ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ ಬೆಳಗಾವಿ ಮೂಲದ ಆಶಾ ಕಾರ್ಯಕರ್ತೆ ಸಾವು

ತೀವ್ರ ವಾಂತಿ ಹಾಗೂ ತಲೆನೋವಿನಿಂದ ಬಳಲುತ್ತಿದ್ದ ಅವರನ್ನು ಜನವರಿ 30 ರಂದು ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ(IMS) ಗೆ ದಾಖಲಿಸಲಾಗಿತ್ತು
ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ ಬೆಳಗಾವಿ ಮೂಲದ ಆಶಾ ಕಾರ್ಯಕರ್ತೆ ಸಾವು
Gorodenkoff Productions OU

ಜನವರಿ 22 ರಂದು ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ ಆಶಾ ಕಾರ್ಯಕರ್ತೆಯೊಬ್ಬರು ಬುಧವಾರ (ಫೆ. 3) ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮೃತ ಆಶಾ ಕಾರ್ಯಕರ್ತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕೋವಿಡ್ ವ್ಯಾಕ್ಸಿನೇಷನ್‌ನಿಂದಾಗಿ ಸಾವು ಸಂಭವಿಸಿಲ್ಲ ಎಂದು AEFI ಸಮಿತಿ ಹೇಳಿರುವುದಾಗಿ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ ಬೆಳಗಾವಿ ಮೂಲದ ಆಶಾ ಕಾರ್ಯಕರ್ತೆ ಸಾವು
ಕೋವಿಡ್ ಲಸಿಕೆ ಸಾವು: ಸರ್ಕಾರದ ಗುಟ್ಟು, ವಿಶ್ವಾಸಾರ್ಹತೆಗೆ ಪೆಟ್ಟು!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತೀವ್ರ ವಾಂತಿ ಹಾಗೂ ತಲೆನೋವಿನಿಂದ ಬಳಲುತ್ತಿದ್ದ ಅವರನ್ನು ಜನವರಿ 30 ರಂದು ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ(IMS) ಗೆ ದಾಖಲಿಸಲಾಗಿತ್ತು. ಬಳಿಕ KLE ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಕೋವಿಡ್‌ ಲಸಿಕೆ ಹಾಕಿಸಿಕೊಂಡ ಬಳಿಕ ಮರಣ ಹೊಂದಿರುವ ಮೂರನೆಯ ಪ್ರಕರಣ ಇದಾಗಿದ್ದು, ಈ ಹಿಂದೆ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಇಂತಹದ್ದೇ ಪ್ರಕರಣ ಬಯಲಿಗೆ ಬಂದಿತ್ತು ಎಂದು ಡೆಕ್ಕನ್‌ ಹೆರಾಲ್ಡ್ ವರದಿ ಹೇಳಿದೆ.

ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ ಬೆಳಗಾವಿ ಮೂಲದ ಆಶಾ ಕಾರ್ಯಕರ್ತೆ ಸಾವು
ನಾರ್ವೆ: ಫೈಝರ್‌ ಲಸಿಕೆ ಹಾಕಿಸಿಕೊಂಡ 23 ಮಂದಿ ಮೃತ್ಯು

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com