ರೈತ ವಿರೋಧಿ ಕಾಯ್ದೆ -ದೆಹಲಿಯ ರೈತ ಹೋರಾಟ ಬೆಂಬಲಿಸಿ ಕರ್ನಾಟಕ ರೈತರಿಂದ “ರಸ್ತೆತಡೆ ಚಳವಳಿ”

ರಾಜ್ಯದಲ್ಲಿಯೂ ರೈತ, ದಲಿತ, ಕಾರ್ಮಿಕ, ಐಕ್ಯಹೋರಾಟದ ವತಿಯಿಂದ ನಾಳೆ 12ಗಂಟೆಯಿಂದ 2 ಗಂಟೆ ತನಕ ಬೆಂಗಳೂರು ಯಲಹಂಕ ಪೊಲೀಸ್ ಠಾಣೆ ಬಳಿ ಇರುವ ವೃತ್ತದಲ್ಲಿ ಹೆದ್ದಾರಿ ರಸ್ತೆ ಬಂದ್ ಚಳವಳಿ ನಡೆಸುವ ಮೂಲಕ ದೇಶದ ರೈತರ ರಸ್ತೆ ತಡೆ ಚಳವಳಿಗೆ ಕರ್ನಾಟಕದ ರೈತ ಸಂಘಟನೆಗಳು ಬೆಂಬಲ ಕೊಟ್ಟಿವೆ
ರೈತ ವಿರೋಧಿ ಕಾಯ್ದೆ -ದೆಹಲಿಯ ರೈತ ಹೋರಾಟ ಬೆಂಬಲಿಸಿ ಕರ್ನಾಟಕ ರೈತರಿಂದ “ರಸ್ತೆತಡೆ ಚಳವಳಿ”

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರಸರಕಾರ ಪೊಲೀಸ್ ಬಲದ ಮೂಲಕ ಸಾಕಷ್ಟು ಕಿರುಕುಳ ನೀಡುತ್ತಿದೆ, ಕೇಂದ್ರ ಸರ್ಕಾರ ಚಳವಳಿ ನಿರತ ರೈತರ ಜೊತೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ನೀಡುತ್ತಿದೆ, ಚಳವಳಿ ನಡೆಯುತ್ತಿರುವ ಜಾಗದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿರುವುದು ರಸ್ತೆಗಳಿಗೆ ಮುಳ್ಳುತಂತಿ ಬೇಲಿ ಹಾಕಿರುವುದು, ಇಬ್ಬಗೆ ನೀತಿ ಆಗಿದೆ ಇದರ ವಿರುದ್ಧ ದೇಶದ ರೈತರು ರಸ್ತೆ ತಡೆ ಚಳವಳಿ ನಡೆಸುತ್ತಿದ್ದಾರೆ. ಇದಕ್ಕೆ ಕರ್ನಾಟಕದ ರೈತ ಸಂಘಗಳು ಬೆಂಬಲ ಸೂಚಿಸಿ ಫೆಬ್ರವರಿ 6 ಶನಿವಾರದಂದು ರಾಜ್ಯದಲ್ಲಿ ರಸ್ತೆ ತಡೆ ಚಳವಳಿಯನ್ನು ನಡೆಸುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದರ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ರಾಷ್ಟ್ರ ಮಟ್ಟದ ಕಿಸಾನ್ ಸಂಯುಕ್ತ ಮೋರ್ಚಾ ಕರೆ ಮೇರೆಗೆ ರಾಜ್ಯದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯಹೋರಾಟದ ವತಿಯಿಂದ ನಾಳೆ 12ಗಂಟೆಯಿಂದ 2 ಗಂಟೆ ತನಕ ಬೆಂಗಳೂರು ಯಲಹಂಕ ಪೊಲೀಸ್ ಠಾಣೆ ಬಳಿ ಇರುವ ವೃತ್ತದಲ್ಲಿ ಹೆದ್ದಾರಿ ರಸ್ತೆ ಬಂದ್ ಚಳವಳಿ ನಡೆಸುವ ಮೂಲಕ ದೇಶದ ರೈತರ ರಸ್ತೆ ತಡೆ ಚಳವಳಿಗೆ ಕರ್ನಾಟಕದ ರೈತ ಸಂಘಟನೆಗಳು ಬೆಂಬಲ ಕೊಟ್ಟಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಜಿಲ್ಲೆಗಳು,

ರಾಮನಗರ

ಮಂಡ್ಯ

ಮೈಸೂರು ಚಾಮರಾಜನಗರ.

ಚಿಕ್ಕಬಳ್ಳಾಪುರ

ಕೋಲಾರ

ತುಮಕೂರು ಚಿತ್ರದುರ್ಗ

ಬಳ್ಳಾರಿ

ಬೆಳಗಾವಿ

ಧಾರವಾಡ

ಗುಲ್ಬರ್ಗ

ರಾಯಚೂರು

ಗದಗ

ಹಾವೇರಿ

ಬೀದರ್

ಕೊಪ್ಪಳ

ಶಿವಮೊಗ್ಗ

ಹಾಸನ

ದಾವಣಗೆರೆ

ಬೆಂಗಳೂರು ಗ್ರಾಮಾಂತರ

ಯಲಹಂಕ

ಉತ್ತರ ಕನ್ನಡ ಬಾಗಲಕೋಟೆ

ಕೇಂದ್ರ ಸರ್ಕಾರ ರೈತರ ಮೇಲೆ ದಮನಕಾರಿ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿ ಮತ್ತು ಕೃಷಿ ಮಸೂದೆಗಳನ್ನು ವಾಪಾಸ್‌ ಪಡೆಯುವಂತೆ ಆಗ್ರಹಿಸಿ ಫೆಬ್ರವರಿ 6 ಶನಿವಾರದಂದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್‌ ಮಾಡುವ ಮೂಲಕ ಕರ್ನಾಟಕದ ರೈತರು ರಸ್ತೆ ತಡೆ ಚಳವಳಿಯನ್ನು ಹಮ್ಮಿಕೊಂಡಿದ್ದೇವೆ. ಸಂಯುಕ್ತ ಹೋರಾಟ-ಕರ್ನಾಟಕ ಅಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ರೈತರು ರಸ್ತೆ ತಡೆ ಚಳವಳಿ ನಡೆಸಲಿದ್ದು, ರಾಜ್ಯದಲ್ಲಿರುವ ಎಲ್ಲಾ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಚಳುವಳಿ ನಡೆಯುತ್ತದೆ.ಫೆಬ್ರವರಿ 6 ರಂದು ನಡೆಯುವ ರಸ್ತೆತಡೆ ಚಳವಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಯನ್ನು ಖಂಡಿಸುತ್ತಾರೆ. ರೈತ ವಿರೋಧಿ ಮಸೂದೆಗಳ ವಿರುದ್ಧ ಘೋಷಣೆ ಕೂಗಲಿದ್ದಾರೆಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com