ ನಟರು ಮಾತ್ರ ಸ್ವಾರ್ಥಿ ಹಾಗೂ ಹೇಡಿಗಳಾಗಿದ್ದರು, ಈಗ ಆ ಜವಾಬ್ದಾರಿಯನ್ನು ನಿಭಾಯಿಸಲು ಕ್ರಿಕೆಟ್ ಆಟಗಾರರೂ ಮುಂದೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಚೆಂಡಿನೊಂದಿಗೆ ಆಡಲು ಮೆದುಳು ಅಥವಾ ಹೃದಯದ ಅಗತ್ಯವಿಲ್ಲ ಎಂಬ ವಿಚಾರ ನಮಗೂ ಗೊತ್ತಿದೆ, ಎಂದವರು ಹೇಳಿದ್ದಾರೆ.