ರಾಜ್ಯ
20 ಲಕ್ಷ ಲಂಚದೊಂದಿಗೆ ಬಿಬಿಎಂಪಿ ADTPಯನ್ನು ವಶಕ್ಕೆ ಪಡೆದ ಎಸಿಬಿ
ಕಾಮಗಾರಿ ಪೂರ್ಣಗೊಂಡ ಕಟ್ಟಡಕ್ಕೆ ಸಂಬಂಧಿಸಿದಂತೆ ಓ.ಸಿ (ಆಕ್ಯುಪೆನ್ಸಿ ಸರ್ಟಿಫಿಕೇಟ್) ನೀಡಲು ಆರೋಪಿತ ಎಡಿಟಿಪಿ ದೇವೇಂದ್ರಪ್ಪ 40 ಲಕ್ಷ ಬೇಡಿಕೆ ಇಟ್ಟಿರುವುದಾಗಿ ವ್ಯಕ್ತಿಯೊಬ್ಬರು ಎಸಿಬಿಗೆ ದೂರು ನೀಡಿದ್ದರು
ಬೆಂಗಳೂರು ನಗರದ ನಿವಾಸಿಯೊಬ್ಬರಿಂದ 20 ಲಕ್ಷ ಲಂಚ ಪಡೆಯುತ್ತಿದ್ದ ಸಂಧರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಬೊಮ್ಮನಹಳ್ಳಿ ವಲಯದ ಎಡಿಟಿಪಿಯನ್ನು (ನಗರ ಯೋಜನೆ ಸಹಾಯಕ ನಿರ್ದೇಶಕರು) ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಮಗಾರಿ ಪೂರ್ಣಗೊಂಡ ಕಟ್ಟಡಕ್ಕೆ ಸಂಬಂಧಿಸಿದಂತೆ ಓ.ಸಿ (ಆಕ್ಯುಪೆನ್ಸಿ ಸರ್ಟಿಫಿಕೇಟ್) ನೀಡಲು ಆರೋಪಿತ ಎಡಿಟಿಪಿ ದೇವೇಂದ್ರಪ್ಪ 40 ಲಕ್ಷ ಬೇಡಿಕೆ ಇಟ್ಟಿರುವುದಾಗಿ ವ್ಯಕ್ತಿಯೊಬ್ಬರು ಎಸಿಬಿಗೆ ದೂರು ನೀಡಿದ್ದರು.
ದೂರುದಾರರ ದೂರಿನ ಆಧಾರದ ಮೇರೆಗೆ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯ ವೇಳೆ ದೂರುದಾರರಿಂದ 20 ಲಕ್ಷ ಲಂಚದ ಹಣವನ್ನು ದೇವೇಂದ್ರಪ್ಪ ಪಡೆಯುತ್ತಿದ್ದಂತೆಯೇ ಎಸಿಬಿ ಅಧಿಕಾರಿಗಳು ದೇವೇಂದ್ರಪ್ಪರನ್ನು ಬಂಧಿಸಿ, ಲಂಚದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರೆಯುತ್ತಿದೆ ಎಂದು ಎಸಿಬಿ ತಿಳಿಸಿದೆ.